ಅಬುಧಾಬಿ, ಡಿಸೆಂಬರ್ ೯:ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಲಾಗುತ್ತಿರುವ ಪ್ರಸಿದ್ಧ ಕೋಸಮ್ಮ ಶಂಬು ಶೆಟ್ಟಿ ತ್ರೋಬಾಲ್ ಟೂರ್ನಮೆಂಟ್ ನ ಹೊಸ ಪಂದ್ಯಾವಳಿ ಯು ಹೊಸ ವರ್ಷ 2010ರ ಜನವರಿ 22 ರಂದು ನಡೆಯಲ್ಲಿದ್ದು ಎಲ್ಲಾ ಸಿದ್ದತೆ ಈಗಾ ಗಲೇ ಭರದಿಂದ ಸಾಗುತ್ತಿದೆ.
ಆಯೋಜಕ ಶ್ರೀ ಸರ್ವೊತ್ತಮ ಶೆಟ್ಟಿ ಯವರ ಪತ್ರಿಕಾ ಪ್ರಕಟಣೆಯಂತೆ ಈಗಾಗಲೇ 8 ಬಲಿಷ್ಟ ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿ ಬಹಳ ಉತ್ಸುಕತೆ ತೋರಿದ್ದಾರೆ.
ಅಬುಧಾಬಿ ಇಂಡಿಯನ್ ಹೈಸ್ಕೂಲ್ ಹೊರಾಂಗಣದಲ್ಲಿ ನಡೆಯಲಿರುವ ಈ ಆಕರ್ಶಕ ಮತ್ತು ಪ್ರತೀ ವರ್ಷ ಅತೀ ನಿರೀಕ್ಷಿಸುವ ಮೇರು ಪಂದ್ಯಾವಳಿಯನ್ನು ಎನ್.ಎಮ್.ಸಿ. ಯ ಮುಖ್ಯಸ್ಥ ಹಾಗು ಮುಖ್ಯ ಆಡಳಿತಗಾರ ಡಾ. ಶ್ರೀ ಬಿ.ಆರ್.ಶೆಟ್ಟಿ ಮತ್ತು ಶ್ರೀಮತಿ ಡಾ.ಚಂದ್ರಕುಮಾರಿ ಶೆಟ್ಟಿಯವರು ಬೆಳೆಗ್ಗೆ 8 ಘಂಟೆಗೆ ಉದ್ಘಾಟಿಸಲಿರುವರು.