ಪತ್ರಿಕಾ ಪ್ರಕಟಣೆ
ದುಬೈ, ಅಕ್ಟೋಬರ್ ೧೬: ನವೆಂಬರ್ ೧೩, ಶುಕ್ರವಾರದಂದು ನಗರದ ಅಲ್ ಬರ್ಶಾ ಬಡಾವಣೆಯಲ್ಲಿರುವ ಜೆ.ಎಸ್.ಎಸ್. ಶಾಲೆಯ ಸಭಾಂಗಣದಲ್ಲಿ ೫೩ ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ಕನ್ನಡ ಕೂಟ ಯು.ಎ.ಇ. ಸಂಘಟನೆ ಸಜ್ಜಾಗಿದೆ.
ಶುಕ್ರವಾರ ಮಧ್ಯಾಹ್ನ ಮೂರು ಘಂಟೆಗೆ ಭೋಜನದ ಬಳಿಕ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಹಲವು ಸಾಂಸ್ಕೃತಿಕ, ಮನರಂಜನಾ ಮತ್ತು ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಲವು ಖ್ಯಾತ ಕಲಾವಿದರೂ, ಸ್ಥಳೀಯ ಪ್ರತಿಭೆಗಳೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ರಾಜ್ಯೊತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಕಲ ಕನ್ನಡಿಗರಿಗೆ ಈ ಮೂಲಕ ಕನ್ನಡ ಕೂಟ ಯು.ಎ.ಇ. ಆಹ್ವಾನಿಸುತ್ತಿದೆ.