ದುಬೈ, ನವೆಂಬರ್ ೫: ಇನ್ನು ನಾಲ್ಕು ವಾರಗಳ ಬಳಿಕ ಬರುವ ಶುಕ್ರವಾರ (ಡಿಸೆಂಬರ್ 4) ನ್ನು ಈಗಲೇ ನಮ್ಮ ಕ್ಯಾಲೆಂಡರುಗಳಲ್ಲಿ ದಾಖಲಿಸಿಕೊಳ್ಳುವುದೊಳಿತು. ಏಕೆಂದರೆ ಅಂದು ಯು.ಎ.ಇ.ಯಲ್ಲಿರುವ ಕನ್ನಡಿಗರಿಗೆ ಹಾಸ್ಯದ ಹೊಳೆಯಲ್ಲಿ ಮಿಂದು ಪಾವನರಾಗುವ ಅಪೂರ್ವ ಅವಕಾಶವೊಂದು ಕಲ್ಪಿತವಾಗಲಿದೆ. ಈ ಹೊಳೆ ನಗರದ ಅಲ್ ಬರ್ಷಾದಲ್ಲಿರುವ ಜೆ.ಎಸ್.ಎಸ್. ಜೆ.ಎಸ್.ಎಸ್. ಇಂಟರ್ ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ಹರಿಯಲಿವೆ. ಕನ್ನಡದ ಎರೆಡು ಹಾಸ್ಯನದಿಗಳಾದ ಪ್ರಾಣೇಶ್ (ಗಂಗಾವತಿ ಬೀಚಿ) ಮತ್ತು ರವಿ ಭಜಂತ್ರಿ ಎಂಬ ಎರೆಡು ಹಾಸ್ಯನದಿಗಳು ಯು.ಎ.ಇ. ಕನ್ನಡಿಗರನ್ನು ತಮ್ಮ ಸೆಳೆತದಲ್ಲಿ ಮುಳುಗಿಸಲಿವೆ.
ಈ ನದಿಗಳನ್ನು ಭಾರತದಿಂದ ಭಗೀರತ ಪ್ರಯತ್ನದ ಬಳಿಕ ಯು.ಎ.ಇ. ಮರುಭೂಮಿಯಲ್ಲಿ ಹರಿಸುವಂತೆ ಮಾಡಲು ನಗರದ - ನಾವು ನಮ್ಮ ಕನ್ನಡ - ದುಬೈ ಯು.ಎ.ಇ. ಸಂಘಟನೆ ಶ್ರಮವಹಿಸಿದೆ.
ನಕ್ಕು ನಕ್ಕು ದೇಹದ ಅಮೂಲ್ಯ ಇಂಧನವನ್ನು ಖಾಲಿಮಾಡಿಕೊಂಡ ಬಳಿಕ ಭೋಜನದ ಮೂಲಕ ಮರುತುಂಬಿಸಿಕೊಳ್ಳಲೂ ವ್ಯವಸ್ಥೆ ಮಾಡಲಾಗಿದೆ.

ಮುಖ್ಯವಾಗಿ ಈ ಕಾರ್ಯಕ್ರಮವನ್ನು ಉತ್ತರ ಕರ್ನಾಟಕದ ನೆರೆಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಧನಸಂಗ್ರಹದ ಉದ್ದೇಶದೊಂದಿಗೆ ಆಯೋಜಿಸಲಾಗಿದ್ದು ಸಂಗ್ರಹವಾದ ಧನವನ್ನು ’ಮೈಸೂರು ಸಿಟಿಜನ್ಸ್ ಫೋರಂ’ ಸಂಘಟನೆಗೆ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವ (ತನ್ಮೂಲಕ ಹಾಸ್ಯನದಿಯಲ್ಲಿ ಮುಳುಗಲಿರುವ) ಅಭಿಮಾನಿಗಳು ತಮ್ಮ ಆಸನಗಳನ್ನು ಒಂದು ಕರೆ ಮಾಡುವ ಮೂಲಕ ಸ್ಥಳಗಳನ್ನು ನೋಂದಾಯಿಸಿಕೊಳ್ಳಲು ನಿವೇದಿಸಿಕೊಳ್ಳಲಾಗಿದೆ.
ದಿ ಮೈಸೂರ್ ಸಿಟಿಜನ್ ಫೋರಂ ಸಂಘಟನೆ ಭಾರತದಾದ್ಯಂತ ನೈಸರ್ಗಿಕ ಪ್ರಕೋಪಗಳಿಗೆ ತುತ್ತಾದ ಜನರಿಗೆ ನೆರವನ್ನು ನೀಡುತ್ತಾ ಬಂದಿದ್ದು ಪ್ರಸ್ತುತ ಇತ್ತೀಚಿನ ನೆರೆಸಂತ್ರಸ್ತರಿಗೆ ತನ್ನ ಕೈಲಾದ ನೆರವು ನೀಡುತ್ತಿದೆ.
೨೦೦೪ ರ ಭೀಕರ ತ್ಸುನಾಮಿ ಯಲ್ಲಿ ತಮಿಳುನಾಡಿನ ಮುಡಲಿರ್ಕುಪ್ಪಂ ಗ್ರಾಮಸ್ಥರಿಗೆ ಇನ್ನೂರೈವತ್ತಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದೆ ಹಾಗೂ ಒಂದು ಶಾಲೆಯನ್ನು ನಿರ್ಮಿಸಿ ಆ ಜನರು ನೆಮ್ಮದಿಯಿಂದ ಬಾಳಲು ಅನುವುಮಾಡಿಕೊಟ್ಟಿದೆ. ತ್ಸುನಾಮಿಯಲ್ಲಿ ಮನೆಮಠ ಕಳೆದುಕೊಂಡ ಮೂವತ್ತು ಮೀನುಗಾರರಿಗೆ ಮೋಟಾರು ಬೈಕುಗಳನ್ನು ದಾನ ಮಾಡುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಲು ನೆರವು ನೀಡಿದೆ.
ಅಲ್ಲದೇ ರೂ. ಒಂದು ಲಕ್ಷ ಬೆಲೆಬಾಳುವ ಐದು ಸಾವಿರ ಮನೆಗಳನ್ನು ಸಂತ್ರಸ್ತರಿಗೆ ಕಟ್ಟಿಕೊಟ್ಟಿದೆ. ಐವತ್ತು ಸಾವಿರಕ್ಕೂ ಹೆಚ್ಚು ದೇಣಿಗೆ ನೀಡಿದವರ ಹೆಸರನ್ನು ಕಟ್ಟಿದ ಮನೆಯೆದುರು ಬರೆಯಲಾಗುವುದು ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ಈ ಕೆಳಕಂಡವರನ್ನು ಸಂಪರ್ಕಿಸಬಹುದಾಗಿದೆ:
Sri. Vasudev S Devagiri – 050 4565024,
Sri. Mahadev K Joshi – 050 3531396,
Sri. Girish Patil – 050 5584123,
Sri. R. K. Kulkarni – 050 4530093,
Sri. Suraj Palled- 050 6532104,
Sri. Murugesh Gajare – 050 7256594,
Sri. Shivanand Challamarad- 050 5506309,
Sri. Satish Hinder – 050 4734349,
Sri. Chandrashekar Lingadalli – 050 6883276,
Sri. Kallor Guruswami – 050 2756865,
Sri. Mallikarjun Mullur – 050 4694036,
Dr. Asha Rani – 050 7559216,
Sri. Mahantesh Baddi – 050 5537306,
Sri. Ravi Pugashetty- 050 8696569,
Sri. Sunil Horaginamani – 050 0552341285