ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು.

ಮಕ್ಕಾ: ಹಜ್ ಯಾತ್ರಾರ್ಥಿಗಳಿಗಲ್ಲದೆ ಇತರರಿಗೆ ವಿಧಿಸಿದ್ದ ಮಕ್ಕಾ ನಗರ ಪ್ರವೇಶ ನಿರ್ಬಂಧ ತೆರವು.

Sat, 28 Nov 2009 13:59:00  Office Staff   S.O. News Service

ಮಕ್ಕಾ(ಸೌದಿ ಅರೇಬಿಯಾ) ನವೆಂಬರ್ 28: ಹಜ್ ಕರ್ಮಗಳು ಪೂರ್ತಿಯಾಗುತ್ತಿದ್ದಂತೆ ಹಜ್ ಯಾತ್ರಾರ್ಥಿಗಳಲ್ಲದ ಸಾಮಾನ್ಯ ನಾಗರಿಕರಿಗೆ ವಿಧಿಸಲಾಗಿದ್ದ ಮಕ್ಕಾ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ ಹಜ್ ಯಾತ್ರೆಗೆ ಬಂದಿದ್ದ ತಮ್ಮ ಕುಟುಂಬಿಕರನ್ನು ಕಾಣಲು ಇಲ್ಲಿನ ಅನಿವಾಸಿ ಭಾರತೀಯರ ಸಹಿತ ಎಲ್ಲಾ ವಿದೇಶಿಗಳಿಗೆ ಅನೂಕೂಲವಾಗಿದೆ.

 

ಹಜ್ ಸಮಯದಲ್ಲಿ ಉಂಟಾಗುವ ನೂಕುನುಗ್ಗಳನ್ನು ತಪ್ಪಿಸಲು ಸರ್ಕಾರ ನಿರ್ಬಂಧ ವಿಧಿಸಿದ್ದು ಹಜ್ ಅನುಮತಿ ಪತ್ರ ಇಲ್ಲದೇ ಇತರರನ್ನು ಮಕ್ಕಾ ನಗರ ಪ್ರವೇಶಿಸಲು ಬಿಡುತ್ತಿರಲಿಲ್ಲ. ಇದರಿಂದಾಗಿ ಇಲ್ಲಿನ ವಿದೇಶಿ ನಾಗರೀಕರು ತಮ್ಮ ಹಜ್ ಯಾತ್ರೆಗೆ ಬಂದ ಬಂಧು ಮಿತ್ರರನ್ನು ಕಾಣಲು ಅಸಾಧ್ಯವಾಗಿತ್ತು. ಈಗ ನಿರ್ಬಂಧದ ತೆರವಿನಿಂದಾಗಿ ಲಕ್ಷಾಂತರ ಜನರು ಮಕ್ಕಾ ನಗರ ಪ್ರವೇಶಿಸಿದರು.

ರೀತಿಯ ನಿರ್ಬಂಧದ ನಡುವೆಯೂ ಮಕ್ಕಾ ನಗರ ಯಾತ್ರಾರ್ಥಿಗಳಿಂದ ತುಂಬಿ ತುಳುಕುತಿತ್ತು. ಅರಫಾದಿಂದ ಮೀನಾ ಪ್ರದೇಶಕ್ಕೆ ಇರುವ ಎಂಟು ಕಿ.ಮಿ. ದೂರವನ್ನು ವಾಹನದ ಮೂಲಕ ತಲುಪಲು ಹಲವು ಗಂಟೆಗಳು ಬೇಕಾಯಿತು. ಹಲವು ಜನರು ವಾಹನದಿಂದ ಇಳಿದು ಕಾಲ್ನಡಿಗೆಯ ಮೂಲಕವೇ ಹೊರಟರು. ಕೆಲವರು ಯಾತ್ರೆಯ ನಡುವೆ ತಮ್ಮ ಗುಂಪುಗಳಿಂದ ಬೇರ್ಪಟ್ಟ ಪ್ರಸಂಗಗಳೂ ನಡೆದವು. ಆದರೆ ಮೂರು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಹಜ್ ಯಾತ್ರಾರ್ಥಿಗಳ ಸೇವೆಯಲ್ಲಿ ನಿರತರಾದ ಕಾರಣ ಯಾತ್ರಾರ್ಥಿಗಳು ತಮ್ಮ ಸ್ಥಾನಗಳಿಗೆ ವಾಪಾಸ್ಸು ತಲುಪಲು ಸಹಕಾರಿಯಾಯಿತು. ಹಜ್ ಸೇವೆಯಲ್ಲಿ ವರ್ಲ್ಡ್ ಅಸೆಂಬ್ಲಿ ಆಫ್ ಮುಸ್ಲಿಂ ಯೂತ್ (ವಾಮಿ) ಹಜ್ ಸರ್ವಿಸ್ ಫೋರಂ, ಇಂಡಿಯಾ ಫ್ರಟೆರ್ನಿಟಿ ಫೋರಂ ಸಹಿತ ಹಲವು ಸಂಘಟನೆಗಳ ಕಾರ್ಯಕರ್ತರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.

 

ವರದಿ : ಅಶ್ರಫ್ ಮಂಜ್ರಾಬಾದ್.

 


Share: