ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ

ತಬೂಕ್: ಹಜ್ ಯಾತ್ರಾರ್ಥಿಗಳ ಸೇವೆಗೆ ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ತಂಡ

Thu, 26 Nov 2009 02:55:00  Office Staff   S.O. News Service

ತಬೂಕ್: (ಸೌದಿ ಅರೇಬಿಯಾ) ನವೆಂಬರ್ 25: ಮಕ್ಕಾ ಮತ್ತು ಮದೀನಾದಲ್ಲಿ ಹಜ್ ಯಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ ಹಜ್ ಯಾತ್ರಾರ್ಥಿಗಳಿಗೆ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ತಬೂಕ್ ಇಂಡಿಯಾ ಫ್ರಟೆರ್ನಿಟಿ ಫೋರಂ ಸದಸ್ಯರ ತಂಡ ಇಂದು ತಬೂಕಿನಿಂದ ಮಕ್ಕಾ ನಗರಕ್ಕೆ ಪ್ರಯಾಣ ಬೆಳೆಸಿತು.

 

ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತೀಯ ಹಜ್ ಮಿಶನ್, ಭಾರತೀಯ ದೂತಾವಾಸ ಕಛೇರಿ ಮತ್ತು ಸೌದಿ ಹಜ್ ಸಮಿತಿಯ ಸಹಯೋಗದೊಂದಿಗೆ ಸೌದಿ ಇಂಡಿಯಾ ಫ್ರಟೆರ್ನಿಟಿ ಫೋರಂ ಸೇವೆ ನಿರ್ವಹಿಸುತ್ತಿದೆ. ಕಳೆದ ಬಾರಿ ಇವರು ನೀಡಿದ್ದ ಸೇವೆ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

 

ಹಜ್ ಯಾತ್ರಾರ್ಥಿಗಳ ಸೇವೆ ಮತ್ತು ಅವರ ಸೌಲಭ್ಯಗಳ ಪರಿಶೀಲನೆಗಾಗಿ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಎಂ..ಹೆಚ್ ಫಾರೂಕ್ ಮತ್ತು ಕಾನ್ಸುಲೇಟ್ ಜನರಲ್ ಸಯೀದ್ ಅಹಮದ್ ಬಾಬಾ ಈಗಾಗಲೇ ಮೀನಾ ತಲುಪಿದ್ದಾರೆ. ಭಾರತದಿಂದ ಆಗಮಿಸಿರುವ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ನೇತೃತ್ವದ ಹಜ್ ಸೌಹಾರ್ದ ಸಮಿತಿಯ ತಂಡ ಈಗಾಗಲೇ ಮೀನಾ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಭಾರತೀಯ ಶಿಬಿರಗಳಲ್ಲಿ ಹಜ್ ಯಾತ್ರಾರ್ಥಿಗಳಿಗೆ ಒದಗಿಸಿರುವ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿ ಸಂತೃಪ್ತಿ ವ್ಯಕ್ತಪಡಿಸಿದೆ.

ವರದಿ : ಅಶ್ರಫ್ ಮಂಜ್ರಾಬಾದ್

 


Share: