ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಇಂದು ಉದ್ಘಾಟನೆಗೊಳ್ಳಲಿರುವ ವಿಶ್ವದ ಅತೀ ಎತ್ತರದ ಕಟ್ಟಡ.....

ದುಬೈ: ಇಂದು ಉದ್ಘಾಟನೆಗೊಳ್ಳಲಿರುವ ವಿಶ್ವದ ಅತೀ ಎತ್ತರದ ಕಟ್ಟಡ.....

Sun, 03 Jan 2010 16:22:00  Office Staff   S.O. News Service

ಇಂದು (ಜನವರಿ 4) ವಿಶ್ವದಲ್ಲಿಯೇ ಅತೀ ಎತ್ತರದ ಕಟ್ಟಡ ಎಂಬ ಖ್ಯಾತಿಗೆ ಪಾತ್ರವಾದ ಬುರ್ಜ್ ದುಬೈ ಉದ್ಘಾಟನೆಗೊಳ್ಳಲಿದೆ. ಇದರ ಉದ್ಘಾಟನೆಗಾಗಿ ವಿಶ್ವದ ಹಲವು ಪ್ರಮುಖರು ಆಗಮಿಸಲಿದ್ದಾರೆಂದು ಅದಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಉದ್ಘಾಟನೆ ನೆರವೇರುವುದರಿಂದ ಕಟ್ಟಡದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಕಟ್ಟಡವು ದೀಪಾಲಂಕ್ರತಗೊಂಡು ಕಂಗೊಳಿಸುತ್ತಿದೆ. ಅದರಲ್ಲೂ ಆಕಾಶಕ್ಕೆ ತನ್ನ ಪ್ರಕಾಶವನ್ನು ಬೀರುವ ದೀಪವಂತೂ ಜನರನ್ನು ತನ್ನಡೆಗೆ ಸೆಳೆಯುತ್ತಿದೆ.     ಯು.ಎ.ಇ ಪ್ರಧಾನಮಂತ್ರಿಯೂ ದುಬೈಯ ಆಡಳಿತಾಧಿಕಾರಿಯೂ ಆದ ಶೇಕ್ ಮೊಹಮ್ಮದ್ ಬಿನ್ ರಾಶಿದ್  ಅಲ್ ಮಕ್ತೂಮ್ ಅಧಿಕಾರದ ಚುಕ್ಕಾಣಿ ಹಿಡಿದ ದಿನ ಎಂಬ ವಿಶೇಷತೆಯೂ ಜನವರಿ ಎಂಬ ದಿನಕ್ಕಿದೆ..

ಕಟ್ಟಡದ ನಿರ್ಮಾಣದಲ್ಲಿ ಒಟ್ಟು ೧೪೦೦೦ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಇವರಲ್ಲಿ ಅರ್ಧದಷ್ಟು ಭಾರತೀಯರೇ ಆಗಿದ್ದರು. ಕಟ್ಟಡದಲ್ಲಿ ಒಟ್ಟು ೧೬೨ ಮಹಡಿಗಳು ಇವೆ. ಇದರ ಎತ್ತರ ೮೧೮ ಮೀ (೨೬೮೪ ಅಡಿ) ಇದೆ. ೨೦೦೪ ಸೆಪ್ಟೆಂಬರ್ ೨೧ ರಂದು ಎಮ್ಮಾರ್ ಕಂಪನಿಯು ಕಟ್ಟಡದ ಕಾಮಗಾರಿ ಆರಂಬಿಸಿತ್ತು. ಕಟ್ಟಡದ ನಿರ್ಮಾಣಕ್ಕಾಗಿ ಒಟ್ಟು . ಶತಕೋಟಿ ಡಾಲರ್ ಅಂದರೆ ಭಾರತದ ೨೦ ಸಾವಿರ ಕೋಟಿ ರುಪಾಯಿ ಖರ್ಚು ಮಾಡಲಾಗಿದೆ. ಅರ್ಥಿಕ ಕುಸಿತದ ನಡುವೆಯೂ ಯಶಸ್ವಿಯಾಗಿ ಕಾಮಗಾರಿ ಮುಗಿಸಿ ಉದ್ಘಾಟನೆಗೊಳಿಸುತ್ತಿರುವ ದುಬೈ ಸರಕಾರದ ಸಾದನೆಯನ್ನು ನಿಜಕ್ಕೂ ಮೆಚ್ಚಲೇ ಬೇಕು. ಕಟ್ಟಡ ಉದ್ಘಾಟನೆಯ ದಿನವೇ ಅದರ ಹತ್ತಿರದಲ್ಲಿರುವ ಮೆಟ್ರೋ ನಿಲ್ಧಾಣ ಕೂಡಾ ಉದ್ಘಾಟನೆ ಗೊಳ್ಳಲಿದೆ ಎಂದು ಸಾರಿಗೆ ಇಲಾಖೆಯವರು ತಿಳಿಸಿದ್ದಾರೆ.

dubai-downtown-burj-dubai.jpg

 ಇಂದು ಉದ್ಘಾಟನೆಗೊಳ್ಳಲಿರುವ ಕಟ್ಟಡದ ನೇರ ಪ್ರಸಾರವನ್ನು ವಿಶ್ವದ ವಿವಿಧ ಟೀವಿ ಮಾಧ್ಯಮಗಳು ವ್ಯವಸ್ಥೆಗೊಳಿಸಲಾಗಿದ್ದು ವಿಶ್ವದಾದ್ಯಂತ ಎರೆಡು ಬಿಲಿಯನ್ ಜನರು ವೀಕ್ಷಿಸಲಿದ್ದಾರೆ ಎಂದು ಯು.ಎ.ಇ. ವಾರ್ತಾ ಸಂಸ್ಥೆ ವ್ಯಾಮ್ ಪ್ರಕಟಿಸಿದೆ. 

 

ದುಬೈಯು ಅರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿದೆ ಎಂದು ಹೇಳುತಿದ್ದ ವಿಶ್ವದ ಜನತೆಗೆ ಬುರ್ಜ್ ದುಬೈಯ ಉದ್ಘಾಟನೆಯೊಂದಿಗೆ ದುಬೈ ಸರಕಾರವು ಸರಿಯಾದ ಉತ್ತರವನ್ನೇ ನೀಡಿದೆ.

 

- ಅಬ್ದುಲ್ ಹಮೀದ್ ಸೀ ಹೆಚ್ - ಪುತ್ತೂರು (ದುಬೈ)       


Share: