ಫಾಲ್ಲುಜಾ, ಸೋಮವಾರ, 15 ಮಾರ್ಚ್ 2010( 20:26 IST )
ಇರಾಕ್ನ ಪಶ್ಚಿಮ ಅನ್ಬಾರ್ ಪ್ರದೇಶದಲ್ಲಿ ಕಾರ್ ಬಾಂಬ್ವೊಂದು ಸ್ಫೋಟಗೊಂಡ ಪರಿಣಾಮ 7ಜನರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.
ಪಶ್ಚಿಮ ಬಾಗ್ದಾದ್ನ ಫಾಲ್ಲುಜಾ ನಗರದಲ್ಲಿ ಗಸ್ತು ತಿರುಗುತ್ತಿದ್ದ ಆರ್ಮಿ ಪಡೆಯಿಂದ ಸುಮಾರು 500ಅಡಿ ದೂರದಲ್ಲಿ ಕಾರ್ ಪಾರ್ಕ್ನಲ್ಲಿ ಸ್ಫೋಟ ಸಂಭವಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಏಕಾಏಕಿ ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ ಇಡೀ ಪ್ರದೇಶದಲ್ಲಿ ಹೊಗೆ ಏಳುತ್ತಿರುವುದನ್ನು ಕಣ್ಣಾರೆ ಕಂಡಿರುವುದಾಗಿ 30ರ ಹರೆಯದ ಮೊಹಮ್ಮದ್ ಅಬ್ದುಲ್ಲಾ ತಿಳಿಸಿದ್ದಾನೆ.
ಕಳೆದ ಎರಡು ವರ್ಷಗಳಲ್ಲಿ ಇರಾಕ್ನಲ್ಲಿ ಉಗ್ರರ ಅಟ್ಟಹಾಸ ಮಿತಿಮೀರುತ್ತಿದ್ದು, ಅಮಾಯಕ ಜನ ಬಲಿಯಾಗುತ್ತಿದ್ದಾರೆ. ಕಳೆದ ವಾರ ದೇಶದಲ್ಲಿ ನಡೆದ ಸಂಸತ್ ಚುನಾವಣೆಯ ಸಂದರ್ಭದಲ್ಲೂ ಉಗ್ರರು ದಾಳಿ ನಡೆಸಿದ್ದರು.

ಸೌಜನ್ಯ: ೨೪ ದುನಿಯಾ