ಭಟ್ಕಳ:ರಾಷ್ಟ್ರೀಯ ಹೆದ್ದಾರಿಗೆ ಹಾಕಿದ ಹಂಪ್ ಗಮನಿಸದೆ ಒಮ್ಮೆಲೆ ಬೈಕ್ ಬ್ರೇಕ್ ಹಾಕಿ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದ ಕಾರಣ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವನಪ್ಪಿರುವ ಘಟನೆ ಶಿರಾಲಿ ಚಕ್ ಪೋಸ್ಟ್ ಸಮೀಪ ನಡೆದಿದೆ.
ಮೃತ ಬೈಕ್ ಸವಾರನನ್ನು ರೂಪೇಶ ಗೋವಿಂದ ದೇವಾಡಿಗ
ಜೋಗಿಮನೆ ಮುಂಡಳ್ಳಿ ನಿವಾಸಿ ಎಂದು ತಿಳಿದು ಬಂದಿದೆ.
ಶನಿವಾರ ಮುಂಜಾನೆ 12.15ಕ್ಕೆ ದುರುದಾರನ್ನು ತನ್ನ ಬೈಕ್ ಹಿಂದುಗಡೆ ಕೂಡಿಸಿಕೊಂಡು ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಅತೀವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭಟ್ಕಳ ಶಿರಾಲಿ ರಸ್ತೆ ಚಕ್ ಪೋಸ್ಟ್ ಹತ್ತಿರ ಇವರು ಹಂಪ್ ಗಮನಿಸದೇ ಒಮ್ಮೇಲೆ ಬ್ರೆಕ್ ಹಾಕಿ ತನ್ನ ವಾಹನ ಚಾಲನೆಯ ನಿಯತ್ರಣ ತಪ್ಪಿ ಮೋಟರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಫಿರ್ಯಾದಿಯ ದವಡೆಗೆ ಹಾಗೂ ತುಟಿಗೆ ಗಾಯಪಡಿಸಿ ಅಪಘಾತದಲ್ಲಿ ತಾನು ತಲೆಗೆ ಭಾರೀ ಗಾಯಾಪಡಿಸಿಕೊಂಡು ಕೆ.ಎಮ್.ಸಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗ ಮುಂಜಾನೆ 5.39 ಗಂಟೆಗೆ ಸಾವನ್ನಪ್ಪಿದ್ದಾನೆ
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಸುಬ್ರಾಯ ನಾರಾಯಣ ದೇವಾಡಿಗ ದೂರು ದಾಖಲಿಸಿದ್ದಾರೆ