ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಮಂಗಳೂರು ತಂಡಕ್ಕೆ ಗೆಲುವು

ದುಬೈ: ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಮಂಗಳೂರು ತಂಡಕ್ಕೆ ಗೆಲುವು

Tue, 02 Feb 2010 18:35:00  Office Staff   S.O. News Service

ದುಬೈಯ ಮಮ್ಜಾರ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ಮಂಗಳೂರು ಕ್ರಿಕೆಟ್ ಕ್ಲಬ್ ಮತ್ತು ಪುತ್ತೂರು ಕ್ರಿಕೆಟ್ ಕ್ಲಬ್ ತಂಡಗಳ ಮದ್ಯೆ ಸೀಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ ನಡೆಯಿತು. ನಾಣ್ಯ ಚಿಮ್ಮುಗೆಯನ್ನು ಗೆದ್ದುಕೊಂಡ ಪುತ್ತೂರು ಕ್ರಿಕೆಟ್ ಕ್ಲಬ್ ಕ್ಷೇತ್ರರಕ್ಷಣೆಯನ್ನು ಆಯ್ಕೆ ಮಾಡಿಕೊಂಡಿತು. ಮಂಗಳೂರು ಕ್ರಿಕೆಟ್ ಕ್ಲಬ್ ನಿಗದಿತ ೧೫ ಓವರ್ ಗಳಲ್ಲಿ ವಿಕೆಟ್ ನಷ್ಟಕ್ಕೆ ೧೬೪ ರನ್ ಪೇರಿಸಿ ಪುತ್ತೂರು ಕ್ರಿಕೆಟ್ ಕ್ಲಬ್ ತಂಡಕ್ಕೆ ೧೬೫ ರನ್ ಗಳ ಗುರಿಯನ್ನು ನೀಡಿತು. ದೊಡ್ಡ ಮೊತ್ತದ ಗುರಿಯನ್ನು ಬೆನ್ನಟ್ಟಲು ಹೊರಟ ಪುತ್ತೂರು ಕ್ರಿಕೆಟ್ ಕ್ಲಬ್ ೧೨. ಓವರ್ ಗಳಲ್ಲಿ ೧೦೪ ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ಇದರೊಂದಿಗೆ ಮಂಗಳೂರು ಕ್ರಿಕೆಟ್ ಕ್ಲಬ್ ತಂಡವು ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.

2-dxb07.jpg

ಪಂದ್ಯ ಶ್ರೇಷ್ಟ               ಮುತಲಿಬ್ ಖಾದೆರ್                 ಮಂಗಳೂರು ಕ್ರಿಕೆಟ್ ಕ್ಲಬ್

ಉತ್ತಮ ದಾಂಡಿಗ          ನೂರ್ ಮಹಮ್ಮದ್                 ಮಂಗಳೂರು ಕ್ರಿಕೆಟ್ ಕ್ಲಬ್

ಉತ್ತಮ ಆಲ್ ರೌಂಡರ್             ಇರ್ಶಾದ್                   ಮಂಗಳೂರು ಕ್ರಿಕೆಟ್ ಕ್ಲಬ್

ಉತ್ತಮ ಎಸೆತಗಾರ       ಮಹಮ್ಮದ್ ಕಮಾಲ್                ಪುತ್ತೂರು ಕ್ರಿಕೆಟ್ ಕ್ಲಬ್

 

2-dxb02.jpg

2-dxb03.jpg

 

2-dxb05.jpg

2-dxb06.jpg

 

 

 

ಬಹುಮಾನ ವಿತರಣೆ ಕಾರ್ಯಕ್ರಮವನ್ನು ಜಕರಿಯ ಮುಲ್ಲಾರ್, ಶಕೂರ್ ಮಣಿಲ, ಸಲಾಹುದ್ದೀನ್ ಅಬ್ಬಾಸ್, ಮಹಮ್ಮದ್ ಸಾಲಿಹ್, ಮೋಹಿಯ್ದೀನ್ ಮಾಡನ್ನೂರ್, ನೂರ್ ಮೊಹಮ್ಮೆದ್, ಮಹಮ್ಮದ್ ರಫೀಕ್ ಮತ್ತು ಅದ್ದು ಅಡ್ಯಾರ್ ರವರು ನೆರವೇರಿಸಿಕೊಟ್ಟರು.

(ವರದಿ - ಅಬ್ದುಲ್ ಹಮೀದ್ ಸೀ .ಹೆಚ್, ದುಬೈ)

 


Share: