ದುಬೈ, ಅ.೧೯: ಈ ವರ್ಷ ಒಟ್ಟು ೧,೬೦,೪೯೧ ಮಂದಿ ಭಾರತೀಯ ಮುಸ್ಲಿಮರು ಹಜ್ಜ್ ಯಾತ್ರೆಗಾಗಿ ಪವಿತ್ರ ನಗರ ಮಕ್ಕಾಕ್ಕೆ ಆಗಮಿಸಲಿದ್ದು, ಪ್ರಥಮ ತಂಡವು ನಾಳೆ ಬರಲಿದೆಯೆಂದು ಜಿದ್ದಾದ ಭಾರತೀಯ ದೂತಾವಾಸ ಹೇಳಿದೆ.
ಹಂದಿಜ್ವರದ ಭೀತಿಯನ್ನು ನಿಭಾಯಿಸುವಲ್ಲಿ ಸೌದಿಯ ಆರೋಗ್ಯ ಸಂಸ್ಥೆಗಳಿಗೆ ಸಹಕರಿಸಲು ೧೦ ಮಂದಿ ಭಾರತೀಯ ವೈದ್ಯರ ತಂಡವೊಂದು ಅ.೧೦ರಂದು ಅಲ್ಲಿಗೆ ತಲುಪಿದೆ. ಮಕ್ಕಾದಲ್ಲಿ ಭಾರತೀಯ ಹಜ್ಜ್ ಮಿಶನ್ ನಡೆಸುತ್ತಿರುವ ೩೦ ಹಾಸಿಗೆಗಳ ಆಸ್ಪತ್ರೆಯಲ್ಲಿ ಎರಡು ತೀವ್ರ ನಿಗಾ ಕೊಠಡಿಗಳನ್ನು ರಚಿಸಲಾಗಿದೆ. ಭಾರತೀಯ ಹಜ್ಜ್ ಸಮಿತಿಯು ಒಟ್ಟು ೧,೧೫೦೦೦ ಯಾತ್ರಾರ್ಥಿಗಳಿಗೆ ವ್ಯವಸ್ಥೆ ಮಾಡಿದ್ದು, ಉಳಿದ ೪೫,೪೯೧ ಮಂದಿ ಖಾಸಗಿ ಸಂಸ್ಥೆಗಳ ಮುಖಾಂತರ ಪ್ರಯಾಣಿಸಲಿರುವರು. ಹಜ್ಜ್ ಯಾತ್ರಿಕರಿಗಾಗಿ ಸೌದಿಯಾದ ೧೧೫, ಏರಿಂಡಿಯಾದ ೧೩೦ ಹಾಗೂ ಎನ್ಎಎಸ್ ಏರ್ನ ೯೬ ವಿಮಾನಗಳು ಭಾರತಹಾಗೂ ಸೌದಿಯ ನಡುವೆ ಸಂಚರಿಸಲಿವೆ.