ದುಬೈ, ಡಿಸೆಂಬರ್ 17: ನಗರದಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಕಾರ್ಯನಿರತವಾಗಿರುವ ಕನ್ನಡ ಕೂಟ ಯು.ಎ.ಇ. ಸಂಘಟನೆ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲು ಜನವರಿ 15ರ ದಿನವನ್ನು ಆಯ್ದುಕೊಂಡಿದೆ.

ಕಳೆದ ಕೆಲವು ವರ್ಷಗಳಿಂದ ನಿಯಮಿತವಾಗಿ ಸಂಕ್ರಾಂತಿ ಆಚರಿಸಿಕೊಂಡು ಬರುತ್ತಿರುವ ಕೂಟ ಈ ವರ್ಷವೂ ಸಂಭ್ರಮದಿಂದ ಆಚರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ.
ಆದರೆ ಸ್ಥಳ ಹಾಗೂ ಸಮಯವನ್ನು ಇನ್ನೂ ನಿಗದಿಪಡಿಸಿಲ್ಲ. ಶೀಘ್ರದಲ್ಲಿಯೇ ಸ್ಥಳ ಮತ್ತು ಸಮಯವನ್ನು ಪ್ರಕಟಿಸಲಾಗುವುದು ಎಂದು ಕನ್ನಡ ಕೂಟ ಯು.ಎ.ಇ. ಸದಸ್ಯರಾದ ಶ್ರೀ ಮಂಜುನಾಥ್ ಎಂ. ತಿಳಿಸಿದ್ದಾರೆ.