{ ವರದಿ:’ಕನ್ನಡಸುತ’ದುಬೈ.ಚಿತ್ರ: ಅಶೋಕ್ ಬೆಳ್ಮಣ್}
ದುಬೈ, ನವಂಬರ 13: ಶುಕ್ರವಾರ ದುಬೈನ ಜೆ.ಎಸ್.ಎಸ್ ಇಂಟರ್ನ್ಯಾಶನಲ್ ಸ್ಕೂಲ್ ನ ಭವ್ಯ ಪ್ರಾಂಗಣದಲ್ಲಿ ಕನ್ನಡಕೂಟ ಯು.ಎ.ಇ.ದುಬೈ.53ನೆ ಕರ್ನಾಟಕ ರಾಜ್ಯೋತ್ಸವವನ್ನು ಬಲು ಸಂಭ್ರಮದಿಂದ ಆಚರಿಸಲಾಯಿತು.
ಈ ಅದ್ದೂರಿಯ ರಾಜ್ಯೋತ್ಸವದ ಆಚರಣೆಗೆ ಯಮಲೋಕದಿಂದ ಯಮ ಹಾಗೂ ಚಿತ್ರಗುಪ್ತರು ಬಂದು ವೀಕ್ಷಿಸುವುದರೊಂದಿಗೆ ಕಾರ್ಯಕ್ರಮ ಚೆನ್ನಾಗಿ ನಡೆಸಿ ಕೊಟ್ಟರು!.


’ಕರ್ನಾಟಕ ರಾಜ್ಯೋತ್ಸವ’ ಕಾರ್ಯಕ್ರಮದ ನಿರ್ದೇಶಕಿಯಾಗಿ ಶ್ರೀಮತಿ ಉಮಾ ವಿದ್ಯಾಧರ್ ಮುಂದಾಳತ್ವ ವಹಿಸಿಕೊಂಡಿದ್ದರೆ.ಮನರಂಜನೆ ನಿರ್ದೇಶಕರಾಗಿ ಶ್ರೀ ಈರಣ್ಣ ಮೂಲೀಮನಿ ವಹಿಸಿಕೊಂಡಿದ್ದರು.
ಗಾಯಕಿಯರಾದ ಶ್ರೀಮತಿ ನಿವೇದಿತಾ ಹಾಗೂ ಶ್ರೀಮತಿ ಸೊನಿಯಾ ಅವರ ಗಣೇಶನ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭಾಕಾರ್ಯಕ್ರಮ. ನಂತರ ಕವಿ ಶ್ರೀ ಈರಣ್ಣ ಮೂಲೀಮನಿಯವರ "ಬೆಳಗುತ ಬನ್ನಿರೆ"ಎಂಬ ನಾಡಗೀತೆಯೊಂದಿಗೆ ಕನ್ನಡ ಜ್ಯೋತಿ ಬೆಳಗಿಸಿ ಕನ್ನಡ ಕೂಟದ೨೦೦೯ರ ನೂತನ ಮುಖ್ಯ ಸಂಚಾಲಕರಾದ ಶ್ರೀ ಅರುಣ್ ಮುತ್ತುಗದೂರ್ ಹಾಗೂ ಅವರ ಶ್ರೀಮತಿ ಸುಮಾ ಅರುಣ್ ಮತ್ತು ದುಬೈನ ಖ್ಯಾತ ವಾಣಿಜ್ಯೋದ್ಯಮಿ ಜೈನ್ ಗ್ರೂಪ್ ಆಫ್ ಇಂಟರ್ ನ್ಯಾಶನಲ್ ಶ್ರೀ ಜಫರುಲ್ಲಾ ಖಾನ್ ಅವರ ಅನುಪಸ್ಥಿತಿಯಲ್ಲಿ ಮುಖ್ಯ ಅತಿಥಿ ದುಬೈನ ಹೆಮ್ಮೆಯ ಕನ್ನಡಿಗ ಶಿವಮೊಗ್ಗದ ಶ್ರೀ ಮುಸ್ತಫಾ ಹಾಗೂ ಕಾರ್ಯಕ್ರಮದ ನಿರ್ದೇಶಕಿಯಾಗಿರುವ ಶ್ರೀಮತಿ ಉಮಾ ವಿದ್ಯಾಧರ್ ಕನ್ನಡಕೂಟ ಯು.ಎ.ಇ.ನಿರ್ದೇಶಕರುಗಳ ಉಪಸ್ಥಿತಿಯಲ್ಲಿ ಕನ್ನಡಜ್ಯೋತಿ ಬೆಳಗಿಸಿದರು.
ಕನ್ನಡಕೂಟದ ಗಾಯಕರಾದ ಶ್ರೀ ಬಸವ,ಶ್ರೀ ಗೌತಮ್, ಶ್ರೀ ಗುರುರಾಜ ಹಾಗೂ ಗಾಯಕಿರಾದ ಶ್ರಿಮತಿ ನಿವೇದಿತಾ ಶ್ರೀಮತಿ ಸೊನಿಯಾ,ಶ್ರೀಮತಿ ಸರಳಾ ಮತ್ತು
ಶ್ರೀಮತಿ ಸುನೀತಾ ಸುಶ್ರಾವ್ಯವಾಗಿ ಹಾಡಿದರು.

ನಂತರ ಶ್ರೀ ವೀರೇಂದ್ರಬಾಬು ನೆರೆದ ಗಣ್ಯರಿಗೆ,ಪ್ರಾಯೋಜಕರುಗಳಿಗೆ ಹಾಗೂ ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಹಾಗೂ ಹಾರ್ದಿಕ ಸ್ವಾಗತಕೋರಿದರು
ಕನ್ನಡಕೂಟದ ೨೦೦೯ ರ ನೂತನ ಮುಖ್ಯ ಸಂಚಾಲಕರಾಗಿರುವ ಶ್ರೀ ಆರುಣ್ ಮುತ್ತುಗದೂರ್ ಅವರ ಪರಿಚಯವನ್ನು ಶ್ರೀ ಬಸವರಾಜ್ ಸಾಲಿಮಠ ಮಾಡಿಕೊಟ್ಟರು. ನಂತರ ಮುಖ್ಯ ಸಂಚಾಲಕ ತಮ್ಮ ಭಾಷಣದಲ್ಲಿ "ಕನ್ನಡಕೂಟ ನಡೆದುಬಂದ ದಾರಿ" ಕೂಟದ ಏರು ಪೇರು ದಾಟಿ ಉನ್ನತಿಯ ಈ ಒಂದು ಮಟ್ಟಕ್ಕೆ ಇಷ್ಟು ಬೇಗ ಹೇಗೆ ಬಂತು ಎಂಬುದರ ಬಗ್ಗೆ ಮಾತನಾಡಿದರು.
ಆಮೇಲೆ ರಾಜ್ಯೋತ್ಸವ ಕಾರ್ಯಕ್ರಮದ ನಿರ್ದೇಶಕಿ ಶ್ರೀಮತಿ ಉಮಾ ವಿದ್ಯಾಧರ ತಮ್ಮ ವಂದನಾರ್ಪಣೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದ ಎಲ್ಲ ಪ್ರಾಯೋಜಕರುಗಳಿಗೆ, ಮೀಡಿಯಾ ಬಳಗವಾದ "ಗಲ್ಫ್ ಕನ್ನಡಿಗ" ಮಂಗಳೂರಿಯನ್ ಡಾಟ್ ಕಾಂ. ರೇಡಿಯೊ ಸ್ಪೈಸ್ ೧೦೫.೪ ಎಫ್.ಎಮ್.ಮತ್ತು "ನಮ್ಮ ಟಿ,ವಿ." ಹಾಗೂ ಸೌಂಡ ಸಿಸ್ಟೆಮ್ ನವರಿಗೆ, ಸ್ಥಳ ಒದಗಿಸಿದ ಜೆ.ಎಸ್.ಎಸ್.ನ ಶ್ರೀ ಗುರುಸ್ವಾಮಿ ಅವರಿಗೆ ಉತ್ತಮ ರಸದೌತಣ ಭಡಿಸಿದ ಕಾಮತ್ ಹೋಟೆಲ್ ನವರಿಗೂ ಮತ್ತು ನಾಡಿನಿಂದ ದುಬೈ ರಂಜಿಸಲು ಬಂದ "ವಿದ್ಯುತ್ ತಂಡ"ಕ್ಕೆ ಮತ್ತು ಪ್ರತ್ಯಕ್ಷವಾಗಿ ಅಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ತಮ್ಮ ವಂದನೆ ಅರ್ಪಿಸಿದರು. ಸಭಾಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭಾಗ್ಯ ಸದನದಾಸ್ ಹಾಗೂ ಕುಮಾರ್ ಒಳ್ಳೇ ರೀತಿಯಿಂದ ನಿರ್ವಹಿಸಿದರು.




ನಂತರ ಕಂಪ್ಯೂಟರ ಯುಗದ ಯಮ ಶ್ರೀ ಪ್ರಭುದೇವ ಹಾಗೂ ಚಿತ್ರಗುಪ್ತರಾಗಿ ಶ್ರೀ ಕುಮಾರ್ ವಿಭಿನ್ನ ರೀತಿಯಲ್ಲಿ ಹಾಸ್ಯಮಯವಾಗಿ ನಡೆಸಿದರು. "ಒಂದೇ ನಾಡು, ಒಂದೇ ನಾಡಗೀತೆ ಹಾಗೂ ಪ್ರಾರ್ಥನೆಗೆ ಪಾಕಿಸ್ತಾನದ ಗಜಲ್ ಗಾಯಕ ಶ್ರೀ ಜೀಶಾನ್ ರಾವತ ಹಾರ್ಮೋನಿಯಂ ನುಡಿಸಿದರೆ ಶ್ರೀ ಈರಣ್ಣ ಮೊಲೀಮನಿ ತಬಲಾ ಸಾಥ್ ನೀಡಿದರು.
’ಕುಲವು ಒಂದೇ ದೈವವು" ಎಂದು ನಾಡಿನ ಮನುಕುಲಕೆ ಮಾದರಿಯಾಗುವ ನಾಡ ಗೀತೆಯನ್ನು ಶ್ರೀ ಸಾಲಿಮಠ, ಶ್ರೀ ಪೃಥ್ವಿ,, ಶ್ರೀ ಗುರುರಾಜ್, ಶ್ರೀ ಗೌತಮ್ ಮತ್ತು ಗಾಯಕಿಯರಾದ ಶ್ರೀಮತಿ ನಿವೇದಿತಾ,ಶ್ರಿಮತಿ ಸೋನಿಯಾ,ಶ್ರೀಮತಿ ಸುನೀತಾ ಇಂಪಾಗಿ ಹಾಡಿದರು.
ಆಮೇಲೆ "ಚಿಟ್ಟೆ ಚಿಟ್ಟೆ" ಮಕ್ಕಳ ನೃತ್ಯ ನಿಜಕ್ಕೂ ಅದ್ಭುತ.ಪುಟ್ಟ ಪುಟಾಣಿಗಳಾದ ಮಹಾಂತ, ತರುಣ್ ನೀತಿಕಾ, ಸೃಷ್ಠಿ, ಸರ್ವೇಶ್, ಇನ್ನಿತರೆ ಮಕ್ಕಳ ನೃತ್ಯಕ್ಕೆ ವಾಹ್ ವಾಹ್ ಎನ್ನುತ್ತ ನೆರೆದ ಜನರ ಚಪ್ಪಾಳೆ ಮುಗಿಲು ಮುಟ್ಟುವಂತಿತ್ತು.ಈ ನೃತ್ಯದ ನಿರ್ದೇಶಕಿ ಶ್ರೀಮತಿ ಸುರೇಖಾ ವ್.ಬಾಬು ಅವರ ಪ್ರಯತ್ನ ಸಫಲವಾಗಿತ್ತು.
ನಂತರಶ್ರೀ ಪ್ರಭುದೇವ ನಿರ್ದೇಶಿಸಿದ ಪುಟ್ಟ ಪ್ರಹಸನಗಳಲ್ಲಿ ಮಿಂಚಿದ ಶ್ರವಣ್ ಹಾಗೂ ತೇಜಸ್ ಹಿಂದರ್ ಉತ್ತಮ ಬಾಲನಟರಾಗುವಂತೆ ತೋರಿಬಂದರು.
ನಂತರ ಇನೊಂದು ಮಕ್ಕಳ ನೃತ್ಯ "ನ ಧೀಂ ಧೀಂ ತನ" ಪ್ಯೂಜನ ಮಿಶ್ರಿತಗೊಂಡ ಮೋಹಕ ನೃತ್ಯದಲ್ಲಿ ಕೃತಿ ಹಾಗೂಇನ್ನಿತರೆ ಮುದ್ದು ಪುಟಾಣಿಗಳು ಕುಣಿದಾಗ ಹೆತ್ತವರ ಮನಸ್ಸಿಗೆ ಎಷ್ಟೊಂದು ಮುದ.ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ ಶ್ರೀಮತಿ ಉಮಾ ವಿದ್ಯಾಧರ್ ಹಾಗೂ ಶ್ರೀಮತಿ ಸರಳಾ ಅವರ ಶ್ರಮ ಸಾರ್ಥಕ.
ಆಮೇಲೆ ದುಬೈನ ಕನ್ನಡಕವಿ ಶ್ರೀ ಮೊಲೀಮನಿಯವರ ನಾಡಗೀತೆ "ಜಯ ಜಯ ಕನ್ನಡದೇವಿಯೇ.."ಎಂದು ಸುಶ್ರಾವ್ಯವಾಗಿ ಹಾಡಿದ ಶ್ರೀ ಪೃಥ್ವಿ ಹಾಗೂ ಶ್ರೀಮತಿ ಸೊನಿಯಾ ಅವರಿಗೆ ಹಾರ್ಮೊನಿಯಂ ನುಡಿಸಿದ ಜೀಶಾನ್ ಅವರಿಗೆ ಶ್ರೀ ಮೊಲೀಮನಿ ತಬಲಾ ಸಾಥ್ ನೀಡಿದರು.
ಆಮೇಲೆ "ತಕ ಥೈ ತಕ ಥೈ"ಎನ್ನುವ ಅದ್ಭುತ ಹಾಡಿಗೆ ವಾಹ್ !ವಾಹ್ ! ಅಮೋಘ ನೃತ್ಯ ನೀಡಿದ ನಾಳಿನ ಉತ್ತಮ ತಾರೆಗಳಾಗುವ ಲಕ್ಷಣ ತೋರಿದ ಕುಮಾರಿ ಐಶ್ವರ್ಯ ಗಾಜರೆ ಹಾಗೂ ಕುಮಾರಿ ಋತುಜಾ ಹಾಗೂ ಶ್ರವಣ ಮುತ್ತುಗದೂರ್ ನೃತ್ಯ ನಿಜಕ್ಕೂ ಮನ ಮೋಹಕವಾಗಿತ್ತು.ಈ ಹಾಡಿನ ನೃತ್ಯ ನಿರ್ದೇಶನ ಶ್ರೀಮತಿ ಜ್ಯೋತಿ ಮಲ್ಲಿಕಾರ್ಜುನ್ ಅವರದು.
ಶ್ರೀಮತಿ ಯಶೋದಾ ಭಟ್ ಜಾನಪದ ಗೀತೆ"ಮಾವ ನಿನ್ನ ಮಗಳ..." ಎಂದು ಅದ್ಭುತವಾಗಿ ಹಾಡಿ ನೆರೆದ ಜನರ ಗಮನ ಸೆಳೆದು ಚಪ್ಪಾಳೆಗಿಟ್ಟಿಸಿದರೆ,ತಾವೇನೂ ಕಡಿಮೆ ಇಲ್ಲ ಸಮರ್ಪಕವಾಗಿ ಶ್ರೀ ಜೀಶಾನ್ ಹಾರ್ಮೊನಿಯಮ್ ನುಡಿಸಿದರೆ,ತಬಲಾ ಸಾಥ್ ಶ್ರೀ ಮೊಲೀಮನಿ ನೀಡಿದರು.
ಅದೇ ರೀತಿ ಮಕ್ಕಳಿಗಿಂತ ತಾವೇನೂ ಕಡಿಮೆಯಿಲ್ಲ ಎನ್ನುವಂತೆ "ಚೆಲುವಯ್ಯಾ ಚೆಲುವೋ" ಎನ್ನುವ "ಕೋಲಾಟ.."ನೃತ್ಯ ಪ್ರದರ್ಶಿಸಿದ ಶ್ರೀಮತಿ ಶ್ವೇತಾ ಸುದೀಪ್, ರಾಧಾ ಜೀವನ್,ಕುಮಾರಿ ಅನ್ಷುಲ,ಶ್ರೀಮತಿ ಜ್ಯೋತಿ ಮಲ್ಲಿಕಾರ್ಜುನ್ ಹಾಗೂ ತೇಜಸ್ ಮತ್ತು ಇನ್ನಿತರರ ನೃತ್ಯ ನೆರೆದ ಜನರನ್ನು ಆಕರ್ಷಿಸಿತು.
ಇವೆಲ್ಲವುಗಳ ಮಧ್ಯೆ ಯಮವೇಷದ ಶ್ರೀ ಪ್ರಭುದೇವ್ ಹಾಗೂ ಚಿತ್ರಗುಪ್ತ ಶ್ರೀ ಕುಮಾರ್ ಆಗಾಗ ನಗೆ ಹೊನಲನ್ನು ಹರಿಸುತ್ತಿದ್ದವು.
ನಂತರ ಹಾಸ್ಯದ ಜತೆ ಪ್ರಾಯೋಜಕರ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರನ್ನು ವಿವರಣೆಯ ಹೊಣೆಹೊತ್ತಿದ್ದ ಶ್ರೀ ಮಲ್ಲಿಕಾರ್ಜುನಗೌಡ ಎಲ್ಲರಿಗೂ ಕೂಟದ ಪರ ಕೃತಜ್ಞತೆ ತಿಳಿಸಿದರು.
ಆಮೇಲೆ "ಕನ್ನಡ ಕೂಟ ಯು ಎ.ಇ."ಆಚರಿಸುವ ೫೩ನೆ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ವಿಶೇಷವಾಗಿ ಆಹ್ವಾನಿತರಾದ ಬೆಂಗಳೂರಿನ "ವಿದ್ಯುತ್" ತಂಡ ಸುಮಾರು ಎರಡೂವರೆ ಗಂಟೆಗಳ ಕಾಲ ನಾಡಿನ ಮೇಲ್ಮೇಯನ್ನು ಎತ್ತಿ ಹಿಡಿವ ನೃತ್ಯ, ಭರತನಾತ್ಯ, ವಾದ್ಯಗ ಪ್ಯೂಜನ್ ಅದರಲ್ಲೂ ರಾಗ"ಕೀರವಾಣಿ ಮತ್ತು "ವಿದ್ಯುತ್" ತಂಡದ "೧೧.೫೩" ನಿಜಕ್ಕೂ ಅದ್ಭುತ ವಾಗಿತ್ತು. ಮಧ್ಯೆ ಉತ್ತಮವಾಗಿ ಕಾರ್ಯಕ್ರಮ ನಿರೂಪಿಸಿದ ಮಯೂರ್ ಸುಶ್ರಾವ್ಯವಾಗಿ ಹಾಡಿದ ಗೌರಿ ಇನ್ನಿತರರು.ಮತ್ತು ಪ್ಯೂಜನ್ ನಲ್ಲಿ ಕೀಬೋರ್ಡ ಮೇಲೆ ಮಿಂಚಿದ ಆಶ್ವಿನ್,ತಬಲಾಮೇಲೆ ಆದರ್ಶ್ ನಂತರ್ ಡ್ರಮ್ಸ್ ಹೀಗೆ ಎಲ್ಲಾ ವಾದ್ಯಗಳ "ಜುಗಲ್ ಬಂದಿ" ನಿಜಕ್ಕೂ ಅತ್ಯದ್ಭುತ.
ಪ್ರಾಯೋಜಕರನ್ನು ಬೆಳಗೂರ ದಂಪತಿಗಳು ಸ್ವಾಗತಿಸಿದರೆ ಎಲ್ಲರ ಸ್ವಾಗತಕ್ಕೆ ಶ್ರೀಮತಿ ದೀಪ್ತಿ ವೀರೇಂದ್ರ ಹಾಗೂ ಶ್ವೇತಾ ಸುದೀಪ್ ಹಾಗೂ ಸುಮಾ ಗಾಜರೆ ನಿರ್ವಹಿಸಿದರೆ ಗ್ರೀನ್ ರೂಮ್ ಮೇಲ್ವಿಚಾರಣೆಯ ಉಸ್ತುವಾರಿಯನ್ನು ಶ್ರೀಮತಿ ನಾಗವೇಣಿ,ದೀಪಾ ವಹಿಸಿಕೊಂಡಿದ್ದರು.
ವೇದಿಕೆಯನ್ನು ಉತ್ತಮವಾಗಿ ಶ್ರೀಮತಿ ಸುರೇಖಾ ವಿ.ಬಾಬು ಹಾಗೂ ಜ್ಯೋತಿ ಮಲ್ಲಿಕಾರ್ಜುನ್ ನೋಡಿಕೊಂಡರೆ ಸದಸ್ಯರ ನೋಂದಣೀಯನ್ನು ಶ್ರೀ ಸುದೀಪ್, ಶ್ರೀ ನಂದನ್,ಶ್ರೀ ಸದನ್ ದಾಸ್ ನಿರ್ವಹಿಸಿದರು.ಸೌಂಡ ಮೈಕು ಗಳ ವ್ಯವಸ್ಥೆ ನೋಡಿ ಕೊಂಡ ಶ್ರೀ ವೀರೇಂದ್ರ ನಿಜಕ್ಕೂ ಎಲ್ಲರ ಶ್ರಮ ಪ್ರಶಂಸನೀಯ.
ಈ ಕಾರ್ಯಕ್ರಮಕ್ಕೆ ನಾಡಿಗೂ ಇಲ್ಲಿಗೂ ಕನ್ನಡದ ಕಲಾವಿದರ ಪ್ರೇಮ ಸಂಕೋಲೆ ಬೆಸೆದ ನಾಡಿನಿಂದ ಬಂದಿರುವ ಕನ್ನಡಕೂಟ ಯು.ಎ.ಇ.ಸ್ಥಾಪಕಿಯರಲ್ಲೊಬ್ಬರಾದ, ಕಿರುತೆರೆ ನಟಿ ಶ್ರೀಮತಿ ಕಸ್ತೂರಿ ಮೊಲೀಮನಿಯವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕನ್ನಡ ಕೂಟ ಯು.ಎ.ಇ.ಆಚರಿಸಿದ ಈ ೫೩ನೇ ಕರ್ನಾಟಕ ರಾಜ್ಯೋತ್ಸವದ ಪ್ರಾಯೋಜಕರುಗಳು-
ಮುಖ್ಯ ಪ್ರಾಯೋಜಕರು.
೧) ಶ್ರೀ ಜಫರುಲ್ಲಾಖಾನ್(ಜೈನ್ ಗ್ರೂಪ್ ಆಪ್ ಕಂಪನೀಸ್)
೨) ಶ್ರೀ ಮುಸ್ತಫಾ (ಎಮ್ ಸ್ಕ್ವೇರ್ ಇಂಜನಿಯರಿಂಗ್ ಮತ್ತು ಕನ್ಸಲ್ಟಂಟ್ಸ್)
೩) ಟಿ.ಚೊಯಿತ್ರಾಮ್ ಗ್ರೂಪ್ ಆಪ್ ಸುಪರ್ ಮಾರ್ಕೆಟ್ಸ್)
೪) ಗೋಲ್ಡನ್ ಗಲ್ಪ್ ಕಾಂಟ್ರಾಕ್ಟಿಂಗ್ ಕಂ.
ಸಹ ಪ್ರಾಯೋಜಕರುಗಳು:
೧) ಅಟೊಮೆಕ್ ಇಂಜನಿಯರಿಂಗ್ ಮತ್ತು ಮರೈನ್ ಸರ್ವಿಸಿಸ್
೨) ಬ್ರೈಯಾನ್ ಇಂಜನಿಯರಿಂಗ
೩ )ಯು.ಎ.ಇ.ಎಕ್ಶಚೆಂಜ್ ಸೆಂಟರ್
೪) ಶ್ರೀ ಆನಂದ ಪಾಟೀಲ್ (ವೈಟ್ ಲಿಂಕ್ ಕಂಪ್ಯೂಟರ್ಸ್)
೫) ಇನ್ ಸ್ಪೈರ್ ಕಂಪ್ಯೂಟರ್ಸ
೬) ಕ್ರಿಸ್ಟಲ್ ಆಲುಮಿನಿಯಂ ಗ್ಲಾಸ್ ಮತ್ತು ಕಂ.
೭ )ಅಲ್ ರಜುಕಿ ಇಂಟರ್ ನ್ಯಾಶನಲ್ ಎಕ್ಶಚೆಂಜ್ ಸೆಂಟರ್
೮) ಹೈಡ್ರೋ ಫಿಟ್ ಕಂ.
೯) ಅಕ್ಯುರೇಟ್ ಅನಾಲಿಸಿಸ್
೧೦ )ಅಲ್ ಆದಿಲ್ ಗ್ರೂಪ್ ಆಪ್ ಸುಪರ್ ಮಾರ್ಕೆಟ್ಸ್
೧೧) ಕ್ರೆಸೆಂಟ್ ಇಂಜನಿಯರಿಂಗ್ ಪೌಂಡ್ರಿ
೧೧) ಮ್ಯಾಕ್ಸ ಮೆಕ್ಯಾನಿಕಲ್ ವರ್ಕ್ಸ್.
೧೨) ಶ್ರೀ ವೀರೇಶ ಪಾಟೀಲ್
೧೩) ಶ್ರೀ ನವೀನ್ ಗಡಿಯಾರ
ಸೌಜನ್ಯ: ಗಲ್ಫ್ ಕನ್ನಡಿಗ