ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಶಾರ್ಜಾ:ನ 13ರಂದು ಶಾರ್ಜಾ ಕರ್ನಾಟಕ ಸಂಘ 7ನೇ ವರ್ಷಾಚರಣೆ ಮತ್ತು 'ಮಯೂರ ಪ್ರಶಸ್ತಿ' ಪ್ರಧಾನ ಸಮಾರಂಭ

ಶಾರ್ಜಾ:ನ 13ರಂದು ಶಾರ್ಜಾ ಕರ್ನಾಟಕ ಸಂಘ 7ನೇ ವರ್ಷಾಚರಣೆ ಮತ್ತು 'ಮಯೂರ ಪ್ರಶಸ್ತಿ' ಪ್ರಧಾನ ಸಮಾರಂಭ

Mon, 09 Nov 2009 03:13:00  Office Staff   S.O. News Service
 ಶಾರ್ಜಾ, ನವೆಂಬರ್ ೯:ಶಾರ್ಜಾ ವಿಭಾಗದಲ್ಲಿ ಕನ್ನಡಿಗರನ್ನು ಸಂಘಟಿಸಿಕೊಂಡು ನಾಡು ನುಡಿಯ ಸೇವೆಗೈ ಯುವ ಉದ್ಧೇಶದಿಂದ ಯಾವುದೇ ಪಲಾಪೇಕ್ಷೆ ಇಲ್ಲದೆ ರಾಜಕೀಯ ಧಾರ್ಮಿಕ ಭಾವನೆಗಳಿಗೆ ಅಸ್ಪದ ಕೊಡದೆ, ಕನ್ನಡ ಕಲೆ ಸಂಸ್ಕೃತಿ, ಭಾಷೆಯ ಬಗ್ಗೆ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರೀ ಉಮೇಶ್ ನಂತೂರ್ ರವರ ಅಧ್ಯಕ್ಷತೆಯಲ್ಲಿ "ಶಾರ್ಜಾ ಕರ್ನಾಟಕ ಸಂಘ" ಶಾರ್ಜಾ ಇಂಡಿಯನ್ ಅಸೋಸಿಯೇಶನ್ ಆಶ್ರಯದಲ್ಲಿ ೨೦೦೩ ರಲ್ಲಿ ಪ್ರಾರಂಭವಾಯಿತು.  ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭೆಗಳಿಗೆ ಸೂಕ್ತ ವೇಧಿಕೆ ದೊರೆತು ಕನ್ನಡ ಚಟುವಟಿಕೆಗಳು ಈ ಮಣ್ಣಿನಲ್ಲಿ ನಡೆದುಕೊಂಡು ಬರುವಂತಾಯಿತು.
 
9-dxb1.jpg 
ಶಾರ್ಜಾ ಕರ್ನಾಟಕ ಸಂಘದ ದ್ವಿತೀಯ ಅಧ್ಯಕ್ಷರಾಗಿ ಶ್ರೀ ಬಿ. ಕೆ. ಗಣೇಶ್ ರೈ, ತೃತಿಯ ಅಧ್ಯಕ್ಷರಾಗಿ ಶ್ರೀ ಪ್ರಭಾಕರ ಅಂಬಲತೆರೆ, ಉಪಾಧ್ಯಕ್ಶರುಗಳಾಗಿ ಶ್ರೀ ಪ್ರಭಾಕರ್ ಶೆಣೈ, ಶ್ರೀ ಮಹ್ಮದ್ ಶಾಹದ್ ಮತ್ತು ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ಶಾಂತರಾಮ್ ಆಚಾರ್, ಶ್ರೀ ಸತೀಶ್ ಪೂಜಾರಿ, ಶ್ರೀ ನಿತ್ಯಾನಂದ್ ರವರು ತಮ್ಮ ತಮ್ಮ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಇದೀಗ ಶ್ರೀ ನೋವೆಲ್ ಡಿ’ಅಲ್ಮೆಡಾ ರವರ ನಾಯಕತ್ವದಲ್ಲಿ, ಶ್ರೀ ಮಾರ್ಕ್ ಡೆನ್ನಿಸ್ ರವರು ಪೋಷಕರಾಗಿದ್ದು ಕನ್ನಡ ಚಟುವಟಿಕೆಗಳು ಯಶಸ್ವಿಯಾಗಿ ನಡೆದು ಕೊಂಡು ಮುನ್ನಡೆಯುತ್ತಿದೆ.

ಕರ್ನಾಟಕ ಸಂಘ ತನ್ನ ಉತ್ತಮ ಕಾರ್ಯ ಯೋಜನೆಗಳಲ್ಲಿ,ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಸಾಧನೆ ಮಾಡಿರುವ ಕನ್ನಡಿಗರು,ಕರ್ನಾಟಕ ಪರ ಸಂಘಟನೆಗಳ ಪೂರ್ಣ ಮಾಹಿತಿ ಇರುವ "ಸಾಧನೆ" ಸಂಪುಟವನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಿ ಬಿಡುಗಡೆ ಮಾಡಿದೆ. ವಿಹಾರ ಕೂಟ , ಕ್ರೀಡಾ ಕೂಟ, ಯು.ಎ. ಇ. ಮಟ್ಟದಲ್ಲಿ ಮಹಿಳೆಯರ ಥ್ರೋಬಾಲ್. ಪುರುಷರ ವಾಲಿಬಾಲ್ ಪಂದ್ಯಾಟ, ಸಂಗೀತ ರಸಮಂಜರಿ ಇತ್ಯಾದಿ ಕಾರ್ಯಕ್ರಮಗಳೊಂದಿಗೆ ರಕ್ತದಾನ ಶಿಭಿರವನ್ನು ಎರ್ಪಡಿಸಿ,ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳೊಂದಿಗೆ ಸಂಘಟನೆ ಜನಮೆಚ್ಚುಗೆಯನ್ನು ಪಡೆದಿದೆ.
           
ಯು. ಎ. ಇ. ಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕನ್ನಡಿಗರನ್ನು ಅಭಿನಂದಿಸಿ ಗೌರವಿಸುವ ಸಲುವಾಗಿ "ಮಯೂರ" ಪ್ರಶಸ್ತಿಯನ್ನು ಶಾರ್ಜಾ ಕರ್ನಾಟಕ ಸಂಘ ಪ್ರತಿವರ್ಷ ಗಣ್ಯರಿಗೆ ನೀಡುತ್ತಾ ಬಂದಿದೆ. ಇಲ್ಲಿಯವರೆಗೆ ಪ್ರತಿಷ್ಠಿತ "ಮಯೂರ" ಪ್ರಶಸ್ತಿಯನ್ನು ಪಡೆದವರು, ಶಿಕ್ಷಣ ಕ್ಷೇತ್ರದಲ್ಲಿ ಶ್ರೀ ತುಂಬೆ ಮೊಯಿದ್ದಿನ್, ಕಲಾ ಕ್ಷೇತ್ರದಲ್ಲಿ ಸಿಂಫೊನಿ ಮ್ಯೂಸಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಶ್ಯಾಮ್ ಸುಂದರ್ ರಾವ್, ಉಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಯು.ಎ.ಇ.ಯಲ್ಲಿ ಕನ್ನಡ ಪರ ಸಂಘಟನೆಗಳನ್ನು  ತನು ಮನ ಧನ ಅರ್ಪಿಸಿ ಸೇವೆ ಸಲ್ಲಿಸಿದ ಗಣ್ಯರುಗಳಾದ ಶ್ರೀ ಮಾರ್ಕ್ ಡೆನ್ನಿಸ್ ಡಿಸೋಜ, ಶ್ರೀ ಜಫ್ರುಲ್ಲಾ ಖಾನ್, ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಜೆರೋಮ್ ಸಲ್ಡಾನ, ಶ್ರೀ ಶೇಖರ್ ಶೆಟ್ಟಿ, ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ಇರ್ಶಾದ್ ಮೂಡಬಿದ್ರಿ, ಮಾಧ್ಯಮ ಕ್ಷೇತ್ರ ಮತ್ತು ಕರ್ನಾಟಕ ಪರ ಸಂಘಟನೆಗೆ ದುಬಾಯಿ ಕರ್ನಾಟಕ ಸಂಘದ ಪೂರ್ವ ಆಧ್ಯಕ್ಷರಾದ ಶ್ರೀ ಬಿ. ಜಿ.ಮೋಹನ್ ದಾಸ್, ಸಾಮಾಜಿಕ ಸೇವೆಗಾಗಿ ದುಬಾಯಿ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರು ಪ್ರಸ್ತುತ ಬ್ಯಾರಿಸ್ ಕಲ್ಚರಲ್ ಪೋರಂ ನ ಅಧ್ಯಕ್ಷರಾದ  ಡಾ. ಬಿ. ಕೆ. ಯೂಸುಫ್ ಇವರುಗಳಿಗೆ ನೀಡಲಾಗಿದೆ.

ಈ ಬಾರಿ ಮಯೂರ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರ ಮತ್ತು ನಾಟಕ ರಂಗದಲ್ಲಿ ಸೇವೆ ಸಲ್ಲಿಸಿರುವ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರಿಗೆ ಮತ್ತು ಯು. ಎ. ಇ. ಯಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ, ಸಂಘಟನೆ, ಸಾಮಾಜಿಕ ಸೇವೆಯಲ್ಲಿ ಕೊಡುಗೆ ನೀಡಿದ ಶ್ರೀ ಬಿ. ಕೆ. ಗಣೇಶ್ ರೈ ಯವರಿಗೆ  ನೀಡಿ ಗೌರವಿಸಲಾಗುವುದು.

ನವಂಬರ್ 13 ನೇ ತಾರೀಕಿನಂದು ಅಜ್ಮಾನ್ ಏಶ್ಯನ್ ಪ್ಯಾಲೆಸ್ ಹೋಟೆಲ್ ಸಭಾಂಗಣದಲ್ಲಿ ಬೆಳಿಗ್ಗೆ 10.30 ರಿಂದ ದಿನಪೂರ್ತಿ ನಡೆಯುವ ವರ್ಣರಂಜಿತ ರಾಜ್ಯೋತ್ಸವ, 7ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಬಾರಿಯ ಮಯೂರ ಪ್ರಶಸಿ ಪ್ರಧಾನ ನಡೆಯಲಿದೆ.
 
ಸೌಜನ್ಯ: ಗಲ್ಫ್ ಕನ್ನಡಿಗ 
 

Share: