2009 ನೇ ಸಾಲಿನ ಶಾರ್ಜಾ ಕರ್ನಾಟಕ ಸಂಘ 7 ನೇ ವರ್ಷಾಚರಣೆ ಮತ್ತು 'ಮಯೂರ ಪ್ರಶಸ್ತಿ' ಸಮಾರಂಭದ ಸಂಭ್ರಮದಲ್ಲಿ ಮಯೂರ ಪ್ರಶಸ್ತಿ ಪಡೆಯಲಿರುವ ಸಂಘಟಕ, ರಂಗ ನಿರ್ದೇಶಕ ಹಾಗೂ ಸಾಹಿತಿ
ಯು. ಎ. ಇ. ಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಅಭಿನಂದಿಸಿ ಗೌರವಿಸುವ ಸಲುವಾಗಿ "ಮಯೂರ" ಪ್ರಶಸ್ತಿಯನ್ನು ಶಾರ್ಜಾ ಕರ್ನಾಟಕ ಸಂಘ ಪ್ರತಿವರ್ಷ ಗಣ್ಯರಿಗೆ ನೀಡುತ್ತಾ ಬಂದಿದೆ.
ಈ ಬಾರಿ ಮಯೂರ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರ ಮತ್ತು ನಾಟಕ ರಂಗದಲ್ಲಿ ಸೇವೆ ಸಲ್ಲಿಸಿರುವ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರಿಗೆ ಮತ್ತು ಯು. ಎ. ಇ. ಯಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಘಟನೆ, ಸಾಮಾಜಿಕ ಸೇವೆಯಲ್ಲಿ ಕೊಡುಗೆ ನೀಡಿದ ಶ್ರೀ ಬಿ. ಕೆ. ಗಣೇಶ್ ರೈ ಯವರಿಗೆ ನೀಡಿ ಗೌರವಿಸಲಾಗುವುದು.
ನವಂಬರ್ 13 ನೇ ತಾರೀಕಿನಂದು ಅಜ್ಮಾನ್ ಏಶ್ಯನ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ಬೆಳಿಗ್ಗೆ 10.30 ರಿಂದ ದಿನಪೂರ್ತಿ ನಡೆಯುವ ವರ್ಣರಂಜಿತ ರಾಜ್ಯೋತ್ಸವ, 7ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಈ ಬಾರಿಯ ಮಯೂರ ಪ್ರಶಸಿ ಪ್ರಧಾನ ನಡೆಯಲಿದೆ.
ರಂಗ ನಿರ್ದೇಶಕ ಹಾಗೂ ಸಾಹಿತಿ ಪ್ರಕಾಶ್ ರಾವ್ ಪಯ್ಯಾರ್
ಹವ್ಯಾಸ :
ನಾಟಕ ನಿರ್ದೇಶನ, ನಾಟಕ ರಚನೆ, ಕವನ, ಕತೆ ಬರೆಯುವುದು ಮತ್ತು
ಸಂಘಟನೆ. ಕತೆ , ಕವನ, ಲೇಖನ ಕರ್ನಾಟಕ ಹಾಗೂ ಮುಂಬಯಿಯಿಂದ ಪ್ರಕಟಿತ ಎಲ್ಲಾ ಹೆಚ್ಚಿನ ದಿನ ಪತ್ರಿಕೆ, ವಾರ ಪತ್ರಿಕೆ ಹಾಗೂ ಮಾಸಿಕ ಪತ್ರಿಕೆ ಗಳಲ್ಲಿ ಪ್ರಕಟಗೊಂಡಿವೆ.
ಪ್ರಕಟಿತ ಕೃತಿಗಳು:
೧. ವಿಪರ್ಯಾಸ (ಕವನ ಸಂಕಲನ) -೧೯೮೫
೨. ಕೂಗು (ಕವನ ಸಂಕಲನ) - ೧೯೮೭
೩. ರಂಗ ಧ್ವನಿ (ಸಂಪಾದಿತ ರಂಗಭೂಮಿ ವಿಮರ್ಶೆ-ವಿವಿಧ
ಲೇಖಕರು)-೧೯೯೦
೪. ಇಂದಿರಾ ಪ್ರಿಯದರ್ಶಿನಿ(ಪೂರ್ಣ ಪ್ರಮಾಣದ ನಾಟಕ)-೧೯೯೯
೫. ಸೂರ್ಯನಿಗೊಂದು ಸವಾಲು (ಪೂರ್ಣ ಪ್ರಮಾಣದ
ನಾಟಕ-ಜಾತಿ ಪದ್ಧತಿಯ ವಿಡಂಬನೆ)-೨೦೦೦
೬. ತಾರೆ ಏಣಿಸಿ ಮೊತ್ತ ಹೇಳಿ (ಸಂಪಾದಿತ- ಅನಿವಾಸಿ ಕವನ
ಸಕಲನ- ಯು.ಎ.ಇ. ಯಿಂದ ಪ್ರಕಟಿತ)-೨೦೦೪
೭. ಕನ್ನಡ ನಾಡು ನುಡಿ ರಕ್ಷಣೆ ಏಕೆ ಮತ್ತು ಹೇಗೆ?
(ಸಂಪಾದಿತ-ಲೇಖನಗಳು- ಯು.ಎ.ಇ. ಯಿಂದ ಪ್ರಕಟಿತ)-೨೦೦೫
ಪಡೆದ ಪ್ರಶಸ್ತಿಗಳು:
೧."ಕರ್ನಾಟಕ ಚೇತನ" ಪ್ರಶಸ್ತಿ- ರಂಗ ಸಮಾಜ ಸಾಂಸ್ಕ್ರತಿಕ ಸಂಸ್ಥೆ
ಬೆಂಗಳೂರು
೨. "ಜ್ಞಾನ ಸರಸ್ವತಿ" ಪ್ರಶಸ್ತಿ- ಜ್ಞಾನ ಮಂದಾರ ಅಕಾಡೆಮೆ, ಬೆಂಗಳೂರು.
೩. "ಹೃದಯವಂತರು" ಪ್ರಶಸ್ತಿ- ಆಖಿಲ ಭಾರತೀಯ ಕನ್ನಡ ಸಾಂಸ್ಕ್ರತಿಕ
ಸಮ್ಮೇಳನ-೨೦೦೭ ಗೋವ.ಡಾ.ಸಿದ್ದಲಿಂಗಯ್ಯ ಅವರಿಂದ ಪ್ರಶಸ್ತಿ ಪ್ರದಾನ.
೪. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ(ಸಮ್ಮೇಳಾನಾಧ್ಯಕ್ಷ) ಅವರಿಂದ ಹೊರನಾಡ
ಕನ್ನಡ ಸೇವೆಗಾಗಿ ಕುವೈಟ್ ನಲ್ಲಿ ನವೆಂಬರ ೨೦೦೭ ರಲ್ಲಿ ಕುವೈಟ್ ಕನ್ನಡ
ಕೂಟದ ವತಿಯಿಂದ ನಡೆದ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನ-೨೦೦೭ರ
ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತ ಗಣ್ಯರ
ಸಮ್ಮುಖದಲ್ಲಿ ಸನ್ಮಾನ.
ಸಂದರ್ಶನ/ ಪರಿಚಯ ಲೇಖನಗಳು:
೧೯೮೭ ರಲ್ಲಿ ಪ್ರಜಾಮತ ವಾರ ಪತ್ರಿಕೆಯಲ್ಲಿ "ಹೊರನಾಡಿನ ಕನ್ನದ ಧ್ವನಿ ಪ್ರಕಾಶ್ ಪಯ್ಯಾರ್" ಎಂಬ ಶೀರ್ಷಿಕೆಯೊಂದಿಗೆ ಶ್ರೀ ವಿದ್ಯಾಧರ್ ಮುತಾಲಿಕ ದೇಸಾಯಿ ಅವರಿಂದ ಪರಿಚಯ ಲೇಖನ ಪ್ರಕಟ.
೨೦೦೯ ರಲ್ಲಿ ಮುಂಬೈಯ ಕರ್ನಾಟಕ ಮಲ್ಲ ಕನ್ನಡ ದೈನಿಕದಲ್ಲಿ ಹಾಗೂ ಕರ್ನಾಟಕದಲ್ಲಿ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಇಪ್ಪತ್ತೈದು ವರ್ಷಗಳ ನಿಸ್ವಾರ್ಥ ಹೊರನಾಡಿನಲ್ಲಿ ಕನ್ನಡ ಸೇವೆ ಬಗ್ಗೆ ಲೇಖನ ಪ್ರಕಟ.
೨೦೦೬ರಲಿ ದುಬೈಯ ಕೆಓಡಿ ರೇಡಿಯೊ ದಲ್ಲಿ ಸಂದರ್ಶನ, ೨೦೦೯ ರಲ್ಲಿ ನಮ್ಮ ಟಿ.ವಿ. ವಾಹಿನಿಯಲಿ ಸಂದರ್ಶನ ಪ್ರಸಾರ ಗೊಂಡಿದೆ.
* ಕಳೆದ ಇಪ್ಪತ್ತೈದು ವರ್ಷಗಳಿಂದ ಹೊರನಾಡಿನಲ್ಲಿ ಕನ್ನಡ ಸೇವೆ.
* ಮೂಡಬಿದಿರೆಯ ಮಹಾವೀರ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೆ ಕಾಲೇಜ್ ವಾರ್ಷಿಕೋತ್ಸವಕ್ಕೆ ನಾಟಕ ರಚಿಸಿ ನಿರ್ದೇಶಿಸಿದ ಕೀರ್ತಿ ಹಾಗೂ ಜಿಲ್ಲಾ ಮಟ್ಟದ ಅಂತರ್ ಕಾಲೇಜ್ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ ಹೆಗ್ಗಳಿಕೆ.
* ೧೯೮೫ ರಲ್ಲಿ ಮುಂಬಯಿಯಲ್ಲಿ "ಧ್ವನಿ" ಹವ್ಯಾಸಿ ನಾಟಕ ಹಾಗೂ ಸಾಹಿತ್ಯಕ ಬಳಗದ ಸ್ಥಾಪನೆ ಹಾಗೂ ಸ್ಥಾಪಕ ಅಧ್ಯಕ್ಶನಾಗಿ ಆಯ್ಕೆ.("ಧ್ವನಿ" ಉದ್ದೇಶ ಸಮಾಜದಲ್ಲೊಂದು ಸಂಸ್ಥೆಯಾಗಿ ಗುರುತಿಸಿಕೊಳ್ಳದೆ ಒಂದು ಸಮಾಜಿಕ ಪ್ರಕ್ರಿಯೆಯಾಗಿ ಕಾರ್ಯ ಪ್ರ್‍ಅವೃತ್ತವಾಗಿರುವುದು) ಧ್ವನಿ ಮೂಲಕ ಸತತ ನಾಟಕ ಹಾಗು ಸಾಹಿತ್ಯಿಕ ಚಟುವಟಿಕೆಗಳು.
*ನಾಟಕ ದಿಗ್ಗಜರಾದ ಕೈಲಾಸಂ,ಶ್ರೀರಂಗ,ಗಿರೀಶ್ ಕಾರ್ನಾಡರ ನಾಟಕಗಳು ಸೇರಿದಂತೆ ಚಂದ್ರಕಾಂತ ಕೂಸನೂರ, ಪೂರ್ಣಚಂದ್ರ ತೇಜಸ್ವಿ, ವೇಣುಗೋಪಾಲ ಕಾಸರಗೋಡು,ರಾಮದಾಸ್,ಅ.ಕೃ.ನಾ. ಮುಂತಾದ ವಿವಿಧ ಲೇಖಕರ ನಾಟಕ ನಿರ್ದೇಶನ.
* ಅಮೆರಿಕದ ಸಾಹಿತ್ಯರಂಗದವರು ಪ್ರಕಟಿಸಿದ "ಅಚೀಚೆ ಕತೆಗಳು" ಸಂಕಲನದಲ್ಲಿ ಪ್ರಕಟಿತ ಕಥೆಗೆ ಅಪಾರ ಮನ್ನಣೆ.
* ವಿಶ್ವದ ವಿವಿಧ ಕನ್ನಡ ಸಂಘ ಸಂಸ್ಥೆಗಳು ಪ್ರಕಟಿಸಿರುವ ಸಂಕಲನಗಳು ಹಾಗೂ ಸ್ಮರಣಿಕೆಗಳಲ್ಲಿ ಲೇಖನ, ಕತೆ ಕವನ ಪ್ರಕಟ.
* ವಿವಿಧ ಅಂತರ್ ಜಾಲ ತಾಣಗಳಲ್ಲಿ ಸತತ ಕವನ ಹಾಗು ಕತೆಗಳು ಪ್ರಕಟಿತ.
* ರಾಜ್ ಕುಮಾರ್ ಅಪಹರಿಸಲ್ಪಟ್ಟಾಗ ೨೦೦೦ ನೇ ಇಸವಿಯಲ್ಲಿ ಕಾಡುಗಳ್ಳ ವೀರಪ್ಪನನ್ನು ಬಂಧಿಸುವಂತೆ ಕೋರಿ ಮುಂಬೈಯ ವಿ.ಟಿ. ರೈಲ್ವೆ ಸ್ಟೆಷನ್ ಮುಂದೆ ಧ್ವನಿ ಸದಸ್ಯರಿಂದ ಹಸ್ತಾಕ್ಷರ ಸಂಗ್ರಹದ ನೇತ್ರತ್ವ ಹಾಗೂ ಅಂದಿನ ಗೃಹಮಂತ್ರಿಗಳಾದ ಶ್ರೀ ಲಾಲ್ ಕೃಷ್ಣ ಅದ್ವಾನಿ ಅವರಿಗೆ ಸಂಗ್ರಹಿತ ಹಸ್ತಾಕ್ಷರದೊಂದಿಗೆ ಕೋರಿಕೆ ಪತ್ರ ರವಾನೆ.
*೨೦೦೨ರಲ್ಲಿ ಉದ್ಯೋಗ ನಿಮಿತ್ತ ಯು.ಎ.ಇ.ಗೆ ವಲಸೆ. ಧ್ವನಿ ಬಳಗದ ಘಟಕ ಸ್ಥಾಪನೆ. ಯು.ಇ.ಎ. ಯಿಂದ ಕನ್ನಡದ ಚರಿತ್ರೆಯಲ್ಲಿನ ಪ್ರಪ್ರಥಮ ಆಂತಾರಾಷ್ಟ್ರೀಯ ಕವನ ಸ್ಪರ್ಧೆ ನಡೆಸಿ ಸಂಕಲನ ಬಿಡುಗಡೆ ರ್‍ಆಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸರ್ವೋತ್ತಮ ಶೆಟ್ಟಿಯವರಿಂದ. ಸಂಕಲನದ ಪ್ರತಿಗಳನ್ನು ಉಚಿತವಾಗಿ ಗ್ರಂಥಾಲಯಗಳಿಗೆ ಹಾಗೂ ಆಸಕ್ತರಿಗೆ ವಿತರಣೆ.
*ಕನ್ನಡ ಜನ ಜಾಗ್ರತಿಗಾಗಿ ಯು.ಎ.ಇ.ಯಿಂದ ನಾಡು ನುಡಿ ರಕ್ಷಣೆ ಬಗ್ಗೆ ಲೇಖನ ಸ್ಪರ್ಧೆ ಸಂಕಲನ ಪ್ರಕಟಣೆ ಮತ್ತು ಗ್ರಂಥಾಲಯಗಳಿಗೆ ಉಚಿತ ವಿತರಣೆ. ಸನ್ಮಾನ್ಯ ಮುಖ್ಯಮಂತ್ರಿಗಳು(ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ) ಸೇರಿದಂತೆ ಸಾವಿರಾರು ಕನ್ನಡಾಭಿಮಾನಿಗಳಿಂದ ಪ್ರಶಂಸೆ.
*ಯು.ಎ.ಇ.ಯಲ್ಲಿ ಕವಿಗೋಷ್ಠಿ, ಸಾಹಿತ್ಯಗೋಷ್ಠಿ, ಕನ್ನಡ ಪುಸ್ತಕ ಬಿಡುಗಡೆ ಮುಂತಾದ ಚಟುವಟಿಕೆಗಳು.
*ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ದೇಶ ವಿದೇಶಗಳ ಹಲವು ಸಂಘ ಸಂಸ್ಥೆ ಗಳ ಸದಸ್ಯತ್ವ.
*ಯು.ಎ.ಇ.ಯ ಚರಿತ್ರೆಯಲ್ಲಿನ ಅನಿವಾಸಿ ಕನ್ನಡಿಗರು ನಿರ್ದೇಶಿಸಿ, ಆಭಿನಯಿಸಿದ ಪ್ರಪ್ರಥಮ ಕನ್ನಡ ನಾಟಕ ತಾ.೨೩.೦೩.೨೦೦೭ರಂದು ಗಿರೀಶ್ ಕರ್ನಾಡರ "ನಾಗಮಂಡಲ" ನಿರ್ದೇಶಿಸಿ ರಂಗವೇರಿಸಿದ ಕೀರ್ತಿ. ಆದೇ ಸಂದರ್ಭದಲ್ಲಿ ಬಿ.ಜಯಶ್ರೀ ಅವರಿಗೆ ಸನ್ಮಾನ, ಶ್ರೀರಂಗ ರಂಗ ಪ್ರಶಸ್ತಿ ಪುರಸ್ಕಾರ.
* ಧ್ವನಿ ಪ್ರತಿಷ್ಠಾನದಿಂದ ಡಾ.ಆದ್ಯರಂಗಾಚಾರ್ಯ(’ಶ್ರೀರಂಗ’) ರಂಗ ಪ್ರಶಸ್ತಿಯ ಸ್ಥಾಪನೆ.
* ೨೦.೦೬.೨೦೦೮ ಭಾರತೀಯ ದೂತವಾಸ ಸಭಾಗೃಹದಲ್ಲಿ ಗಿರೀಶ್ ಕಾರ್ನಾಡರ "ಹಯವದನ’ ನಾಟಕ ನಿರ್ದೇಶನ. ಡಾ.ಚಂದ್ರಶೇಖರ ಕಂಬಾರ ಮುಖ್ಯ ಅತಿಥಿ.
* ೨೦೦೮ ನೇ ಸಾಲಿನ ಶ್ರೀರಂಗ ರಂಗ ಪ್ರಶಸ್ತಿ ಪ್ರಖ್ಯಾತ ರಂಗಕರ್ಮಿ ಶ್ರೀ ಶ್ರೀನಿವಾಸ ಕಪ್ಪಣ್ಣ ಅವರಿಗೆ ಫ್ರೊ.ಚಂದ್ರಶೇಖರ ಕಂಬಾರ ಅವರಿಂದ ಪ್ರದಾನ. ಧ್ವನಿ ಪುರಸ್ಕಾರ-೨೦೦೮- ಪ್ರಶಸ್ತಿ ಜರಗನಹಳ್ಳಿ ಶಿವಶಂಕರ ಅವರಿಗೆ ನೀಡಲಾಯಿತು.
* ೨೦೦೯ ರ ಸಾಲಿನ ಶ್ರೀರಂಗ ರಂಗ ಪ್ರಶಸ್ತಿ ರಂಗಕರ್ಮಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಚಲಚಿತ್ರ ನಿರ್ದೇಶಕ ಶ್ರಿ ಟಿ.ಎಸ್. ನಾಗಭರಣ ಅವರಿಗೆ ನೀಡಲಾಯಿತು. ಹಾಗೂ ಧ್ವನಿ ಪುರಸ್ಕರ ೨೦೦೯ -ಡಾ. ಸೀ. ಸೋಮಶೇಖರ್ ಅವರಿಗೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಬಿ.ವಿ. ರಾಜಾರಾಂ ಅವರು ವಹಿಸಿದ್ದರು.
* ಧ್ವನಿ ಪ್ರತಿಷ್ಠಾನದ ೨೪ನೇ ವಾರ್ಷಿಕೋತ್ಸವಕ್ಕೆ "ರಂಗ ಸಿರಿ ಉತ್ಸವ-೨೦೦೯" ಎಂಬ ಶೀರ್ಷಿಕೆಯೊಂದಿಗೆ ದುಬೈ ಯ ಸರ್ಕಾರಿ ಸೌಮ್ಯದ ಅಲ್ ನಶ್ವನ್ ಸಭಾಗೃಹದಲ್ಲಿ ೨೬.೦೬.೨೦೦೯ ಆಚರಣೆ. ಕಾರ್ಯಕ್ರಮದಲ್ಲಿ ಪ್ರಕಾಶ್ ರಾವ್ ಪಯ್ಯಾರ್ ಅವರ ನಿರ್ದೇಶನದಲ್ಲಿ ಡಾ. ಗಿರೀಶ್ ಕಾರ್ನಡರ ನಾಟಕ "ಒಡಕಲು ಬಿಂಬ" ಯಶಸ್ವಿ ಪ್ರಯೋಗ. ಶ್ರೀಮತಿ ನಾಗಿಣಿ ನಾಗಾಭರಣ ಅವರ ಕೂಚುಪುಡಿ ನೃತ್ಯ ಹಾಗೂ ನಾಗಭರಣ, ಡಾ.ಬಿ.ವಿ.ರಾಜಾರಾಂ ಅವರಿಂದ ರಂಗ ಗೀತೆಗಳು, ಮತ್ತು ಅಣುಕು ಪ್ರದರ್ಶನ ದುಬೈ ಕನ್ನಡಿಗರಿಗೆ ಹೊಸ ಅನುಭವ ನೀಡಿತ್ತು.
- ಈ ಎಲ್ಲಾ ಕಾರ್ಯಕ್ರಮಗಳ ರೂವಾರಿ-ಪ್ರಕಾಶ್ ರಾವ್ ಪಯ್ಯಾರ್.
ಪ್ರಮುಖ ರಂಗ ಚಟುವಟಿಕೆಗಳು:
ನಿರ್ದೇಶಿಸಿದ ಯಶಸ್ವಿ ಪ್ರಮುಖ ನಾಟಕಗಳು:
ನಾಟಕದ ಹೆಸರು: ಲೇಖಕರು: ರಂಗಮಂದಿರ
ಅಕ್ಕತಂಗಿಯರೇ.... ಪ್ರಕಾಶ್ ರಾವ್ ಪಯ್ಯಾರ್ ಶ್ರೀ ಮಹಾವೀರ ಕಾಲೇಜ್-ಮೂಡುಬಿದಿರೆ
ನೀ ಮಾಯೆಯೊಳಗೋ ..ನಿನ್ನೊಳು ಮಾಯೇಯೋ.. ಶ್ರೀರಂಗ ಕರ್ನಾಟಕ ಸಂಘ ಮಾಟುಂಗ-ಮುಂಬೈ
ಪತನ .. ಅ.ಕೃ.ನಾ. ಕರ್ನಾಟಕ ಸಂಘ ಮಾಟುಂಗ- ಮುಂಬೈ
ಸತ್ಯವಾನ ಸಾವಿತ್ರಿ ಕೆದಂಬಾಡಿ ಜತ್ತಪ್ಪ ರೈ ಬಿರ್ಲಾ ಮಾತೊಶ್ರೀ- ಮುಂಬೈ
ಎಕಲವ್ಯ ಕೈಲಾಸಂ ಕರ್ನಾಟಕ ಸಂಘ, ಮುಂಬೈ
ರಾಯರಾವುತೆ ಅಮೃತ ಸೋಮೆಶ್ವರ ಬಿರ್ಲಾ ಮಾತೊಶ್ರೀ, ಮುಂಬೈ
ಗೊಂದೊಲು ಅಮೃತ ಸೋಮೆಶ್ವರ ಪಾಟ್ಕರ್ ಹಾಲ್, ಮುಂಬೈ
ಆಟ ಮುಗಿಂಡು ಅಮೃತ ಸೋಮೆಶ್ವರ ಪಾಟ್ಕರ್ ಹಾಲ್, ಮುಂಬೈ
ಗರುಡಗಂಭ ರಾಮದಾಸ ಘಾಟ್ಕೋಫರ್ ಹೈಸ್ಕೂಲ್, ಮುಂಬೈ
ಮಹಾಭಾರತ ವೇಣುಗೋಪಾಲ್ ಕಾಸರಗೋಡುಕರ್ನಾಟಕ ಸಂಘ
ಯಮಳ ಪ್ರಶ್ನೆ ಪೂರ್ಣಚಂದ್ರ ತೇಜಸ್ವಿ ಕರ್ನಾಟಕ ಸಂಘ, ಮುಂಬೈ
ರೆಕ್ಕೆ ಚಂದ್ರಕಾಂತ ಕೂಸನೂರ ಪಾಟ್ಕರ್ ಹಾಲ್- ಮುಂಬೈ
ನಾಗಮಂಡಲ ಗಿರೀಶ್ ಕಾರ್ನಾಡ್ ಭಾರತೀಯ ದೂತವಾಸ-ದುಬೈ
ಹಯವದನ ಗಿರೀಶ್ ಕಾರ್ನಾಡ್ ಭಾರತೀಯ ದೂತವಾಸ-ದುಬೈ
ಒಡಕಲು ಬಿಂಬ ಗಿರೀಶ್ ಕಾರ್ನಾಡ್ ನಶ್ವನ್ ಸಭಾಗೃಹ, ದುಬೈ
ಪ್ರಮುಖ ಸ್ವರಚಿತ ಪ್ರಕಟಿತ ನಾಟಕಗಳು:
೧. ಇಂದಿರಾ ಪ್ರಿಯದರ್ಶಿನಿ-೧೯೯೯
೨. ಸೂರ್ಯನಿಗೊಂದು ಸವಾಲು-೨೦೦೦
ಪ್ರಮುಖ ಸಂಪಾದಿತ ರಂಗಭೂಮಿ ವಿಮರ್ಶಾ ಕೃತಿ:
ರಂಗಧ್ವನಿ-೧೯೯೦
ಈ ಕೃತಿಯಲ್ಲಿ -ಕೀರ್ತಿನಾಥ ಕುರ್ತಕೋಟಿ, ಹೆಚ್.ಕೆ.ರಂಗನಾಥ್, ಸಿಂಧುವಳ್ಳಿ ಅನಂತಮೂರ್ತಿ, ಅರವಿಂದ ಮಾಲಗತ್ತಿ, ನಾರಾಯಣ್ ರಾಯಚೂರು,ನಾ.ದಾಮೊದರ ಶೆಟ್ಟಿ, ಮಾರುತಿ ಶ್ಯಾನುಬಾಗ್, ಮುಂತಾದ ೧೨ ಮಂದಿ ರಂಗತಜ್ಞರು, ವಿಮರ್ಶಕರ ಲೇಖನಗಳಿವೆ.
*ಹಲವಾರು ನಾಟಕ ಕಾರ್ಯಗಾರಗಳ ಆಯೋಜನೆ.
*ಹಲವಾರು ನಾಟಕ ಗಳಿಗೆ ಬೆಳಕು ಸಂಯೋಜನೆ.
*ಹಲವು ನಾಟಕಗಳಲ್ಲಿ ರಂಗ ಸಂಯೋಜನೆಗಳಿಗೆ ಸಹಕಾರ.
ಸೌಜನ್ಯ: ಗಲ್ಫ್ ಕನ್ನಡಿಗ