ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮ

ದುಬೈ: ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮ

Wed, 03 Mar 2010 03:25:00  Office Staff   S.O. News Service

ದುಬೈ, ಮಾರ್ಚ್ ೩: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು. . ವತಿಯಿಂದ ದಿನಾಂಕ ೨೬ - ೦೨ - ೨೦೧೦ ನೇ ಶುಕ್ರವಾರ ಮಗ್ರಿಬ್ ನಮಾಜಿನ ಬಳಿಕ ಮಿಲಾದ್ ಆಚರಣೆ ಮತ್ತು ಮೌಲಿದ್ ಕಾರ್ಯಕ್ರಮವು ದೇರದಲ್ಲಿರುವ ಅಶ್ರಫಿ ಕಟ್ಟಡದಲ್ಲಿ ಜರಗಿತು.

                       

ಜನಾಬ್ ಸಯ್ಯದ್ ಹಸ್ಸನ್ ಆಟಕೋಯ ತಂಞಳ್ ಅದೂರ್ ರವರು ದುವಾ: ನೆರವೇರಿಸಿದರು. ಮೌಲಿದ್ ನೇತ್ರತ್ವವನ್ನು ಜನಾಬ್ ಇಬ್ರಾಹಿಂ ಸಖಾಫಿ ಕೆದಂಬಾಡಿ, ಜನಾಬ್ ಅಬ್ದುಲ್ಲ ಮುಸ್ಲಿಯಾರ್ ಬೋಲ್ಮಾರ್, ಜನಾಬ್ ಅಬೂಬಕ್ಕರ್ ಮುಸ್ಲಿಯಾರ್ ಕೊಡುಂಗಾಯಿ, ಜನಾಬ್ ಮಹಮ್ಮದ್ ಮುಸ್ಲಿಯಾರ್, ಜನಾಬ್ ಇಬ್ರಾಹಿಂ ಮುಸ್ಲಿಯಾರ್, ಜನಾಬ್ ಕಾಸಿಂ ಮುಸ್ಲಿಯಾರ್ ಸರಳಿಕಟ್ಟೆ, ಜನಾಬ್ ಇಬ್ರಾಹಿಂ ಮುಸ್ಲಿಯಾರ್ ಮತ್ತು ಜನಾಬ್ ಹಸ್ಸನ್ ಮುಸ್ಲಿಯಾರ್ ರವರು ವಹಿಸಿದರು.

                       

ಮೌಲಿದ್ ಬಳಿಕ ಜನಾಬ್ ಇಬ್ರಾಹಿಂ ಸಖಾಫಿ ಕೆದಂಬಾಡಿ ರವರು ಪ್ರವಾದಿ ಮುಹಮ್ಮದ್ ಮುಸ್ತಫಾ (. ) ರವರ ಜೀವನ ಚರಿತ್ರೆ, ಪ್ರವಾದಿ ಪ್ರೇಮ ಮುಂತಾದ ಹಲವಾರು ವಿಷಯಗಳ ಕುರಿತು ಸವಿವರವಾಗಿ ತಿಳಿಸಿದರು. ನಂತರ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು. . ರಾಷ್ಟ್ರೀಯ ಕಮಿಟಿಯ ಉಪಾದ್ಯಕ್ಷರಾದ ಜನಾಬ್ ಎಂ. ಮೂಳೂರ್ ರವರು ಇಂಟರ್ ನೆಟ್ ನಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (. ) ರವರ ಕುರಿತು ಬರುವ ಇಮೇಲ್ ಗಳ ಬಗ್ಗೆ ಮತ್ತು ದಕ್ಷಿಣ ಕನ್ನಡ ಸುನ್ನಿ ಸೆಂಟರ್ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು.

                       

ಮುಖ್ಯ ಅಥಿತಿಗಳಾಗಿ ಇಬ್ರಾಹಿಂ ಹಾಜಿ, ಎಸ್.ಯೂಸುಫ್ ಅರ್ಲಪದವು, . ಕೆ ಇಬ್ರಾಹಿಂ ಕಿನ್ಯ, ಮೂಸ ಹಾಜಿ ಕಿನ್ಯ, ಅಬ್ಬು ಹಾಜಿ ಕಿನ್ಯ, ಮಹಮ್ಮದ್ ಹಾಜಿ ಗೂಡಿನಬಳಿ, ಇಕ್ಬಾಲ್ ಕಣ್ಣಂಗಾರ್, ಅಬ್ದುಲ್ ಮಜೀದ್ ಕಾಪಿಕಾಡ್, ಹೈದರ್ ಮಂಜನಾಡಿ, ಇಸ್ಮಾಯಿಲ್ ಬಾರೋದ್, ಅಬ್ಬಾಸ್ ಪಾಣಜೆ, ಅಬ್ದುಲ್ ರಹಿಮಾನ್ ಸಜಿಪ, ನವಾಜ್ ಕೂಟೆಕಾರ್, ಮಜೀದ್ ಹಾಜಿ, ಆಶ್ರಫ್ ಹುಸೈನ್ ಕೊಲ್ನಡ್, ಹುಸೈನ್ ಕಿನ್ಯ, ಮಹಮ್ಮದ್ ಅಲಿ ವೆಣೂರ್, ಹುಸೈನ್ ಮುಸ್ಲಿಯಾರ್, ಅಬ್ದುಲ್ ರಜಾಕ್ ಬುಳರಿಕಟ್ಟೆ, ಕಮಾಲ್ ಅಜ್ಜಾವರ. ಮತ್ತು ಹಲವಾರು ದೀನಿ ಪ್ರೇಮಿಗಳು ಆಗಮಿಸಿದ್ದರು.

                               

ಬದ್ರುದ್ದೀನ್ ಹೆಂತಾರ್ ರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬೋಜನದ ವ್ಯವಸ್ಥೆ ಮಾಡಲಾಗಿತ್ತು.

 

ವರದಿ : ಅಬ್ದುಲ್ ಹಮೀದ್ ಸಿ.ಹೆಚ್ - ದುಬೈ.


Share: