ದುಬೈ, ನವೆಂಬರ್ 10: ಕನ್ನಡಧ್ವನಿ.ಕಾಂ ಖ್ಯಾತಿಯ ಶ್ರೀ ಗೋಪಿನಾಥರಾವ್ ರವರ ಪ್ರಥಮ ಕಥಾಸಂಕಲನ ’ಸಾರ್ವಭೌಮ’ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.
ಶಾರ್ಜಾ ಕರ್ನಾಟಕ ಸಂಘ ಆಯೋಜಿಸಿರುವ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದೊಂದಿಗೆ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಗೋಪಿನಾಥ ರಾವ್ ರವರಿಂದ ಇನ್ನಷ್ಟು ಹೆಚ್ಚಿನ ಕೃತಿಗಳು ಹೊರಬರಲಿ, ಕನ್ನಡ ಕಥಾಜಗತ್ತು ಶ್ರೀಮಂತಗೊಳ್ಳಲಿ ಎಂದು ಸಾಹಿಲ್ ತಂಡ ಹಾರೈಸುತ್ತದೆ.