ಕರ್ನಾಟಕ ಸಂಘ ದುಬೈಯ ರಜತ ಮಹೊತ್ಸವದ ಸಂಭ್ರಮದ ಕಾಣಿಕೆ
ಕರ್ನಾಟಕ ಸಂಘ ದುಬೈ ಮತ್ತು ಹೃದಯವಾಹಿನಿ ಪತ್ರಿಕೆ ಜಂಟಿ ಕಾರ್ಯಕ್ರಮ. ವೈಶಿಷ್ಟಪೂರ್ಣ ಮೈಸೂರು ಅರಮನೆ ಹಿನ್ನಲೆಯಲ್ಲಿ ಬರ್ಜರಿ ವೇದಿಕೆಯಲ್ಲಿ ವಿವಿದ ಗೋಷ್ಟಿಗಳನ್ನು ಸಾದರ ಪಡಿಸಲಾಯಿತು. ಪ್ರತಿಭಾ ಪುರಸ್ಕಾರ, ವಿಶ್ವ ಮಾನವ ಪ್ರಶಸ್ತಿ ಪ್ರಧಾನ
ದುಬೈ.ನ.೨೧: ಸ್ಥಳೀಯ ಶೇಖ್ ರಾಶೀದ್ ಸಭಾಂಗಣದಲ್ಲಿ 6ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಎರಡನೇ ದಿನವಾದ ಇಂದು ವೈಶಿಷ್ಟಪೂರ್ಣ ಮೈಸೂರು ಅರಮನೆ ಹಿನ್ನಲೆಯಲ್ಲಿ ಬರ್ಜರಿ ವೇದಿಕೆಯಲ್ಲಿ ವಿವಿದ ಗೋಷ್ಟಿಗಳನ್ನು ಸಾದರ ಪಡಿಸಲಾಯಿತು ಹಾಗು. ಪ್ರತಿಭಾ ಪುರಸ್ಕಾರ ಪ್ರಶಸ್ತಿ ಮತ್ತು ವಿಶ್ವ ಮಾನವ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಉದ್ಯಮ ಗೋಷ್ಟಿ:
ಯಜ್ನ ನಾರಾಯಣ ಕಮ್ಮಾಜೆಯವರ ಅದ್ಯಕ್ಷತೆಯಲ್ಲಿ ನಡೆದ ಈ ಗೋಷ್ಟಿಯಲ್ಲಿ ದುಬೈಯ ಆಡಿಟರ್ ಶ್ರೀನಿವಾಸ್ ಆಚಾರ್ ಹಾಗು ಸ್ಪೈಸ್ ರೇಡಿಯೋದ ಹರ್ಮನ್ ಲೂಯಿಸ್ ರವರು ಪ್ರಬಂಧಿಸಿದರು
ಅನಿವಾಸಿ ಗಲ್ಫ್ ಕನ್ನಡಿಗರ ಗೊಷ್ಟಿ:
ಬಹಳ ನಿರೀಕ್ಷಿತ ಗಲ್ಫ್ ಕನ್ನಡಿಗರ ಗೊಷ್ಟಿಯು ದಕ್ಷಿಣ ಕನ್ನಡ ಉಸ್ತುವಾರೀ ಸಚಿವ ಕೃಷ್ಣ ಪಾಲಿಮಾರ್, ಸಂಸದ ಗಂಗಾಧರ ಗೌಡ, ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿಯವರ ಸನ್ನಿಧಿ ಯಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅದ್ಯಕ್ಷ ಸರ್ವೋತ್ತಮ ಶೆಟ್ಟಿಯವರ ಅದ್ಯಕ್ಷತೆ ಯಲ್ಲಿ ಜರುಗಿತು.
ಶಾರ್ಜಾ ಕರ್ನಾಟಕ ಸಂಘದ ಮಾಜಿ ಅದ್ಯಕ್ಷ ಪ್ರಭಾಕರ ಅಂಬಲತೆರೆ, ವೀರೆಂದ್ರ ದುಬೈಯವರು ಅನಿವಾಸಿ ಕನ್ನಡಿಗರ ಅದರಲ್ಲೂ ಗಲ್ಫ್ ಕನ್ನಡಿಗರ ಬವಣೆಗಳನ್ನು ಚರ್ಚಿಸಿ ಸಭಯಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಿದರು.
ಅಂಬಲತೆರೆಯವರು ಮಂಗಳೂರ್ ಏರ್ಪೋರ್ಟ್ನಲ್ಲಿ ವೈದ್ಯಕೀಯ ಸೌಲಭ್ಯ, ಗಲ್ಫ್ ಕನ್ನಡಿಗರ ಇತರ ಬೇಡಿಕೆಗಳ ಬಗ್ಗೆ ನಿವೇದಿಸಿದರು. ತಮ್ಮ ಅದ್ಯಕ್ಷ ಭಾಷಣದಲ್ಲಿ ಸರ್ವೊತ್ತಮ ಶೆಟ್ಟಿಯವರು ಇಲ್ಲಾ ಬೇಡಿಕೆಗಳನ್ನು ಕೂಡಿಕರಿಸಿ ನೆರೆದ ಸರಕಾರದ ಸಭಿಕರ ಕರತಾಡನದೊಂದಿಗೆ ಸರಕಾರದ ಪ್ರತಿನಿಧಿಗಳಿಗೆ ಮನದಟ್ಟುಮಾಡುವ ಪ್ರಯಾಸ ಮಾಡಿದರು. ಅವರು ಮಂಡಿಸಿದ ಕೆಲವು ಬವಣೆಗಳು ಹಾಗೂ ಅವುಗಳನ್ನು ನಿವಾರಿಸಲು ಬೇಡಿಕೆಗಳು ಇಂತಿವೆ
1) ರಿಯಲ್ ಎಸ್ಟೇಷ್ಟ್ ಉದ್ಯಮಗಳಿಂದ ಅನಿವಾಸಿ ಕನ್ನಡಿಗರಿಗೆ ಸುಳ್ಳು ಅಶ್ವಾಸನೆಗಳು.
2) ಸ್ಥಿರಾಸ್ಥಿಗಳಿಗೆ ನೋಟಿಸ್ ಇಲ್ಲದೆ ದಿಡೀರ್ ಮುಟ್ಟುಗೋಲು ಮತ್ತು ಸರಕಾರದಿಂದ ಅನಿವಾಸಿ ಭಾರತಿಯರ ಜಾಗಗಳನ್ನು ಕಬಳಿಸುವ ಕೆಟ್ಟ ಹವ್ಯಾಸ.
3) ಕೇಂದ್ರ ಮತ್ತು ರಾಜ್ಯ ರಾಜಕೀಯ ನೇತ್ರತ್ವದಲ್ಲಿ ಗೊಂದಲದಿಂದ ಮಲತಾಯಿ ಧೋರಣೆ.
4) ಗಲ್ಫ್ ನಲ್ಲಿ ಕಲಿತ ಮಕ್ಕಳಿಗೆ ತಾಂತ್ರಿಕ ಸಿ.ಎ.ಟಿ ಪರೀಕ್ಷೆಯಲ್ಲಿ ಪ್ರವೇಶಿಸುವ ಹಕ್ಕು
5 ಗಲ್ಫ್ ಕನ್ನಡಿಗರಿಗೆ ವಿಮಾನ ಯಾನ ದರದಲ್ಲಿ ತಾರತಮ್ಯ. ಊರು ಹತ್ತಿರವಿದ್ದರೂ ಪ್ರಯಾಣ ದುಬಾರಿ.
6) ಪ್ರಯಾಣಿಕರ ಸಾಮಾನು ಸರಂಜಾಮುಗಳಿಗೆ ಹೆಚ್ಚು ಬತ್ಯೆ
7) ಅನಿವಾಸಿ ಕನ್ನಡಿಗರಿಗೆ ಪಡಿತರ ಚೀಟಿ ಏಕೆ ಇಲ್ಲ?. ಇದರ ಬಗ್ಗೆ ತಕ್ಷಣ ಚಿಂತನೆ ಮತ್ತು ಪರಿಹಾರದ ಅಗತ್ಯ
8) ವಿಮಾನ ನಿಲ್ದಾಣದಲ್ಲಿ ಶೀಘ್ರ ಚಿಕಿತ್ಸಾಲಯ ಮತ್ತು ಅಂಬುಲೆನ್ಸ್ ಸೌಲಭ್ಯ
9) ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಅನಿವಾಸ ಕನ್ನಡಿಗರ ಸಾಧನೆಗಳಿಗೆ ಕನ್ನಡಿಯಾಗಿ ಅಂತರ್ಜಾಲ ಕಾರ್ಯಾರಂಭ
10) ಕರ್ನಾಟಕದ ಅನಿವಾಸಿ ಭಾರತೀಯ ಸೆಲ್ ನಿಂದ ಇನ್ನೂ ಹೆಚ್ಚು ಕಾರ್ಯ ಹಾಗೂ ಸೌಲಭ್ಯ ಅಗತ್ಯ
ಮಹಿಳಾ ಕವಿಗೊಷ್ಟಿ:
ಶ್ರೀಮತಿ ನೀಲಗಂಗಾ ಚರಂತಿಮಠ ಅವರ ಅದ್ಯಕ್ಷತೆಯಲ್ಲಿ ಜರುಗಿತು
ಮಾದ್ಯಮ ಗೊಷ್ಟಿ:
ಉದಯ ಟಿ.ವಿ ಯ ಶ್ರೀಧರ್ ರವರ ಅದ್ಯಕ್ಷತೆಯಲ್ಲಿ ಸಾದರಪಡಿಸಲಾದ ಈ ಗೋಷ್ಟಿಯಲ್ಲಿ ಮಹಾಬಲ ಮೂರ್ತಿ ಕೊಂಡ್ಲಕೆರೆ, ಗಲ್ಫ್ ಕನ್ನಡಿಗರಾದ ಸಾಹಿತಿ ಪತ್ರಕರ್ತ ಮನೊಹರ್ ತೊನ್ಸೆ ಹಾಗೂ ಗಣೇಶ್ ರೈ ಬಾಗವಹಿಸಿದ್ದರು
ಪ್ರತಿಭಾ ಪುರಸ್ಕಾರ:
ಪ್ರಜಾವಾಣಿ ಸುದ್ದಿ ಸಂಪಾದಕರಾದ ಇ.ವಿ.ಸತ್ಯನಾರಾಯಣರವರ ಅದ್ಯಕ್ಷತೆಯಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. ಸಮ್ಮೇಳನದ ಅಧ್ಯಕ್ಷ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರ ಉಪಸ್ಥಿತಿಯಲ್ಲಿ ನಡೆದ ಈ ಆತ್ಮೀಯ ಕಾರ್ಯಕ್ರಮ ದಲ್ಲಿ ಅದ್ಯಕ್ಷ ಸಿ.ಆರ್.ಶೆಟ್ಟಿಯವರು, ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅದ್ಯಕ್ಷ ಹಾಗೂ ಮಯೂರ ಪ್ರಶಸ್ತಿ ವಿಜೇತ ಗಣೇಶ್ ರೈ, ದೈಜಿ ದುಬೈಯ ಪ್ರಧಾನ ಸಂಪಾದಕರಾದ ವಾಲ್ಟರ್ ನಂದಲಿಕೆ, ಸ್ಥಳೀಯ ಎಫ್.ಎಮ್ ರೇಡಿಯೊ ಸಂಸ್ಥಾಪಕ ಹರ್ಮನ್ ಲುಯಿಸ್, ನೃತ್ಯ ವಿದೂಶಿ ದೂರದರ್ಶನ ಕಲಾವಿದೆ ನಮಿತಾ ಅನಂತ್, ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ ದಯಾನಂದ ಬಂಗೆರಾ, ಬಹರೈನನ ಅನಿಲ್ ಬಾಸಗಿ, ಮಸ್ಕತ್ ನ ಯೋಗಾನಂದ, ಕಾಸರಗೋಡಿನ ಶಿವರಾಮ್, ಚಿಕ್ಕಮಗಳೂರಿನ ಅಕ್ಕಿಕಾಳು ವೆಂಕಟೇಶ್, ಬಾದಾಮಿಯ ವೀರೇಶ್ ರುದ್ರಸ್ವಾಮಿ ಹಾಗೂ ಮಂಗಳೂರಿನ ವಿ.ಜಿ.ಪಾಲ್ ರವರನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಬಹರೈನ್ ಕನ್ನಡ ಸಂಘದ ಅದ್ಯಕ್ಷ ಆಸ್ಟಿನ್ ಸಂತೊಷ ರವರನ್ನು ಸನ್ಮಾನಿಸಲಾಯಿತು
ಪ್ರಶಸ್ತಿ ಪ್ರದಾನ ಮತ್ತು ಸಮಾರೊಪ
ಸ್ವಾಗತ ಸಮಿತಿ ಹಾಗೂ ಕರ್ನಾಟಕ ಸಂಘದ ಅದ್ಯಕ್ಷ ಸಿ.ಆರ್.ಶೆಟ್ಟಿಯವರು ಇಂದಿನ ಕಾರ್ಯಕ್ರಮದ ಮುಖ್ಯ ಆಕರ್ಶಣೆ ಸಿನಿಮಾ ತಾರೆ ಪುನೀತ್ ರಾಜಕುಮಾರ್ ರನ್ನು ಆದರದಿಂದ ಬರಮಾಡಿಕೊಂಡರು
ಸಮ್ಮೇಳನಾದ್ಯಕ್ಷ ಖ್ಯಾತ ಲೇಖಕ ಹಾಗೂ ಅಂಕಣಗಾರರಾದ ಡಾ.ಸಿದ್ದಲಿಂಗ ಪಟ್ಟಣ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ಮತ್ತು ವಿಶ್ವಮಾನ್ಯ ಪ್ರಶಸ್ತಿ ಪ್ರಧಾನಿಸಲಾಯಿತು.
ದುಬೈ ಕರ್ನಾಟಕ ಸಂಘಕ್ಕೆ ಪುರಸ್ಕೃತ ವಿಶ್ವಮಾನ್ಯ ಪ್ರಶಸ್ತಿಯನ್ನು ಅದ್ಯಕ್ಷ ಸಿ.ಆರ್.ಶೆಟ್ಟಿ ಯವರು ಸ್ವೀಕರಿಸಿದರು. ಹಾಗೆಯೀ ಕುವೈತ್ ತುಳುಕೂಟದ ಮಾಜಿ ಅದ್ಯಕ್ಷ ಇಲಿಯಾಸ್ ಸ್ಯಾಂಕ್ಟಸ್, ಎನ್.ಎಮ್.ಶೆಟ್ಟಿ ಬರೋಡ, ವಿ.ಆರ್.ದೇಶಪಾಂಡೆ ಟ್ರಷ್ಟ್, ಹಳಿಯಾಳ ಮತ್ತಿತ್ತರಿಗೆ ವಿಶ್ವಮಾನವ ಪ್ರಶಸ್ತಿ ವಿತರಿಸಲಾಯಿತು.
ಈ ಕಾರ್ಯಕ್ರಮವು ಸಂಸತ್ ಸದಸ್ಯ ಡಿ.ವಿ.ಸದಾನಂದ ಗೌಡ, ಪ್ರಸಿದ್ಧ ಕರ್ನಾಟಕ ಉದ್ಯಮಿಗಳಾದ ಪದ್ಮಶ್ರೀ ಡಾ.ಬಿ.ಆರ್.ಶೆಟ್ಟಿ, ಹಾಗೂ ಕರ್ನಾಟಕ ಗೃಹ ಮಂಡಳಿ ಅದ್ಯಕ್ಷ ಜಿ.ಟಿ.ದೇವೇಗೌಡ, ಶಶಿ ಎಸ್ ಶೆಟ್ಟಿ, ಶೇಕರ್ ಬಾಬು ಶೆಟ್ಟಿ, ಆರ್. ರವಿ, ಬಿ.ಆರ್.ಗೋಪಾಲ ಗೌಡ, ಪ್ರವೀಣ್ ಶೆಟ್ಟಿ, ರವೀಶ್ ಗೌಡ, ಜೇಮ್ಸ್ ಮೆನ್ಡೋನ್ಸ, ಗಿರೀಶ್ ಶೆಟ್ಟಿ, ಕೃಷ್ಣರಾಜ್ ತಂತ್ರಿ ಮಾತು ಇತರ ಗಣ್ಯರ ಮತ್ತು ಸಭಿಕರ ಸಮ್ಮುಖದಲ್ಲಿ ಜರುಗಿತು.
ರಾಜ್ಯದ ಹಲವಾರು ತಂಡಗಳು ಹಾಗೂ ಸ್ಥಳೀಯ ಪ್ರತಿಭೆಗಳು ಸಾಂಸ್ಕೃತಿಕ ಹಾಗೂ ರಸಮಂಜರಿ ಗೀತ ಮಾಧುರ್ಯ್ ಕಾರ್ಯಕ್ರಮ ನಡೆಸಿಕೊಟ್ಟರು.
ನಮಿತಾ ರಾವ್ ಮತ್ತು ಕುಶಲ ಶೆಟ್ಟಿಯವರು ಕಾರ್ಯಕ್ರಮವನ್ನು ಸಾದರಪಡಿಸಿದರು
ಕರ್ನಾಟಕ ಸಂಘದ ಅದ್ಯಕ್ಷ ಹಾಗೂ ಸ್ವಾಗತ ಸಮಿತಿ ಸಿ.ಆರ್.ಶೆಟ್ಟಿ ಹಾಗೂ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್ ರವರ ನೇತ್ರತ್ವದಲ್ಲಿ ನಡೆದ ಈ ಅದ್ದೂರಿಯ ವೈವಿದ್ಯಮಯ ಕಾರ್ಯಕ್ರಮ ಕನ್ನಡಿಗರ ಸಾಂಸ್ಕೃತಿಕ ಪತಾಕೆಯನ್ನು ಗಲ್ಫ್ನಲ್ಲಿ ಹಾರಿಸಲು ಯಶಸ್ವಿಯಾಯಿತು.
ಸೌಜನ್ಯ: ಗಲ್ಫ್ ಕನ್ನಡಿಗ