ರಿಯಾದ್ (ಸೌದಿ ಅರೇಬಿಯಾ) ನವೆಂಬರ್ 26: ದೇಶದ ವಿವಿಧೆಡೆ ನಿನ್ನೆ ಮತ್ತು ಇಂದು ಸುರಿದ ಮಳೆಯಿಂದಾಗಿ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಒಟ್ಟು ಎಪ್ಪತ್ತೇಳು ಮಂದಿ ಮೃತಪಟ್ಟಿದ್ದಾರೆಂದು ಸೌದಿ ಸರ್ಕಾರದ ಮೂಲಗಳು ತಿಳಿಸಿವೆ.
ನಿನ್ನೆ ಮಕ್ಕಾ ಮತ್ತು ಜಿದ್ದಾ ಸಹಿತ ದೇಶದ ಹಲವೆಡೆ ವ್ಯಾಪಕ ಮಳೆಯಾಗಿತ್ತು. ಇದರಿಂದಾಗಿ ಮಳೆನೀರು ರಸ್ತೆಗಳಲ್ಲಿ ನಿಂತು ವಾಹನಗಳ ಓಡಾಟಕ್ಕೆ ಅಡಚಣೆಯಾಗಿತ್ತು .
ರಸ್ತೆ ಬದಿಯ ಕೆಲ ವಾಣಿಜ್ಯ ಮಳಿಗೆಗಳ ಒಳಗೆ ನೀರು ನುಗ್ಗಿ ವ್ಯಾಪಾರಿಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಜೆದ್ದಾ ವಿಮಾನ ನಿಲ್ಧಾಣದಲ್ಲಿ ನೀರು ನಿಂತ ಕಾರಣ ವಿಮಾನ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಹೊರಡಲು ಸಾಧ್ಯವಾಗದೆ ತೊಂದರೆ ಅನುಭವಿಸಬೇಕಾಯಿತು. ಸೌದಿ ಸರ್ಕಾರ ಈ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಂಡಿದ್ದು ಇಂದು ಸಾವಿರಾರು ಟ್ಯಾಂಕರುಗಳ ಮೂಲಕ ರಸ್ತೆಯ ಮೇಲಿನ ನೀರನ್ನು ಸಂಗ್ರಹಿಸುತ್ತಿದ್ದುದು ಕಂಡು ಬಂತು.
ವರದಿ : ಅಶ್ರಫ್ ಮಂಜ್ರಾಬಾದ್.