ಭಟ್ಕಳ:ಇತ್ತಿಚೆಗೆ ನಗರದ ನ್ಯೂ ಇಂಗ್ಲಿಷ್ ಶಾಲ ಆವರಣದ ಕಲಾವತಿ ಮತ್ತು ರಾಮನಾಥ ಶಾನಭಾಗ ಸಭಾಂಗಣದಲ್ಲಿ ನಿರ್ಮಿಸಿದ ಮಾಳ್ಕೋಡ್ ನಾರಾಯಣ ಹೆಗಡೆ ವೇದಿಕೆಯಲ್ಲಿ ಜರುಗಿದ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜರುಗಿದ ಬಹುಭಾಷ ಕವಿಗೋಷ್ಠಿ ಸಭಿಕರನ್ನು ರಂಜಿಸಿತು. ಭಟ್ಕಳದ ಖ್ಯಾತ ನವಾಯತಿ ಕವಿ ಹಾಗೂ ಸುಶ್ರಾವ್ಯ ಕಂಠದೊಂದಿಗೆ ಹಾಡಿ ಪ್ರೀಕ್ಷಕರ ಮನವನ್ನು ತಣಿಸು ಸೈಯ್ಯದ್ ಸಮಿಉಲ್ಲಾ ಬರ್ಮಾವರ ಬಹುಭಾಷ ಕವಿಗೋಷ್ಟಿಯ ಕೇಂದ್ರಬಿಂದುವಾಗಿದ್ದರು. ನವಾಯತಿ ಬಾರದ ಕನ್ನಡಿಗರು ಸಹ ಇವರ ಮಧುರವಾದ ಕಂಠಕ್ಕೆ ತಲೆದೂಗುತ್ತಿದ್ದರು. ಹಾಗೆಯೆ ಡಾ. ಮುಹಮ್ಮದ್ ಹನಿಫ್ ಶಬಾಬ್ ರವರು ಸಹ ತಮ್ಮ ದೆ ಆದ ಶೈಲಿಯಲ್ಲಿ ಕವನವನ್ನು ವಾಚಿಸಿ ಸೈ ಎನಿಸಿಕೊಂಡರು. ಅಲ್ಲದೆ ಯುವ ಕವಿ ಉಮೇಶ ಮುಂಡಳ್ಳಿ ತಮ್ಮ ಜಾನಪದ ಗಾಯನ ಶೈಲಿಯಲ್ಲಿ ತಮ್ಮ ಸ್ವರಚಿತ ಕವನವನ್ನು ಹಾಡಿ ಸಭಿಕರನ್ನು ರಂಜಿಸಿದರು. ಶ್ರೀಧರ್ ಶೇಟ್ ತಮ್ಮ ಕೊಂಕಣಿಭಾಷೆಯ ಕವಿತೆಯನ್ನು ವಾಚಿಸಿದರೆ ಹಿಂದಿ ಕವಿತೆಯನ್ನು ಅಂಜುಮನ್ ಕಲಾಮತ್ತು ವಾಣಿಜ್ಯ ಕಾಲೆಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಕೆ.ಸಿ.ನಝೀರ್ ಆಹ್ಮದ್ ವಾಚಿಸಿದರು. ಅಲ್ಲದೆ ಈ ಬಹುಭಾಷ ಕವಿಗೋಷ್ಠಿ ಯಲ್ಲಿ ಮಾಣೇಶ್ವರ ನಾಯ್ಕ, ವೆಂಕಟೇಶ್ ನಾಯ್ಕ, ವಿಜಯ್ ಗುನಗಾ, ನೇತ್ರವತಿ ಆಚಾರ್ಯ, ಕುಮಾರಿ ರೇಷ್ಮಾ, ಎಮ. ಮರಿಸ್ವಾಮಿ, ಆರ್. ಭಾಸ್ಕರ್, ಮುಂತಾದರು ತಮ್ಮ ಸ್ವರಚಿತ ಕವನವನ್ನು ವಾಚಿಸುವುದರ ಮೂಲಕ ಸಾಹಿತ್ಯಾಭಿಮಾನಿಗಳ ಹೃದಯವನ್ನು ಗೆದ್ದುಕೊಂಡರು.