ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ನವೆಂಬರ್ 13 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.

ದುಬೈ: ನವೆಂಬರ್ 13 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.

Tue, 10 Nov 2009 20:08:00  Office Staff   S.O. News Service
ದುಬೈ, ನವೆಂಬರ್ 10:  ನಗರದಲ್ಲಿ ಕನ್ನಡಪರ ಚಟುವಟಿಕೆಗಳಿಂದ ಕಾರ್ಯನಿರತವಾಗಿರುವ ಕನ್ನಡ ಕೂಟ ಯು.ಎ.ಇ. ಸಂಘಟನೆ ಈ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ನಗರದ ಅಲ್ ಬರ್ಶಾ ದಲ್ಲಿರುವ ಜೆ.ಎಸ್.ಎಸ್. ಶಾಲಾ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಿದೆ.

ಕರ್ನಾಟಕದ ಖ್ಯಾತ ವಿದ್-ಯೂಥ್ ತಂಡದ ಸುಮಾರು ಒಂದು ಡಜನ್ ಕಲಾವಿದರು ಆಗಮಿಸಲಿದ್ದು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈ ಕೆಳಗೆ ನೀಡಲಾಗಿದೆ.
 
11-dxb5.jpg 
ಎಲ್ಲಾ ಕನ್ನಡಿಗರು ಈ ಕಾರ್ಯಕ್ರಮಕ್ಕೆ ಹಾಜರಾಗಿ ರಾಜ್ಯೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲು ವಿನಂತಿಸಿಕೊಳ್ಳಲಾಗಿದೆ.


Share: