ದುಬೈ, ಜನವರಿ ೨೩: ಯು.ಎ.ಇ.ಯಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ವ್ಯಸ್ತವಾಗಿರುವ ಕನ್ನಡ ಕೂಟ ಯು.ಎಇ. (ಈಗ ಭಾರತೀಯ ದೂತಾವಾಸದ ಇಂಡಿಯನ್ ಕಮ್ಯೂನಿಟಿ ವೆಲ್ಫೇರ್ ಕಮಿಟಿಯ ಅಂಗ) ನಿನ್ನೆ ಶುಕ್ರವಾರ, ಜನವರಿ ೨೨ ರಂದು ನಗರದ ಜಬೀಲ್ ಪಾರ್ಕ್ ಉದ್ಯಾನವನದಲ್ಲಿ ಮಕರ ಸಂಕ್ರಾಂತಿ ಆಚರಣೆಯ ಸಲುವಾಗಿ ತನ್ನ ಸದಸ್ಯರನ್ನು ಒಟ್ಟುಗೂಡಿಸಿತ್ತು. ಸುಮಾರು ನೂರೈವತ್ತರಷ್ಟು ಸಂಖ್ಯೆಯ ಕನ್ನಡಿಗರು ಉದ್ಯಾನವನಕ್ಕೆ ಆಗಮಿಸಿ ಮಕರ ಸಂಕ್ರಾಂತಿಯ ಎಳ್ಳುಬೇವಿನ ಜೊತೆ ಸಂತಸ-ದುಮ್ಮಾನಗಳನ್ನೂ ಹಂಚಿಕೊಂಡರು.
ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಕೂಟದ ಸದಸ್ಯರಾದ ಶ್ರೀ ವೀರೇಂದ್ರಬಾಬುರವರು ಸ್ವಾಗತ ಕೋರಿದರು. ಕೂಟದ ಇನ್ನೋರ್ವ ಸಕ್ರಿಯ ಸದಸ್ಯರಾದ ಹಾಗೂ ಇಂದಿನ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಸದಾನ್ ದಾಸ್ ರವರು ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ಮಕರ ಸಂಕ್ರಾಂತಿಯ ವಿಶೇಷ ಪೂಜಾ ಕಾರ್ಯಗಳು ನಡೆದ ಬಳಿಕ ನೆರೆದವರಿಗೆ ಸಾಂಪ್ರಾದಾಯಿಕ ಎಳ್ಳುಸಕ್ಕರೆ ಹಂಚಲಾಯಿತು. ಶ್ರೀ ಸಿದ್ದಯ್ಯ ಸ್ವಾಮಿಯವರು ಪೂಜಾಕಾರ್ಯವನ್ನು ಸಂಪನ್ನಗೊಳಿಸಿದರು.
ಪೂಜಾಕಾರ್ಯದ ಬಳಿಕ ಇತ್ತೀಚೆಗೆ ಕರ್ನಾಟಕ ಕಳೆದುಕೊಂಡ ನಾಲ್ವರು ದಿಗ್ಗಜರಾದ ದಿ.ಸಿ.ಎಸ್. ಅಶ್ವಥ್, ದಿ. ಡಾ. ವಿಷ್ಣುವರ್ಧನ್, ದಿ. ಕೆ.ಎಸ್.ಅಶ್ವಥ್ ಹಾಗೂ ದಿ. ಚಿಂದೋಡಿ ಲೀಲಾ ರವರ ಸ್ಮರಣಾರ್ಥ ಎಲ್ಲಾ ಸದಸ್ಯರು ಒಂದು ನಿಮಿಷ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಅರ್ಪಿಸಿದರು. ಬಳಿಕ ಶ್ರೀ ಪ್ರಥ್ವಿಯವರು ಸಿ.ಎಸ್. ಅಶ್ವಥ್ ರವರ "ಎಲ್ಲೋ ಹುಡುಕಿದೆ ಇಲ್ಲದ ದೇವರ, ಕಲ್ಲುಮಣ್ಣುಗಳ ಗುಡಿಯೊಳಗೆ' ಎಂಬ ಭಾವಗೀತೆಯನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಅಗಲಿದ ಅತ್ಮಕ್ಕೆ ಶಾಂತಿ ಕೋರಿದರು.
ಅ ಬಳಿಕ ಮಕ್ಕಳಿಂದ ಪ್ರಾರಂಭಗೊಂಡು ದಂಪತಿಗಳಿಗೆ ಹಾಗೂ ಹಿರಿಯರಿಗೆ ಹಲವು ಆಟೋಟಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲರೂ ಉತ್ತಮ ಪ್ರದರ್ಶನ ನೀಡಿ ಸ್ಪರ್ಧೆಗೆ ಜೀವ ನೀಡಿದರು.
ಮಧ್ಯಾಹ್ನದ ಭೋಜನವನ್ನು ನಗರದ ಚಾವಡಿ ರೆಸ್ಟೋರೆಂಟ್ ವತಿಯಿಂದ ಏರ್ಪಡಿಸಲಾಗಿದ್ದು ಶುದ್ಧ ಶಾಕಾಹಾರಿ ಭೋಜನ ನೆರೆದವರ ಹಸಿವನ್ನು ಇಂಗಿಸಿದವು.
ಅಲ್ಪವಿರಾಮದ ಬಳಿಕ ಮತ್ತೆ ಪ್ರಾರಂಭವಾದ ಸ್ಪರ್ಧೆಗಳಲ್ಲಿ ಭಾಗಿಯಾದವರಿಗೆ ಸಮಯದ ಪರಿವೆಯೇ ಇರಲಿಲ್ಲ. ಬೌಲಿಂಗ್, ಪಿಕಿಂಗ್ ದ ಟಾಫಿ, ಲಗೋರಿ, ವಾಲಿಬಾಲ್ ಎಸೆತ ಮೊದಲಾದ ಸ್ಪರ್ಧೆಗಳು ಮಕ್ಕಳ ಮನರಂಜಿಸಿದರೆ ಮಹಿಳೆಯರಿಗಾಗಿ ಹಿಟಿಂದ್ ವಿಕೆಟ್, ಅಡ್ಡಾದಿಡ್ಡಿ ನಡಿಗೆ, ಪುರುಷರಿಗಾಗಿ ರಿಂಗ್ ಇನ್ ದ ವಿಕೆಟ್ ಹಾಗೂ ದಂಪತಿಗಳ ಸೇಬು ತಿನ್ನಿಸುವ ಸ್ಪರ್ಧೆಗಳು ಮನರಂಜಿಸಿದವು. ಯಾರೂ ಭಾಗವಹಿಸಬಹುದಾದ 'ಇಟ್ಟಿಗೆ ಮೇಲಿನ ನಡಿಗೆ' ಸ್ಪರ್ಧೆಯಂತೂ ನೆರೆದವರು ತಾವೇ ಹೆಜ್ಜೆ ಹಾಕುತ್ತಿದ್ದೇವೋ ಎಂಬ ಪಾರವನ್ನು ಒದಗಿಸಿತು. ಅಂತೂ ಎಲ್ಲಾ ಆಟೋಟ ಸ್ಪರ್ಧೆಗಳು ಮುಗಿದಾಗ ಭಾಸ್ಕರ ಪಡುವಣದ ಅಂಚಿನತ್ತ ಸರಿದಿದ್ದ.
ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ ಈ ಕೆಳಗಿನಂತಿದೆ:
೧) ಬೌಲಿಂಗ್: (ಐದು ವರ್ಷಕ್ಕೂ ಕೆಳಗಿನ ವಯಸ್ಸಿನ ಮಕ್ಕಳಿಗೆ) : ಪ್ರಥಮ - ಕುಮಾರಿ ನಿವೇದಿತಾ, ದ್ವಿತೀಯ- ಕುಮಾರ್ ರೋಷನ್, ತೃತೀಯ - ಕುಮಾರ್ ತನಿಷ್ಕ
೨) ಪಿಕಿಂಗ್ ದ ವಿಕೆಟ್ (ಐದು ವರ್ಷಕ್ಕೂ ಕೆಳಗಿನ ವಯಸ್ಸಿನ ಮಕ್ಕಳಿಗೆ) : ಪ್ರಥಮ - ಕುಮಾರ್ ರಚಿತ್, ದ್ವಿತೀಯ- ಕುಮಾರ್ ತನಿಷ್ಕ ಹಾಗೂ ಕುಮಾರ್ ಅಮರ್
೩) ಲಗೋರಿ ಆಟ (ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳಿಗೆ) : ಪ್ರಥಮ-ಕುಮಾರ್ ಮಹಾಂತ ವಿ ಬಾಬು, ದ್ವಿತೀಯ- ಕುಮಾರ್ ನಿಧೀಶ್ ಶೀಲವಂತಮಠ
೫) ಗೋಣಿಚೀಲ ಓಟ(ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳಿಗೆ) : ಪ್ರಥಮ-ಕುಮಾರ್ ಹರ್ಷಿತ್ ಬೆಳಗೂರ ದ್ವಿತೀಯ- ಕುಮಾರ್ ಅರ್ಜುನ್ ಮಲ್ಲಿಕಾರ್ಜುನ ಗೌಡ.
೬) ವಾಲಿಬಾಲ್ ಎಸೆತ: (ಎಂಟು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ): ಪ್ರಥಮ-ಶ್ರೀಜಿತ್ ಬೆಳಗೂರ, ದ್ವಿತೀಯ-ಕುಮಾರಿ ವಿಭಾ ಬಾವಿಕಟ್ಟಿ, ತೃತೀಯ-ಕುಮಾರ ಮಹಾಂತ ವಿ.ಬಾಬು
೭)ಲಗೋರಿ ಆಟ: (ಎಂಟು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ): ಪ್ರಥಮ-ಕುಮಾರಿ ಸಮಿತಾ ರಮೇಶಬಾಬು, ದ್ವಿತೀಯ- ಕುಮಾರ ರಜತ್ ವೀರಣ್ಣ
೮)ಗೋಣಿಚೀಲ ಓಟ (ಎಂಟು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ): ಪ್ರಥಮ-ಕುಮಾರ ರಜತ್ ವಿದ್ಯಾಧರ್, ದ್ವಿತೀಯ- ಕುಮಾರಿ ಅನ್ಷುಲಾ ವೀರೇಂದ್ರ
ಮಹಿಳೆಯರಿಗೆ:
೧) ಹಿಟಿಂಗ್ ದ ವಿಕೆಟ್: ಪ್ರಥಮ-ಶ್ರೀಮತಿ ಚೇತನಾ ಗಾವಸ್ಕರ್, ದ್ವಿತೀಯ - ಶ್ರೀಮತಿ ರಾಜೇಶ್ವರಿ
೨)ಅಡ್ಡಾದಿಡ್ಡಿ ನಡಿಗೆ : ಪ್ರಥಮ-ಶ್ರೀಮತಿ ಶ್ರೀಮತಿ ಜ್ಯೋತಿ ವೀರಣ್ಣ, ದ್ವಿತೀಯ - ಶ್ರೀಮತಿ ಜ್ಯೋತಿ ಮಲ್ಲಿಕಾರ್ಜುನ
ಮಹನೀಯರಿಗೆ:
೧)ರಿಂಗ್ ಇನ್ ದ ವಿಕೆಟ್: ಪ್ರಥಮ - ಶ್ರೀ ವೀರೇಂದ್ರ ಬಾಬು, ದ್ವಿತೀಯ- ಶ್ರೀ ಅರ್ಶದ್ ಹುಸೇನ್
ದಂಪತಿಗಳಿಗೆ;
೧) ಸೇಬು ತಿನ್ನಿಸುವ ಸ್ಪರ್ಧೆ: ಪ್ರಥಮ = ಜೀವನ್-ರಾಧಾ ದಂಪತಿ, ದ್ವಿತೀಯ=ಸತೀಶ-ರಾಧಿಕಾ ದಂಪತಿ, ತೃತೀಯ=ಸುಮನ-ಸುಜಯ ದಂಪತಿ
ಯಾರೂ ಭಾಗವಹಿಸಬಹುದಾದ ಸ್ಪರ್ಧೆ:
೧) ಇಟ್ಟಿಗೆ ಮೇಲಿನ ನಡಿಗೆ: ಪ್ರಥಮ - ಮಂಜುನಾಥ್- ಪ್ರದೀಪ್, ದ್ವಿತೀಯ ಲ್ ರಾಧಾ-ಜೀವನ್.
ಸ್ಪರ್ಧೆಗಳ ಬಳಿಕ ಸಕಲ ಸದಸ್ಯರು ಒಂದುಗೂಡಿ ಆಡಿದ ಶೀಪ್ ಇನ್ ದ ರಿಂಗ್ ಕ್ರೀಡೆ ಎಲ್ಲರ ಮನತಣಿಸಿತು.
ಚಟುವಟಿಕೆಯಿಂದ ಓಡಾಡಿ ತನ್ನ ಮೇಲೆ ಎರಗುತ್ತಿದ್ದ ಚೆಂಡಿನ ದಾಳಿ ತಪ್ಪಿಸಿಕೊಂಡ ಕುಮಾರಿ ಸೃಷ್ಟಿ ವಾಡೇಕರ್ ಅಂತಿಮವಾಗಿ ಔಟಾಗದೇ ಉಳಿದು ಪ್ರಥಮಸ್ಥಾನ ಗಳಿಸಿದಳು.
ವಂದನಾರ್ಪಣೆಯ ಮುನ್ನ ಶ್ರೀಮತಿ ಜ್ಯೋತಿಲಕ್ಷ್ಮಿ ಬೆಳಗೂರರವರು ನಡೆಸಿಕೊಟ್ಟ ಕೆಲವು ವಿನೋದ ನೀಡುವ ಆಟಗಳು ನೆರೆದವರು ನಕ್ಕೂ ನಕ್ಕೂ ಸುಸ್ತಾಗುವಂತೆ ಮಾಡಿದವು.
ಬಳಿಕ ಆಗಮಿಸಿದ ಎಲ್ಲಾ ಸದಸ್ಯರು ತಮ್ಮ ಪರಿಚಯ ಮಾಡಿಕೊಂಡರು. ಆಗಮಿಸಿದ ಎಲ್ಲಾ ಸದಸ್ಯರಿಗೆ ಕನ್ನಡ ಕೂಟದ ವತಿಯಿಂದ ವಿಶೇಷವಾಗಿ ಅಚ್ಚುಮಾಡಿಸಿದ್ದ ಕ್ಯಾಲೆಂಡರುಗಳನ್ನು ವಿತರಿಸಲಾಯಿತು.
ಅಂತಿಮವಾಗಿ ವಿಜೇತರಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು. ಶ್ರೀ ಅರುಣ ಮುತುಗದೂರ್ ರವರು ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಸುಮಾ ಅರುಣ್ ಕುಮಾರ್, ಶ್ರೀಮತಿ ಉಮಾ ವಿದ್ಯಾಧರ್ ಆಟೋಟಸ್ಪರ್ಧೆಗಳು ಸುಗಮವಾಗಿ ನಡೆಯಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಸುಸಂಬದ್ದವಾಗಿ ಒದಗಿಸಿ ಸಹಕರಿಸಿದರು. ಹಿರಿಯ ಸದಸ್ಯರಾದ ಶ್ರೀ ಈರಣ್ಣ ಮೂಲಿಮನಿಯವರು ಸ್ಪರ್ಧೆಗಳ ಅಂಕಗಳನ್ನು ಬರೆದಿಟ್ಟುಕೊಳ್ಳುವ ಹೊಣೆಯನ್ನು ಹೊತ್ತಿದ್ದರು. ಕೂಟದ ಪೋಷಕರಾದ ಶ್ರೀ ಮುಸ್ತಫಾ ಹಾಗೂ ಅವರ ಮನೆಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಮಂಜುನಾಥ್ ಹಾಗೂ ಶ್ರೀ ಬಸವರಾಜ ಸಾಲಿಮಠ್ ಲಗುಬಗೆಯಿಂದ ಓಡಾಡಿ ಸಹಕರಿಸಿದರು. ಮುಂದಿನ ತಿಂಗಳ ಶಿವರಾತ್ರಿಯಂದು ಮತ್ತೊಂದು ಕಾರ್ಯಕ್ರಮದಲ್ಲಿ ಒಂದಾಗೋಣ ಎಂಬ ಭರವಸೆಯ ಮೂಲಕ ಎಲ್ಲರೂ ಒಬ್ಬರನ್ನೊಬ್ಬರು ಬೀಳ್ಕೊಟ್ಟರು.
ವರದಿ: ಅರ್ಶದ್ ಹುಸೇನ್, ದುಬೈ
ಚಿತ್ರಗಳು: ಅರ್ಶದ್ ಹುಸೇನ್, ಬಸವರಾಜ್ ಸಾಲಿಮಠ್