ದುಬೈ : ಪ್ರವಾದಿ (ಸ.ಅ ) ರ ಜೀವನ ಶೈಲಿ ಅನುಸರಣೆಯಿಂದ ಇಂದಿನ ಎಲ್ಲಾ ಬಿಕ್ಕಟ್ಟಿ ಗೆ ಪರಿಹಾರ ಕಾಣಲು ಸಾಧ್ಯ ಎಂದು ಝಿಯಾವುಸ್ಸುನ್ನ ಅಮ್ಜದೀಸ್ ಅಸ್ಸೋಸಿಯೇಶನ್ ನ ದುಬೈ ಘಟಕ ದ ಅಧ್ಯಕ್ಷ ಕಲಂದರ್ ಶಾಫಿ ಅಮ್ಜದಿ ಕೊಡಗು ಅಭಿಪ್ರಾಯಪಟ್ಟರು.ಅವರು ಝಿಯಾವುಸ್ಸುನ್ನ ಅಮ್ಜದೀಸ್ ಅಸ್ಸೋಸಿಯೇಶನ್ ನ ದುಬೈ ಘಟಕ ದ ವತಿಯಿಂದ ನಡೆದ ಮೀಲಾದ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಅಶ್ರಫ್ ರಝಾ ಅಮ್ಜದಿ ಪುತ್ತೂರು ಕಲ್ಲಿಕೊಟೆಯಲ್ಲಿ ನಡೆಯಲಿರುವ ಅಂತರಾಷ್ಟ್ರ ಮೀಲಾದ್ ಸಮ್ಮೇಳನವನ್ನು ಸಾರ್ವಜನಿಕರು ವಿಜಯಗೊಳಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಲೇಖಕ ರಫೀಕ್ ಜೌಹರಿ ಅಳಿಕೆ,ಶರೀಫ್ ತಿಂಗಲಾಡಿ,ಸಮದ್ ಅಮ್ಜದಿ ಕೇರಳ,ಅಸ್ಲಮ್ ಖಾನ್ ಉಪ್ಪಳ, ಆದಮ್ ಪುತ್ತೂರು ಉಪಸ್ಥಿತರಿದ್ದರು. ಎಂದು ಝಿಯಾಉಸ್ಸುನ್ನ ಅಮ್ಜದೀಸ್ ಅಸ್ಸೋಸಿಯೆಶನ್ ನ ದುಬೈ ಘಟಕ ದ ಕಾರ್ಯದರ್ಶಿ ಪಿ.ಎ ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಪತ್ರಿಕಾ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.
ಪಿ.ಎ ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ, ದುಬೈ