ಜೆದ್ದಾ (ಸೌದಿ ಅರೇಬಿಯಾ) ಡಿಸೆಂಬರ್ 28: ಇತ್ತೀಚಿಗೆ ನಗರದಲ್ಲಿ ಸುರಿದ ಭಾರೀ ಮಳೆಯಿಂದ ಮತ್ತು ಅದರಿಂದುಂಟಾದ ಪ್ರವಾಹದಿಂದಾಗಿ 125 ಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಸೌದಿ ನಗರಾಡಳಿತ ಅಧಿಕಾರಿಗಳ ಸಹಿತ 30ಮಂದಿಯನ್ನು ವಿಚಾರಣೆಗಾಗಿ ಬಂಧಿಸಲಾಗಿದೆ.
ಮಳೆಯಿಂದ ಉಂಟಾದ ಈ ದುರಂತದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜನರು ಸಾವಿಗೀಡಾಗಳು ಮತ್ತು ಕೋಟ್ಯಾಂತರ ರಿಯಾಲುಗಳ ನಷ್ಟ ಉಂಟಾಗಲು ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದೇ ಕಾರಣ ಎಂಬ ಸಾರ್ವಜನಿಕ ದೂರಿನ ಹಿನ್ನಲೆಯಲ್ಲಿ ಇವರನ್ನು ಬಂಧಿಸಲಾಗಿದೆ.
ವರದಿ : ಅಶ್ರಫ್ ಮಂಜ್ರಾಬಾದ್.