ಮಕ್ಕಾ: (ಸೌದಿ ಅರೇಬಿಯಾ) ನವೆಂಬರ್ 29: ಅಂಗವಿಕಲ ಮತ್ತು ವಯಸ್ಸಾದ ಹಜ್ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ಸರ್ಕಾರ ಒದಗಿಸಿದ ವಿಶೇಷ ಸೌಲಭ್ಯಗಳಿಂದಾಗಿ ಇವರು ಈ ಬಾರಿ ಯಾವುದೇ ತೊಂದರೆ ಇಲ್ಲದೆ ಹಜ್ ನಿರ್ವಹಿಸಿದರು. ಪವಿತ್ರ ಕಾಬಾದ ಪ್ರದಕ್ಷಿಣೆ ಮಾಡಲು ಇವರಿಗಾಗಿ ನೂತನ ತಂತ್ರಜ್ಞಾನದ ಗಾಲಿ ಕುರ್ಚಿಗಳನ್ನು ಒದಗಿಸಲಾಗಿತ್ತು ಮತ್ತು ಮೀನಾ ಪ್ರದೇಶಕ್ಕೆ ಹೋಗಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಗಿತ್ತು.
ಇದರಿಂದಾಗಿ ಇವರು ಈ ಬಾರಿಯ ವ್ಯವಸ್ಥೆಯಿಂದ ಸಂತುಷ್ಟರಾದರು.
ವರದಿ: ಅಶ್ರಫ್ ಮಂಜ್ರಾಬಾದ್.