ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಜನವರಿ 8, 2010ರ೦ದು ಬ೦ಟ್ಸ್ ಮಹಿಳಾ ತ್ರೋಬಾಲ್ ಟೂರ್ನಮೆ೦ಟ್

ದುಬೈ: ಜನವರಿ 8, 2010ರ೦ದು ಬ೦ಟ್ಸ್ ಮಹಿಳಾ ತ್ರೋಬಾಲ್ ಟೂರ್ನಮೆ೦ಟ್

Fri, 01 Jan 2010 05:36:00  Office Staff   S.O. News Service
ದುಬೈ ಬ೦ಟರ ಸ೦ಘದ ವತಿಯಿ೦ದ ಜನವರಿ 8, 2010ರ೦ದು ದುಬೈ ಬ೦ಟ್ಸ್ ಮಹಿ ಳಾ ತ್ರೋಬಾಲ್ ಟೂರ್ನಮೆ೦ಟ್ ಶಾರ್ಜಾದ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮವು ಬೆಳಿಗ್ಗೆ 8 ಗ೦ಟೆಗೆ ಪ್ರಾರ೦ಭವಾಗಲಿದೆ ಎ೦ದು ತಿಳಿಸಿದ್ದಾರೆ.

ಎ೦ಟು ತ೦ಡಗಳು ಈ ಟೂರ್ನಮೆ೦ಟ್‌ನಲ್ಲಿ ಭಾಗವಹಿಸಲಿದ್ದಾರೆ. ಈ ತ೦ಡಗಳನ್ನು ಎರಡು ಗು೦ಪುಗಳನ್ನಾಗಿ ಮಾಡಲಾಗುತ್ತದೆ. ತಲಾ ಎರಡು ಗು೦ಪುಗಳಲ್ಲಿನ ಎರಡು ತ೦ಡಗಳು ಸೆಮಿ ಪೈನಲ್‌ಗೆ ಬರುತ್ತಾರೆ. ಆಟದಲ್ಲಿ 21 ಪಾಯಿ೦ಟ್‍ನ ಗುರಿ ಇರುತ್ತದೆ. ಸೆಮಿ ಫೈನಲ್‌ನಿ೦ದ ಫೈನಲ್ಸ್‌ಗೆ ಮೂರು ಆಟಗಳನ್ನು ಆಡಲಾಗುತ್ತದೆ. ಕೊನೆ ಕ್ಷಣದಲ್ಲಿ ಇದು ಬದಲಾಗಬಹುದು.

ಆಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನದವರಿಗೆ ಪ್ರಶಸ್ತಿ ಮತ್ತು ಫಲಕಗಳನ್ನು ನೀಡಲಾಗುತ್ತದೆ.

Share: