ಶಾರ್ಜಾ ನ್ಯಾಶನಲ್ ಪೈಂಟ್ ರೌಂಡ್ ಅಬೌಟ್ ಹತ್ತಿರ ಇರುವ ಗಲ್ಫ್ ಏಷಿಯನ್ ಇಂಗ್ಲೀಷ್ ಸ್ಕೂಲ್ ಹೊರಾಂಗಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆಯವರೆಗೆ ನೆಡೆಯಲಿರುವ ಈ ಕ್ರೀಡಾ ಕೂಟವು ದಿನ ಪೂರ್ತಿ ನಕ್ಕು ನಲಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲಾ ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕೀಡಾ ಕೂಟವನ್ನು ಯಶಸ್ವಿಯಾಗಿಸಲು ಸಹಕರಿಸಬೇಕೆಂದು ಕ್ರೀಡಾ ಸಮಿತಿ ಕರೆ ನೀಡಿದೆ.
ಬಿ.ಸಿ.ಎಫ್ ಅಧ್ಯಕ್ಷ ಡಾ.ಬಿ.ಕೆ.ಯುಸುಫ್, ಕಾರ್ಯದರ್ಶಿ ಡಾ.ಕಾಪು ಮಹಮ್ಮದ್, ಉಪಾಧ್ಯಕ್ಷ ಅಬು ಸಾಲಿಹ ಹಾಗೂ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ನೋಯಲ್ ಅಲ್ಮೇಡಾ ಬಾಗವಹಿಸಲಿರುವ ಈ ಸಡಗರದಲ್ಲಿ ಮದ್ಯಾಹ್ನ ಸ್ವಾದಿಷ್ಟ ಭೋಜನದ ವ್ಯವಸ್ಥೆ ಮಾಡಲಾಗಿದೆ.
ಹೆಚ್ಚಿನ ವಿವರಗಳಿಗೆ ಕ್ರೀಡಾ ಸಮಿತಿಯ ಅಧ್ಯಕ್ಷ ಮಹಮ್ಮದ್ ಶಹದಾ ( 050-7152888), ಉಪಾಧ್ಯಕ್ಷರುಗಳಾದ ಹುಮಾಯೂನ್ (050- 5451034), ಅಬ್ದುಲ್ ಲತೀಫ್ (050-6530518) ಹಾಗೂ ಇರ್ಶಾದ್ (050-8714373), ಅಬ್ದುಲ್ ರಹಿಮಾನ್ ಸಜಿಪ, ಆಫಿಕ್ ಹುಸೈನ್ (050- 5883943) ಮತ್ತು ಮಹಮ್ಮದ್ ಇಕ್ಬಾಲ್ (050-5149106) ರವರನ್ನು ಸಂಪರ್ಕಿಸಬಹುದಾಗಿದೆ.