ಜೆದ್ದಾ, ಅಕ್ಟೋಬರ್ ೨೮: ಮಂಗಳೂರಿನಿಂದ ಇದೇ ಪ್ರಥಮ ಬಾರಿಗೆ ನೇರ ವಿಮಾನದಿಂದ ಸೌದಿ ಅರೇಬಿಯಾದ ಜೆದ್ದಾ ನಗರಕ್ಕೆ ಆಗಮಿಸಿದ ಹಜ್ ಯಾತ್ರಿಗಳ ಪಾಲಿಗೆ ಈ ಪ್ರಯಾಣ ವಿಶಿಷ್ಟವಾಗಿತ್ತೋ ಅಂತೆಯೇ ಅವರನ್ನು ಎದುರುಗೊಳ್ಳಲು ಕಾದುನಿಂತಿದ್ದ ಇಂಡಿಯನ್ ಫ್ರಟರ್ನಿಟಿ ಫೋರಂ ಸಂಘಟನೆಯ ಸದಸ್ಯರಿಗೂ ಆಗಿತ್ತು.
ಭಾನುವಾರ ಸಂಜೆ ಏಳು ಘಂಟೆಗೆ ಜೆದ್ದಾ ವಿಮಾನ ನಿಲ್ದಾಣವನ್ನು ತಲುಪಿದ ಪ್ರಥಮ ವಿಮಾನದಿಂದ ಇಳಿದ ಹಜ್ ಯಾತ್ರಾರ್ಥಿಗಳು ಸುಮಾರು ಎರೆಡೂವರೆ ಘಂಟೆಗಳ ಕಾಲ್ ಇಮ್ಮಿಗ್ರೇಶನ್ ವಿಭಾಗದಲ್ಲಿ ಕಾಯಬೇಕಾಯಿತು.
ಆದರೆ ಉಪಸ್ಥಿತರಿದ್ದ ಐ.ಎಫ್.ಎಫ್. ಕಾರ್ಯಕರ್ತರ ನೆರವಿನಿಂದಾಗಿ ಯಾವುದೇ ತೊಂದರೆಯಿಲ್ಲದೇ ಯಾತ್ರಾರ್ಥಿಗಳು ಮುಂದಿನ ಸ್ಥಳವಾದ ಮಕ್ಕಾ ನಗರಕ್ಕೆ ತಮ್ಮ ಪ್ರಯಾಣ ಮುಂದುವರೆಸಿದರು.

ಉಪಸ್ಥಿತರಿದ್ದ ಕಾರ್ಯಕರ್ತರು ಅರಬಿ ಭಾಷೆಯಿಂದ ಮಲಯಾಳಂ, ಬ್ಯಾರಿ ಭಾಷೆಗಳಿಗೆ ವಿಷಯವನ್ನು ತರ್ಜುಮೆ ಮಾಡುವ ಮೂಲಕ ಸಂವಹನಕಾರ್ಯ ಸುಗಮವಾಗುವಂತೆ ನೋಡಿಕೊಂಡರು.
ಪ್ರತಿವರ್ಷದಂತೆ ಈ ವರ್ಷವೂ ಐ.ಎಫ್.ಎಫ್. ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಜೆದ್ದಾ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು ತಮ್ಮ ಕೈಲಾದ ನೆರವನ್ನು ನೀಡುತ್ತಿದ್ದಾರೆ. ಈ ವರ್ಷ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಬಾಂಧವರಿಗೆ ನೆರವು ನೀಡುತ್ತಿದ್ದಾರೆ.
ಕೇವಲ ಹಜ್ ಯಾತ್ರಿಗಳಿಗೆ ಮಾತ್ರವಲ್ಲದೇ ರಾಷ್ಟ್ರದಲ್ಲಿ ಉಪಸ್ಥಿತರಿರುವ ಯಾವುದೇ ಭಾರತೀಯರಿಗೆ ಸಾಧ್ಯವಾದ ನೆರವು ನೀಡುತ್ತಾ ಬರುತ್ತಿದೆ.






ಮಂಗಳೂರಿನಿಂದ ಆಗಮಿಸಿದ ಹಜ್ ಯಾತ್ರಿಗಳನ್ನು ಸ್ವಾಗತಿಸಿ ನೆರವು ನೀಡಿದ ಕಾರ್ಯಕರ್ತ ತಂಡದಲ್ಲಿ ಸಾದಿಕ್ ಇಡ್ಯಾ, ಸುಹೇಲ್ ಕಂಡಕ್, ನದೀಂ ಹಾಗೂ ಅಬ್ದುಲ್ ಸಮದ್ ಒಳಗೊಂಡಿದ್ದಾರೆ. ಐ.ಎಫ್.ಎಫ್. ಸಂಘಟನೆಯ ಜೆದ್ದ ವಿಭಾಗದ ಕಾರ್ಯಸಂಚಾಲಕ ಅಬೂಬಕರ್ ಕುಂಞಿ ಸಹಾ ನಿಲ್ದಾಣದಲ್ಲಿ ಉಪಸ್ಥಿತರಿದ್ದು ತಮ್ಮ ಸದಸ್ಯರನ್ನು ಹುರುದುಂಬಿಸುತ್ತಿದ್ದರು.
ಚಿತ್ರ, ವರದಿ: ಎ.ಎಂ. ಆರೀಫ್ ಜೋಕಟ್ಟೆ, ದಮ್ಮಾಂ, ಸೌದಿ ಅರೇಬಿಯಾ.