ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ರಿಯಾಧ್: ಸೌದಿಯಲ್ಲಿ ಅಪಘಾತ: ಮಂಜೇಶ್ವರ ನಿವಾಸಿ ಮೃತ್ಯು

ರಿಯಾಧ್: ಸೌದಿಯಲ್ಲಿ ಅಪಘಾತ: ಮಂಜೇಶ್ವರ ನಿವಾಸಿ ಮೃತ್ಯು

Tue, 26 Jan 2010 17:20:00  Office Staff   S.O. News Service
ಮಂಜೇಶ್ವರ ಜನವರಿ 26 : ಮಕ್ಕಾದಲ್ಲಿ ಪವಿತ್ರ ಉಮ್ರಾ ಮುಗಿಸಿ ರಿಯಾದ್‌ಗೆ ಮರಳುತ್ತಿದ್ದ ಮಿನಿ ಬಸ್ಸೊಂದು ಅಪಘಾತಕ್ಕೀಡಾಗಿ ಮಂಜೆಶ್ವರ ನಿವಾಸಿಯೋರ್ವರು ಮೃತಪಟ್ಟಿದ್ದು ಮಿನಿ ಬಸ್‌ನಲ್ಲಿದ್ದ ಹಳವು  ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
 
ಇದರಲ್ಲಿ ಒಬ್ಬರು ಸ್ತಿತಿ ಚಿಂತಾಜನಕವೆಂದು ತಿಳಿದು ಬಂದಿದೆ. ಮೃತರನ್ನು ಮಂಜೇಶ್ವರ ನಿವಾಸಿ ಬಾವ ಎಂಬವರ ಪುತ್ರ ಝುಬೈರ್(೪೧) ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಝುಬೈರ್ ಪತ್ನಿ ಸುಲೈಕ(೩೫) ಪುತ್ರ ಶುಹಾನ್(೧೨) ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ಖಾದರ್ ಎಂಬವರ ಪುತ್ರ ತಾಹಿದ್(೨೮) ಕುಂಜತ್ತೂರು ಇಬ್ರಾಹಿಂ ಎಂಬವರ ಪುತ್ರ ಬಶೀರ್(೩೩), ಕುಂಜತ್ತೂರಿನ ಸಮದ್ (೪೦), ಚೆರುಗೋಳಿಯ ಸತ್ತಾರ್(೩೫) ಎಂದು ತಿಳಿದುಬಂದಿದೆ.ಇವರನ್ನು ರಿಯಾದ್‌ನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.  

ರಿಯಾದ್ನಿಂದ 110 ಕಿಲೋ ಮೀಟರ್ ದೂರದ ಮುಸಮ್ಮಿಲ್ ಎಂಬಲ್ಲಿ ಇವರು ಸಂಚರಿಸುತ್ತಿದ್ದ ಮಿನಿ ಬಸ್‌ನ ಟಯರ್ ಸಿಡಿದು ಅಪಘಾತ ಉಂಟಾಗಿದೆ. ಮೃತ ಝುಬೈರ್‌ನ ಮೃತದೇಹವನ್ನು ಊರಿಗೆ ತರುವ ಸಿದ್ದತೆಗಳು ನಡೆಯುತ್ತಿದೆ.

ವರದಿ: ಆರಿಫ್ ಮಚ್ಚಂಪಾಡಿ, ಮಂಜೇಶ್ವರ

Share: