ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸದ್ಭಾವನಾ ಮಂಚ್ ಕಾಲದ ಬೇಡಿಕೆಯಾಗಿದೆ; ಬೆಳಗಾವಿಯಲ್ಲಿ ಧರ್ಮಗುರುಗಳ ಕರೆ

ಸದ್ಭಾವನಾ ಮಂಚ್ ಕಾಲದ ಬೇಡಿಕೆಯಾಗಿದೆ; ಬೆಳಗಾವಿಯಲ್ಲಿ ಧರ್ಮಗುರುಗಳ ಕರೆ

Wed, 17 Jul 2024 00:25:28  Office Staff   SOnews

 

ಬೆಳಗಾವಿ:  ಜಮಾಅತೆ ಇಸ್ಲಾಮಿ ಹಿಂದ್ ಬೆಳಗಾವಿ ವತಿಯಿಂದ ನಗರದ ಶಾಂತಿ ಸಂದೇಶ ಸದನ ಬೆಳಗಾವಿಯಲ್ಲಿ ಸದ್ಭಾವನಾ ಮಂಚ್ ಸ್ಥಾಪಿಸುವ ಕುರಿತು ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಧರ್ಮ ಗುರುಗಳು ಸದ್ಭಾವನಾ ಮಂಚ್ ರಚಿಸುವ ಬಗ್ಗೆ ಕರೆ ನೀಡಿದರು.

ಇಂದು ನಮ್ಮ ಮಧ್ಯೆ ಅಪನಂಬಿಕೆ, ಸಂದೇಹ ಹೆಚ್ಚುತ್ತಿದೆ. ಸುಳ್ಳುಗಳ ಮೂಲಕ ಮನುಷ್ಯರ ನಡುವೆ ವಿಭಜನೆ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲಾಗುತ್ತಿದೆ. ಇದು ಖಂಡಿತ ಸಮಾಜಕ್ಕೆ ಮಾರಕ. ಧರ್ಮ ಮನುಷ್ಯರನ್ನು ಜೋಡಿಸುವ ಪಾಠ ಕಲಿಸಿದೆ. ಮನುಷ್ಯರನ್ನು ಒಡೆಯುವ ಚಿಂತನೆಗಳನ್ನು ಎಲ್ಲಾ ಧರ್ಮಗಳೂ ವಿರೋಧಿಸುತ್ತವೆ.

ಧರ್ಮದ ನಿಜವಾದ ಸಂದೇಶ ಸಮಾಜಕ್ಕೆ ಸಿಗಬೇಕಾಗಿದೆ. ಪರಸ್ಪರ ಪ್ರೀತಿ ವಿಶ್ವಾಸ ಗೌರವ ಇರುವ ಸಮಾಜ ನಿರ್ಮಾಣಕ್ಕೆ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಸಾಮರಸ್ಯ ಇಂದಿನ ತುರ್ತು ಅಗತ್ಯವಾಗಿದೆ. ಅದಕ್ಕೆ ಸದ್ಭಾವನಾ ಮಂಚ್ ನಂತಹ ವೇದಿಕೆಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾಗಿದೆ ಎಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಧರ್ಮ ಗುರುಗಳು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಮೋಕ್ಶಾತ್ಮಾನಂದ ಸ್ವಾಮೀಜಿ,ರಾಜಗುರು ಸಂಸ್ಥಾನದ ಪೂಜ್ಯಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮೀಜಿ, ಬೆಳಗಾವಿಯ ಫಾದರ್ ಡಾ. ಫ್ರೆಡ್ಡಿ ರಾಜ್, ಬೆಳಗಾವಿ ಸದ್ಸಂಗ್ ಗುರುದ್ವಾರ ಸಾಹಿಬ್ ನ ಗ್ಯಾನಿ ಪ್ರಬ್ಜೋತ್ ಸಿಂಗ್, ಬೆಳಗಾವಿ ಬ್ರಹ್ಮ ಕುಮಾರಿಸ್ ಇಶ್ವರಿಯ್ಯಾ ವಿದ್ಯಾಲಯದ ರಾಜ್ ಯೋಗಿನಿ.ಬಿ.ಕೆ.ವಿದ್ಯಾ, ಜಮಾಅತೆ ಇಸ್ಲಾಮೀ ಹಿಂದ್, ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಮುಲ್ಲಾ ಭಾಗವಹಿಸಿದ್ದರು.

ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಳ್ಗಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಸದ್ಭಾವನಾ ಮಂಚ್ ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಬೆಳಗಾವಿ ಶಾಖೆ ಅಧ್ಯಕ್ಷ ಶಾಹಿದ್ ಮೆಮನ್ ಅತಿಥಿಗಳನ್ನು ಸ್ವಾಗತಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಇಂಜಿನಿಯರ್ ಮುಹಮ್ಮದ್ ಸಲೀಂ ಅಧ್ಯಕ್ಷತೆ ವಹಿಸಿದ್ದರು.


Share: