ದುಬೈ, ನವೆಂಬರ್ 28: ಯು.ಎ.ಇ.ಯಾದ್ಯಂತ ಈದ್ ಉಲ್ ಅಧಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಇಡಿಯ ಸಂಸ್ಥಾನದಲ್ಲಿ ಬೆಳಿಗ್ಗೆ ಏಳು ಘಂಟೆಗೆ ಸರಿಯಾಗಿ ಈದ್ ನಮಾಜ್ ಹಾಗೂ ಖುತ್ಬಾ ನೆರವೇರಿಸಲಾಯಿತು.

ದುಬೈ ನಗರದ ದೇರಾದಲ್ಲಿರುವ ಅಲ್ ರಾಸ್ ಈದ್ಗಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಈದ್ ಪ್ರಾರ್ಥನೆಯನ್ನು ಡಾ. ಅಬ್ದುಲ್ ಅಜೀಜ್ ಅಲ್ ಹದ್ದಾದ್ ರವರ ಇಮಾಮ್ ನೇತೃತ್ವದಲ್ಲಿ ನಿರ್ವಹಿಸಲಾಯಿತು.
ಈದ್ ಪ್ರಾರ್ಥನೆಯ ಬಳಿಕ ಖುರ್ಬಾನಿಯನ್ನು ನೀಡಲಾಯಿತು. ರಾಜಧಾನಿ ಅಬುಧಾಬಿಯಲ್ಲಿ ನಾಳೆ (ಭಾನುವಾರ) ಸಾಮೂಹಿಕ ಖುರ್ಬಾನಿ ನೆರವೇರಿಸಲಾಗುವುದು ಎಂದು ತಿಳಿದುಬಂದಿದೆ.






ಈದ್ ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರು ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಪಟ್ಟರು.
ಚಿತ್ರ, ವರದಿ: ಜಿಲಾನಿ ಮೊಹ್ತಿಶಾಮ್, ದುಬೈ.