ದುಬೈ, ನವೆಂಬರ್ ೨೨: ಎರೆಡು ದಿನಗಳ ಹಿಂದೆ ಕುಂದಾಪುರದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದವರಿಗೆ ಅಂತಿಮ ನಮನ ನೀಡುವ ನಿಟ್ಟಿನಲ್ಲಿ ದುಬೈ ಮುಸ್ಲಿಂ ಜಮಾತ್ ಶೋಕಸಭೆಯೊಂದನ್ನು ಏರ್ಪಡಿಸಿತ್ತು. ಶನಿವಾರ ರಾತ್ರಿ ಸುಮಾರು ಒಂಭತ್ತೂವರೆಗೆ ಸಂಘಟನೆಯ ಇನ್ನೂರಕ್ಕೂ ಹೆಚ್ಚು ಸದಸ್ಯರು ಹಾಜರಾಗಿ ಮಡಿದವರಿಗೆ ಶೃದ್ಧಾಂಜಲಿ ಸಲ್ಲಿಸಿ ಅಗಲಿದವರ ಮನೆಯವರಿಗೆ ಶೋಕವನ್ನು ಭರಿಸಲು ಅಲ್ಲಾಹನು ಶಕ್ತಿ ನೀಡುವಂತೆ ಪ್ರಾರ್ಥಿಸಿದರು.
ಸಭೆಯಲ್ಲಿ ಸಂಘಟನೆಯ ಹಿರಿಯ ಸದಸ್ಯರು ಮಾತನಾಡಿ ಈ ಹೊತ್ತಿನಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಕರ್ತ್ಯವ್ಯವಾಗಿದ್ದು ಒಗ್ಗಟ್ಟಿನಿಂದಿರಲು ಕರೆ ನೀಡಿದರು.
ಇಸ್ಲಾಂ ಧರ್ಮದಲ್ಲಿ ವಿವರಿಸಿರುವ ಧ್ಯೇಯಗಳನ್ನು ಪರಿಪಾಲಿಸುವುದರ ಮೂಲಕ ನಾವು ಒಬ್ಬರನ್ನೊಬ್ಬರು ಹೆಚ್ಚು ಗೌರವದಿಂದ ಕಾಣಬಹುದಾಗಿದೆ, ಇಸ್ಲಾಂ ಪ್ರವಚನಗಳ ಸರಿಯಾದ ಅನುಸರಿಸುವಿಕೆಯಿಂದ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಬಹುದು ಎಂದು ಇಸ್ಲಾಮಿಕ್ ವಿದ್ವಾಂಸರು ತಿಳಿಸಿದರು.
ಬಕ್ರೀದ್ ಹಬ್ಬ ಅನತಿ ದಿನಗಳ ಅಂತರದಲ್ಲಿಯೇ ಇದ್ದು ಶಾಂತಿ ಕಾಪಾಡುವುದು ಹಿಂದೆಂದಿಗಿಂತಲೂ ಇಂದು ಹೆಚ್ಚು ಅಗತ್ಯವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಶಾಂತಿ ಕಾಪಾಡುವಲ್ಲಿ ಸಹಕರಿಸಬೇಕೆಂದು ಅವರು ಆಗ್ರಹಿಸಿದರು.
ಅಂತಿಮವಾಗಿ ಶೋಕಸಂದೇಶವನ್ನು ಊರಿಗೆ ರವಾನಿಸಲಾಯಿತು. ಹಾಗೂ ದುವಾ ನೆರವೇರಿಸಲಾಯಿತು.
ವರದಿ: ಅಬ್ದುಲ್ ರಹಮಾನ್ ಸಿದ್ದೀಖಿ, ಪ್ರಧಾನ ಕಾರ್ಯದರ್ಶಿ, ಬಿಎಂಜೆ, ದುಬೈ.