ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ನಾಳೆ ನಗರದಲ್ಲೊಂದು ತುಳು ನಾಟಕ

ದುಬೈ: ನಾಳೆ ನಗರದಲ್ಲೊಂದು ತುಳು ನಾಟಕ

Thu, 29 Oct 2009 02:52:00  Office Staff   S.O. News Service
ದುಬೈ, ಅಕ್ಟೋಬರ್ ೨೯:  ವಿದೇಶದಲ್ಲಿ ದೇಸೀ ಸೊಗಡಿನ ಉತ್ಸವ. ಇಲ್ಲಿನ ಸಂಗಮ ಕಲಾವಿದರು ತಂಡ ದಿ. ಉಮೇಶ್ ನಂತೂರ್ ಸ್ಮರಣಾರ್ಥ ತುಳು ನಾಟಕವೊಂದನ್ನು ಆಯೋಜಿಸಿದ್ದು ನಾಳೆ ನಗರದ ಇಲೈಟ್ ಇಂಗ್ಲಿಷ್ ಸ್ಕೂಲ್ ಸಭಾಂಗಣದಲ್ಲಿ ಪ್ರದರ್ಶಿಸಲ್ಪಡುತ್ತಿದೆ.
29-shj1.jpg
ಈ ಹಿಂದೆ ಗಂಗುನ ಗಮ್ಮತ್ ನಾಟಕ ನೀಡಿ ತುಳು ನಾಟಕಪ್ರೇಮಿಗಳ ಹೃದಯ ಗೆದ್ದಿದ್ದ ಪ್ರತಿಭಾವಂತ ನಟ ವಿಶ್ವನಾಥ ಶೆಟ್ಟಿಯವರು ಈ ನಾಟಕವನ್ನು ನಿರ್ದೇಶಿಸಲಿದ್ದಾರೆ.

ಸಂಗಮ ಕಲಾವಿದರು ತಂಡದ ಈ ಪ್ರಯೋಗ ಆರನೇ ವರ್ಷಾಚರಣೆಯಾಗಿದ್ದು  ಈ ವರ್ಷ ಇನ್ನಷ್ಟು ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಕಠಿಣ ಅಭ್ಯಾಸ ನಡೆಸಿದ್ದಾರೆ.

Share: