ಮಕ್ಕಾ(ಸೌದಿ ಅರೇಬಿಯಾ) ನವೆಂಬರ್ 23: ಜಗತ್ತನ್ನು ಕಾಡುತ್ತಿರುವ ಉಗ್ರವಾದಾದ ವಿರುದ್ಧ ಜನಜಾಗೃತಿ ಮೂಡಿಸಲು ವಿಶ್ವದ ಎಲ್ಲಾ ಧರ್ಮದ ಧರ್ಮಗುರುಗಳು ಮತ್ತು ಸಂಘಟನೆಗಳು ಮುಂದಾಗಬೇಕೆಂದು ಸೌದಿ ಅರೇಬಿಯಾದ ಆಡಳಿತಾಧಿಕಾರಿ ಕಿಂಗ್ ಅಬ್ದುಲ್ಲಾ ಕರೆ ನೀಡಿದರು.
ಇಲ್ಲಿ ಜರುಗಿದ ಹತ್ತನೇ ಮುಸ್ಲಿಂ ವರ್ಲ್ಡ್ ಲೀಗ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಭಯೋತ್ಪಾದನೆಯಂತಹ ಕೃತ್ಯಗಳ ಮೂಲಕ ಇಸ್ಲಾಮಿನ ಮತ್ತು ಮುಸ್ಲಿಮರ ಹೆಸರನ್ನು ಕೆಡಿಸಲು ಕೆಲವು ಮೂಲಭೂತವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಅಮೇರಿಕಾ ಮತ್ತು ಇತರ ಕೆಲವು ದೇಶಗಳಲ್ಲಿ ನಡೆದ ಭಯೋತ್ಪಾದಕ ದಾಳಿ ಇಸ್ಲಾಮಿನ ಹೆಸರಿಗೆ ಕಳಂಕ ತರಲು ಸಹಕರಿಸಿದೆ. ಇಂತಹ ದಾಳಿಗಳನ್ನು ತಡೆಯಲು ಮತ್ತು ಉಗ್ರವಾದದ ಕಡೆ ಯುವ ಜನತೆ ಆಕರ್ಷಿತರಾಗುವುದನ್ನು ತಪ್ಪಿಸಲು ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಜನರು ಧಾರ್ಮಿಕ ಆಚರಣೆಗಳನ್ನು ಸರಿಯಾಗಿ ಪಾಲಿಸುವುದರ ಜೊತೆಗೆ ಉನ್ನತ ವಿಧ್ಯಾಭ್ಯಾಸದ ಕಡೆಗೆ ಹೆಚ್ಚಿನ ಒತ್ತು ಕೊಡಬೇಕು. ಈ
ಮೂಲಕ ಸಮಾಜದಲ್ಲಿ ಅಭಿವೃದ್ದಿಯನ್ನುಂಟು ಮಾಡಲು ಪ್ರಯತಿಸಬೇಕು ಎಂದು ಕರೆ ಅವರು ಹೇಳಿದರು.
ವರದಿ: ಅಶ್ರಫ್ ಮಂಜ್ರಾಬಾದ್.