ದುಬೈ, ಏಪ್ರಿಲ್ ೧೩: ವಿದೇಶದಲ್ಲಿ ಅಪ್ಪಟ ಸ್ವದೇಶಿ ಆಟವಾದ ಕಬಡ್ಡಿಯ ಪಂದ್ಯಾವಳಿಯನ್ನು ಭಟ್ಕಳಮೂಲದ ಯುವಕ ಸಂಘಟನೆ ಆಯೋಜಿಸಿದೆ.
ಈ ಪಂದ್ಯಾವಳಿ ರಾಜ್ಯಮಟ್ಟದ್ದಾಗಿದ್ದು ಕೇವಲ ಹತ್ತು ತಂಡಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಪಂದ್ಯಾವಳಿಯ ಆಯೋಜಕರಾದ ಎಂ.ಕೆ. ಯಾಸಿರ್ ತಿಳಿಸಿದ್ದಾರೆ.
ಏಪ್ರಿಲ್ ೩೦, ಶುಕ್ರವಾರ ಮಧ್ಯಾಹ್ನ ಎರೆಡೂವರೆಗೆ ನಗರದ ಸೂಡಾನೀಸ್ ಕ್ಲಬ್ ಆವರಣದಲ್ಲಿ ಪ್ರಾರಂಭವಾಗುವ ಪಂದ್ಯಾವಳಿ ಸಂಜೆಯವರೆಗೂ ನಡೆಯಲಿದೆ.
ಈ ಪಂದ್ಯಾವಳಿಗೆ ಭಟ್ಕಳದ ಅಂಜುಮನ್ ಹಿರಿಯ ಪ್ರಾಥಾಮಿಕ ಶಾಲೆಯ ಶಿಕ್ಷಕರಾದ ಅಬ್ದುಲ್ ರೆಹಮಾನ್ ರವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಳೆದ ವರ್ಷ ನಡೆದ ಪಂದ್ಯಾವಳಿ ಅತ್ಯಂತ ರೋಚಕವಾಗಿದ್ದು ಕ್ರೀಡಾಪ್ರೇಮಿಗಳಿಗೆ ರಸದೌತಣವನ್ನೇ ಉಣಬಡಿಸಿತ್ತು. ಈ ವರ್ಷವೂ ಪ್ರತಿ ಪಂದ್ಯ ಹೆಚ್ಚಿನ ರೋಚಕತೆಯಿಂದ ಕೂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ ಎಂದು ಯಾಸಿರ್ ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ತಂಡವನ್ನು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ವಿವರಗಳಿಗಾಗಿ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಬಹುದು:
ಕೆ.ಎಂ. ಯಾಸಿರ್: 050 - 6251833
ಫಯಾಜ್ ಅಹ್ಮದ್: 050- 7786682