ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಮಕ್ಕಾ:ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ.

ಮಕ್ಕಾ:ಹಜ್ ಯತಾರ್ಥಿಗಳಿಗೆ ಅಣು ನಿರೋಧಕ ಕಲ್ಲುಗಳ ಪೂರೈಕೆಗೆ ಸೌದಿ ಸರ್ಕಾರದ ನಿರ್ಧಾರ.

Mon, 23 Nov 2009 02:42:00  Office Staff   S.O. News Service

ಮಕ್ಕಾ( ಸೌದಿ ಅರೇಬಿಯಾ) ನವೆಂಬರ್ ೨೨: ಮುಸ್ಲಿಮರ ಪವಿತ್ರ ಕರ್ಮವಾದ ಹಜ್ ಸಂಧರ್ಭದಲ್ಲಿ ಹೆಚ್ ಒನ್ ಎನ್ ಒನ್ ರೋಗಾಣುಗಳು ಹರಡುವುದನ್ನು ತಡೆಯಲು ಜಮ್ರಾ ಪ್ರದೇಶದಲ್ಲಿ ನಿರ್ವಹಿಸಲ್ಪಡುವ ಸಾಂಕೇತಿಕವಾಗಿ ಶೈತಾನನಿಗೆ ಕಲ್ಲು ಹೊಡೆಯುವ ಕರ್ಮದ ಸಂಧರ್ಭದಲ್ಲಿ ತೀರ್ಥಾಟಕರಿಗೆ  ಅಣುವಿಮುಕ್ತ ಕಲ್ಲುಗಳನ್ನು ನೀಡಲು ಸೌದಿ ಸರ್ಕಾರ ನಿರ್ಧರಿಸಿದೆ.

 

ಬಾರಿ ಸುಮಾರು ಮೂವತ್ತು ಲಕ್ಷ ಮಂದಿ ತೀರ್ಥಾಟಕರು ಹಜ್ ನಿರ್ವಹಿಸುತಿದ್ದು ತಲಾ ಮೂವರಿಗೆ ಒಂದರಂತೆ ಹತ್ತು ಲಕ್ಷ ಪ್ಯಾಕೆಟ್ ಕಲ್ಲುಗಳನ್ನು ವಿತರಿಸಲಾಗುವುದು. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಪೂರ್ತಿಗೊಳಿಸಲಾಗಿದ್ದು ಇದಕ್ಕಾಗಿ ಮುಜ್ದಲಿಫಾ ಪರಿಸರದಲ್ಲಿ ಮೂವತ್ತೇಳು ಪ್ರತ್ಯೇಕ ಕೌಂಟರುಗಳನ್ನು ತೆರೆಯಲಾಗಿದೆ. ಪ್ಯಾಕೆಟುಗಳಲ್ಲಿ ತಲಾ ಮೂರು ಜನರಿಗೆ ಮೂರು ದಿವಸ ಉಪಯೋಗಿಸಲು ಸಾಧ್ಯವಾಗುವಷ್ಟು ಕಲ್ಲುಗಳು ಇರುತ್ತದೆ . ಪ್ಯಾಕೆಟುಗಳನ್ನು ಮಹಮದ್ ಅಲ್ ಉಬೈದಿ ಚಾರಿಟಬಲ್ ಟ್ರಸ್ಟ್ ಉಚಿತವಾಗಿ ವಿತರಿಸಲಿದೆ ಎಂದು ಸೌದಿ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ವರದಿ: ಅಶ್ರಫ್ ಮಂಜ್ರಾಬಾದ್


Share: