ದೋಹಾ, ಕತರ್, ಡಿಸೆಂಬರ್ 30: ನಗರದಲ್ಲಿ ಕಾರ್ಯಾಚರಣೆಯಲ್ಲಿರುವ ಬಿ.ಎಂ.ಜೆ (ಭಟ್ಕಳ್ ಮುಸ್ಲಿಂ ಜಮಾತ್ ) ಸಂಘಟನೆಯ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿಯ ಸದಸ್ಯರ ವಿವರಗಳು ಈ ಕೆಳಗಿನಂತಿವೆ:
President : Mohd Zubair Khalifa

Vice President: Tahir Hussain Kazia

Secretary: Mohd Salahuddin Shahbandari
Asst. Secretary : Moulavi Mohd Fuzail Armar
Auditor: Abdul Gani Aliakbra
Treasurer: Ibrahim Khalil Siddi Ahmada (Pastare)
Presidential Nominees:
S.M. Syed Zakir
Mohd Zia Kola
Abdul Rawood Ikkeri
ಇತ್ತೀಚೆಗೆ ಕತರ್ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸುವ ಸಲುವಾಗಿ ಸಂಘಟನೆಯ ಸದಸ್ಯರು ನಗರದ ಹೊರವಲಯವಾದ ವುಖೇರ್ ನಲ್ಲಿ ಒಂದೆಡೆ ಸೇರಿದ್ದರು.
ಮಕ್ಕಳಿಂದ ಹಿರಿಯರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಸದಸ್ಯರು ಹಲವು ಅಟೋಟಗಳಲ್ಲಿ ಭಾಗಿಯಾಗಿ ಸಂಭ್ರಮಪಟ್ಟರು.


ಸಭಾಕಾರ್ಯಕ್ರಮದಲ್ಲಿ ಮಾತನಾಡಿದ ಮೌಲವಿ ಯಹ್ಯಾ ಬರ್ಮಾವರ್ ನೂತನ ವರ್ಷವನ್ನು ಸ್ವಾಗತಿಸುತ್ತಾ ಹೊಸವರ್ಷವು ಎಲ್ಲರಿಗೂ ಶುಭದಾಯಕವಾಗಲಿ ಎಂದು ಹಾರೈಸಿದರು.
ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಇಬ್ರಾಹಿಂ ಖಲೀಲ್ ಸಿದ್ದಿ ಅಹ್ಮದಾ ರವರ ವತಿಯಿಂದ ನೆನಪಿನ ಕಾಣಿಕೆಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಚಿತ್ರ, ವರದಿ: ಎಸ್.ಎಂ. ಸೈಯದ್ ಜಾಕಿರ್