ಅಬುಧಾಬಿ/ದುಬೈ, ಡಿಸೆಂಬರ್ 2:ಯುನೈಟೆಡ್ ಅರಬ್ ಎಮಿರೇಟ್ಸ್ ವಾಯವ್ಯ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ಏಳು ಸಂಸ್ಥಾನಗಳ ಒಕ್ಕೂಟವಾಗಿರುವ ರಾಷ್ಟ್ರ. ಯು.ಎ.ಇ. ಅರಬ್ ಜಂಬೂದ್ವೀಪದ ಆಗ್ನೇಯ ಭಾಗದಲ್ಲಿದೆ. ಪರ್ಷಿಯನ್ ಕೊಲ್ಲಿ ಅಂಚಿನಲ್ಲಿರುವ ಯು.ಎ.ಇ. ಯ ನೆರೆ ರಾಷ್ಟ್ರಗಳೆಂದರೆ ಒಮಾನ್ ಮತ್ತು ಸೌದಿಅರೆಬಿಯ. ಒಕ್ಕೂಟದ ಏಳು ಸಂಸ್ಥಾನಗಳು ಇವು : ಅಬುಧಾಬಿ, ಅಜ್ಮಾನ್, ಶಾರ್ಜಾ, ದುಬೈ, ರಾಸ್-ಅಲ್-ಖೈಮ, ಫುಜೈರ ಮತ್ತು ಉಮ್-ಅಲ್- ಖೈಮ್. ೧೯೭೦ರ ದಶಕದಲ್ಲಿ ಇಲ್ಲಿನ ತೈಲೋದ್ಯಮವು ತೀವ್ರಗತಿಯಲ್ಲಿ ಅಭಿವೃದ್ಧಿಗೊಂಡು ಇಂದು ಯು.ಎ.ಇ. ವಿಶ್ವದ ಸಂಪದ್ಭರಿತ ದೇಶಗಳಲ್ಲಿ ಒಂದಾಗಿದೆ. ಡಿಸೆಂಬರ್ ಎರಡು ಸಾವಿರದ ಒಂಬೈನೂರ ಎಪ್ಪತ್ಹೊಂದರಂದು ರಂದು ಸ್ಥಾಪನೆಗೊಂಡ ಯು.ಎ.ಇ.ಯ ರಾಜದಾನಿ ಅಬುಧಾಬಿ. ಅತ್ಯಂತ ದೊಡ್ಡ ನಗರ ದುಬೈ. ಇಲ್ಲಿಯ ಅಧಿಕೃತ ಭಾಷೆ ಅರೇಬಿಕ್. ಈಗ ರಾಷ್ಟ್ರಾದ್ಯಕ್ಷ ರಾಗಿ ಶೇಕ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಮತ್ತು ಪ್ರದಾನಿಯಾಗಿ ಶೇಕ್ ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಚಲಾವಣೆಯಲ್ಲಿರುವ ನೋಟು ದಿರ್ಹಂ. ಇಲ್ಲಿ ಅನೇಕ ಭಾರತೀಯರು ಉದ್ಯೋಗದಲ್ಲಿದ್ದಾರೆ .
ಯು.ಎ.ಇ. ಇದೀಗ ೩೮ನೇ ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸುತ್ತಿದೆ. ಇಲ್ಲಿನ ಎಲ್ಲಾ ಸಂಸ್ಥಾನಗಳ ಪ್ರಮುಖ ನಗರಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಎಲ್ಲಾ ಸ್ಥಳಗಳಲ್ಲೂ ಯು.ಎ.ಇ.ಯ ರಾಷ್ಟ್ರೀಯ ದ್ವಜ ಹಾರಾಡುತ್ತಿದೆ. ಈ ಸಂದರ್ಭದಲ್ಲಿ ಯು.ಎ.ಇ.ಯಲ್ಲಿ ಇರುವ ಎಲ್ಲಾ ಭಾರತೀಯರು ರಾಷ್ಟ್ರೀಯ ದಿನಾಚರಣೆಯನ್ನು ಆಚರಿಸೋಣ. ಯು.ಎ.ಇ. ಯ ಯಶಸ್ವಿಗೆ ಹಾರೈಸೋಣ.
ಎಲ್ಲಾ ಓದುಗರಿಗೂ ೩೮ನೇ ರಾಷ್ಟ್ರೀಯ ದಿನಾಚರಣೆಯ ಶುಭಾಶಯಗಳು.
- ಅಬ್ದುಲ್ ಹಮೀದ್ ಸೀ ಹೆಚ್ - ದುಬೈ