ಜಿದ್ದಾ (ಸೌದಿ ಅರೇಬಿಯಾ) ಫೆಬ್ರವರಿ ೫: ಟ್ರಾವೆಲ್ ಏಜೆನ್ಸಿಯ ಮೂಲಕ ವಿಸಾ ಪಡೆದು ಸೌದಿ ಅರೇಬಿಯಾದ ಜೆದ್ದಾ ಸಮೀಪದ ಕಂಪೆನಿಯೊಂದಕ್ಕೆ ಕೆಲಸಕ್ಕೆ ಬಂದ ಭಾರತೀಯ ಮೂಲದ 20 ಕಾರ್ಮಿಕರು ಟ್ರಾವೆಲ್ ಏಜೆನ್ಸಿಯಿಂದ ವಂಚನೆಗೊಳಗಾಗಿ ಇತ್ತ ಕೆಲಸವೂ ಇಲ್ಲದೆ ಜೊತೆಗೆ ವಾಸಿಸಲು ಸ್ಥಳವೂ ಇಲ್ಲದೆ ಬೀದಿ ಪಾಲಾಗಿರುವ ಘಟನೆ ಜೆದ್ದಾದಲ್ಲಿ ಸಂಭವಿಸಿದೆ.
ಭಾರತದಲ್ಲಿರುವ ಟ್ರಾವೆಲ್ ಏಜೆನ್ಸಿಗಳಿಗೆ ಸುಮಾರು 80,000 ದಿಂದ 1,00,000 ರೂಪಾಯಿಗಳ ವರೆಗೆ ಹಣ ಕೊಟ್ಟು ಪೆಪ್ಸಿ ಕಂಪೆನಿಯಲ್ಲಿ ಕೆಲಸಕ್ಕೆಂದು ಬಂದಿದ್ದ 35 ಕಾರ್ಮಿಕರು ಇತ್ತ ಕೆಲಸವಿಲ್ಲದೇ ವಂಚಿತರಾಗಿದ್ದರು. ಇವರಲ್ಲಿ 15 ಮಂದಿಯನ್ನು ಭಾರತಕ್ಕೆ ವಾಪಾಸ್ಸು ಕಳುಹಿಸಲಾಗಿದ್ದು ಇನ್ನೂ ಇಪ್ಪತ್ತು ಮಂದಿ ಕೆಲಸವಿಲ್ಲದೇ ಅಸಹಾಯಕರಾಗಿದ್ದಾರೆ. ಭಾರತೀಯ ಮೂಲದ ಸಂಘ ಸಂಸ್ಥೆಗಳು ಇವರಿಗೆ ಈಗ ಇಲ್ಲಿ ತಾತ್ಕಾಲಿಕ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದು ಇವರನ್ನು ಸುರಕ್ಷಿತವಾಗಿ ವಾಪಾಸ್ಸು ಕಳುಹಿಸಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಿವೆ.
ವರದಿ : ಅಶ್ರಫ್ ಮಂಜ್ರಾಬಾದ್. ಸೌದಿ ಅರೇಬಿಯಾ