
ಭಟ್ಕಳ:೧೨, ಇಲ್ಲಿನ ದೂರದರ್ಶನ ಮರುಪ್ರಸರಣ ಕೇಂದ್ರದ ಬಳಿಯ ರಾಹೆ.೧೭ರಲ್ಲಿನ ತಿರುವಿನಲ್ಲಿ ಕ್ವಾಲಿಸ್ ಹಾಗೂ ಟೆಂಪೋ ಟ್ರವೆಲರ್ ವಾಹನಗಳ ನಡುವೆ ಉಂಟಾದ ಮುಖಾಮುಖಿ ಡಿಕ್ಕಿಯಿಂದಾಗಿ ೭ ಜನರು ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ೧೨ ಗಂಟೆ ಸುಮಾರು ಜರುಗಿದೆ.
ಈ ಘಟನೆಯಲ್ಲಿ ಗಾಯಗೊಂಡವರನ್ನು ಟೆಂಪೋ ಟ್ರವೆಲರ ನ ಪ್ರಯಾಣಿಕರಾದ ಬೆಂಗಳೂರು ರಾಮನಗರ ತಾಲೂಕಿನ ಜಿ.ವಿ ಶಂಕರ್(೪೮) ರೇವಣ್ಣ, ಸುವರ್ಣ, ಸಿದ್ದಲಿಂಗಸ್ವಾಮಿ, ರಾಜು, ಕಾರ್ತಿಕ್, ಇಂದ್ರಾಣಿ, ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಕಲಿಸಿಲಾಗಿದೆ.
ಕೊಲ್ಲೂರಿನಿಂದ ಮುರುಡೇಶ್ವರಕ್ಕೆ ಹೋಗುತ್ತಿದ್ದ ಕ್ವಾಲಿಸ್ ವಾಹನ ಹಾಗೂ ಹೊನ್ನಾವರ ಕಡೆಯಿಂದ ಉಡುಪಿಗೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪ್ರಕರಣವು ನಗರ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
