ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದೋಹಾ: ಕತರ್ ರಂಗಮಂದಿರದಲ್ಲೊಂದು ತುಳು ನಾಟಕ ಪ್ರದರ್ಶನ

ದೋಹಾ: ಕತರ್ ರಂಗಮಂದಿರದಲ್ಲೊಂದು ತುಳು ನಾಟಕ ಪ್ರದರ್ಶನ

Thu, 15 Apr 2010 03:21:00  Office Staff   S.O. News Service

ದೋಹಾ, ಏಪ್ರಿಲ್ 15: ಹಿಂದಿನ ಎಲ್ಲಾ ಪ್ರದರ್ಶನಗಳಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದ ಹಾಸ್ಯ ನಾಟಕ 'ಅಂಚಿಲ್ಲತ್ ಇಂಚಿಲ್ಲತ್' ಈಗ ದೋಹಾದ ನಾಟಕಪ್ರಿಯರನ್ನು ರಂಜಿಸಲು ಆಗಮಿಸುತ್ತಿದೆ. ಏಪ್ರಿಲ್ 30 ರಂದು ದೋಹಾ ಸಿನೇಮಾ ದಲ್ಲಿ ಈ ನಾಟಕವನ್ನು ಆಯೋಜಿಸಲಾಗಿದ್ದು ತುಳುಕೂಟ ಕತರ್ ಸಂಘಟನೆಯ ಪ್ರಮುಖ ಪ್ರಾಯೋಜಕತ್ವವನ್ನು ಪಡೆದಿದೆ.

 

 

ಈ ನಾಟಕದ ಹಿಂದಿನ ಪ್ರದರ್ಶನಗಳು ಗಲ್ಫ್ ರಾಷ್ಟ್ರಗಳ ಇತರ ನಗರದಲ್ಲೂ ನಡೆದು ಯಶಸ್ವಿಯಾಗಿದೆ. ಈಗ ದೋಹಾದ ಪ್ರದರ್ಶನವೂ ಯಶಸ್ವಿಯಾಗುವ ಭರವಸೆ ನಮಗಿದೆ ಎಂದು ತುಳು ಕೂಟದ ಅಧ್ಯಕ್ಷ ರವಿ ಶೆಟ್ಟಿಯವರು ತಿಳಿಸಿದ್ದಾರೆ. ಈ ನಾಟಕವನ್ನು ನಿರ್ವಹಿಸುತ್ತಿರುವ ಲಕುಮಿ ತಂಡದಲ್ಲಿ ಒಟ್ಟು ಇಪ್ಪತ್ತು ಕಲಾವಿದರಿದ್ದು ಮೂವರು ಮಹಿಳಾ ಕಲಾವಿದರನ್ನೂ ಹೊಂದಿದೆ. ನಾಟಕದ ಅವಧಿ ಮೂರು ಘಂಟೆಗಳು.

 

 

drama%20banner.jpg 

 

 

ಈಗಾಗಲೇ ಹೆಚ್ಚಿನ ಟಿಕೆಟ್ಟುಗಳು ಮಾರಾಟವಾಗಿದ್ದು ಕೆಲವೇ ಟಿಕೆಟ್ಟುಗಳು ಉಳಿದಿವೆ. ಟಿಕೆಟ್ಟುಗಳಿಗಾಗಿ ಈ ಕೆಳಕಂಡವರನ್ನು ಸಂಪರ್ಕಿಸಬಹುದು:

 

 1) Mr.Abdulla Monu - 5548140

2)Mr.Dineshchandra Shetty -5245034

3) Mr.Vivian D'Souza    -5823008

4) Mr.Mohan Jeppinamogaru -5906479

ನಾಟಕ ಪ್ರದರ್ಶನದಲ್ಲಿ ಕತರಿನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀಮತಿ ದೀಪಾ ಗೋಪಾಲನ್ ವಧ್ವಾ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕ್ಯಾಡೆಮೆಯ ಪೂರ್ವ ಅಧ್ಯಕ್ಷರಾದ ಸೀತಾರಾಂ ಕುಳಾಲ್, ಖ್ಯಾತ ತುಳು ಟೀವಿ ನಿರೂಪಕರಾದ ಕದ್ರಿ ನವನೀತ್ ಶೆಟ್ಟಿ ಹಾಗೂ ಭಾಸ್ಕರ ರೈ ಕುಕ್ಕುವಳ್ಳಿ ಯವರೂ ವಿಶೇಷ ಆಹ್ವಾನಿತ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ನಿರೆಲ್-2010 ಸ್ಮರಣಿಕೆಯನ್ನೂ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ವೀಡಿಯೋ ಸಿಡಿ ಯನ್ನೂ ಬಿಡುಗಡೆ ಮಾಡಲಾಗುವುದು.

 

ವರದಿ: ಇಕ್ಬಾಲ್ ಮನ್ನಾ, ದೋಹಾ ಕತರ್ 


Share: