ದಮಾಮ್ (ಸೌದಿ ಅರೇಬಿಯಾ) ಡಿಸೆಂಬರ್ 28: ಇಂಡಿಯಾ ಫ್ರಟೆರ್ನಿಟಿ ಫೋರಮಿನ ಜೂನಿಯರ್ ಫ್ರಂಟ್ ವಿಭಾಗದ ವತಿಯಿಂದ ದಮಾಮಿನಲ್ಲಿ ಚಿಣ್ಣರ ಮೇಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜನಾಬ್ ಅಬ್ದುಲ್ ಸಲಾಂ ಮಾಸ್ಟರ್ ಮಕ್ಕಳು ಧಾರ್ಮಿಕ ಮತ್ತು ಲೌಕಿಕ ವಿಧ್ಯಾಭ್ಯಾಸವನ್ನು ಪಡೆಯುವುದರ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಹೇಳಿದರು.ಮುಂಬರುವ ಪೀಳಿಗೆ ಜಗತ್ತಿನಾದ್ಯಂತ ಈಗ ಇರುವ ಭ್ರಷ್ಟಾಚಾರ ಮೂಲಭೂತವಾದ ಮತ್ತು ಕೋಮುವಾದದ ವಿರುದ್ಧ ಹೋರಾಟನಡೆಸಿ ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜವನ್ನು ನಿರ್ಮಿಸಲು ಮುಂದಾಗಬೇಕೆಂದು ಅವರು ಕರೆನೀಡಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ದೇಶಭಕ್ತಿ ಗೀತೆಗಳ ಗಾಯನ, ಹಾಡು, ಕ್ರೀಡೆ ಮತ್ತು ರಸಪ್ರಶ್ನೆಗಳಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಗಳಲ್ಲಿ ಅತ್ಯಧಿಕ ಮಕ್ಕಳು ಭಾಗವಸಿ ವಿಜೇತರಾಗುವುದರ ಜೊತೆಗೆ ನೆರೆದಿದ್ದ ಪೋಷಕರ ಮತ್ತು ಜನರ ಮನರಂಜಿಸಿದರು.
ವರದಿ: ಅಶ್ರಫ್ ಮಂಜ್ರಾಬಾದ್.