ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನ ಇಲಾಖೆಯ ಗಮನಕ್ಕೆ ತರುವ ಹಿನ್ನಲೆಯಲ್ಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಯಶಸ್ವಿಯಾಗಿ ಜರುಗಿ, ಅರಣ್ಯವಾಸಿಗಳಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗದೆಂದು ಅದಾಲತ್‌ನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಅಜ್ಜಯ್ಯ, ಉಪ ಸಂರಕ್ಷಣಾಧಿಕಾರಿ ಶಿರಸಿ ವಿಭಾಗ, ಕಾಳಿ ಹುಲಿ ಯೋಜನೆ ಅಧಿಕಾರಿ ದಾಡೇÃಲಿ, ನಿಲೇಶ ಕುಮಾರ ಮತ್ತು ತನಿಕಾ ತಂಡದ ಉಪ ಸಂರಕ್ಷಣಾಧಿಕಾರಿ ಅಜೀಜ್ ಅವರುಗಳ ಉಪಸ್ಥಿತಿಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶಿರಸಿಯಲ್ಲಿ ಇಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್ ಕಾರ್ಯಕ್ರಮದಲ್ಲಿ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಸಲ್ಲಿಸಿದ ಜಿ.ಪಿ.ಎಸ್ ಮಾನದಂಡದ ಅಡಿಯಲ್ಲಿ ಸಾಗುವಳಿಗೆಗೆ ಆತಂಕ ಮಾಡಲಾಗದು, ಅರ್ಜಿಸಲ್ಲಿಸಿದವರ ಮೇಲೆ ವಿನಾಕಾರಣ ಭೂಕಬಳಿಕೆ ನಿಷೇಧ ಕಾಯ್ದೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದನ್ನ ನಿಯಂತ್ರಿಸಲಾಗುವುದು, ಒಕ್ಕಲೇಬ್ಬಿಸುವ ಪ್ರಕ್ರಿಯೆ ಮೂಲಕ ನೋಟಿಸ್ ನೀಡುವುದನ್ನು ಪರೀಶಿಲಿಸಿ ಕ್ರಮ ತೆಗೆದುಕೊಳ್ಳಲಾಗುವುದು, ಕಾಯ್ದೆಯಲ್ಲಿ ಅರ್ಜಿ ನೀಡಿ, ಜಿ.ಪಿ.ಎಸ್ ಆಗದೆ ಇರುವಂತಹ ಅತಿಕ್ರಮಣದಾರರಿಗೆ ಸಾಗುವಳಿಗೆ ಆತಂಕ ಮಾಡದಂತೆ ನೀರ್ದೇಶನ ನೀಡುವುದು, ಅರಣ್ಯವಾಸಿಗಳಿಗೂ ಅರಣ್ಯ ಇಲಾಖೆ ಉಚಿತವಾಗಿ ಗಿಡ ವಿತರಣೆ ಮಾಡುವುದು ಮತ್ತು ಸಾರ್ವಜನಿಕ ರಸ್ತೆ ಪಕ್ಕ ಆತಂಕಕಾರಿ ಗಿಡ ತೆಗೆಯುವ ಬಗ್ಗೆ ಕ್ರಮ ಜರುಗಿಸಲಾಗುವುದು ಮುಂತಾದ ಗಂಭೀರ ಸಮಸ್ಯೆಗಳಿಗೆ ಉತ್ತರಿಸಲಾಯಿತು.
ಅದಾಲತ್‌ನಲ್ಲಿ ಹೋರಾಟಗಾರರ ವೇದಿಕೆಯ ಪದಾಧಿಕಾರಿಗಳಾದ ಪ್ರಧಾನ ಸಂಚಾಲಕ ಜೆ.ಎಮ್ ಶೆಟ್ಟಿ ಅಚವೆ, ವಿವಿಧ ತಾಲೂಕು ಅಧ್ಯಕ್ಷರುಗಳಾದ ರಮಾನಂದ ನಾಯ್ಕ, ಭೀಮ್‌ಶಿ ವಾಲ್ಮೀಕಿ, ಶಿವಾನಂದ ಜೋಗಿ, ಮಂಜುನಾಥ ಮರಾಠಿ, ಹರಿಹರ ನಾಯ್ಕ, ಓಮಂಕಾರ, ಬಾಲಚಂದ್ರ ಶೆಟ್ಟಿ, ಸಂತೋಷ ಗಾವಡಾ, ಜಗದೀಶ ಶೆಟ್ಟಿ ಮುಂಡಗೋಡ್, ಮಂಜುನಾಥ ನಾಯ, ಮಹೇಶ ನಾಯ್ಕ ಸಾಲ್ಕೋಡ, ಟಿಪ್ಪು ನಾಯ್ಕ ಮುಂತಾದವರು ಸಮಸ್ಯೆಗಳನ್ನ ಪ್ರಸ್ತಾಪ ಮಾಡಿದರು.
ತೀವ್ರ ಆಕ್ರೋಶ: ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂಧಿಗಳು ಬಡ ಅತಿಕ್ರಮದಾರರಿಗೆ ಒಂದು ನೀತಿ, ಶ್ರೀಮಂತ ಅತಿಕ್ರಮದಾರರಿಗೆ ಇನ್ನೊಂದು ನೀತಿ, ಅನುಸರಿಸಿ ತಾರತಮ್ಯ ಮಾಡುದಲ್ಲದೇ ಕಾನೂನಿಗೆ ವ್ಯಕ್ತಿರಿಕ್ತವಾಗಿ ಅರಣ್ಯವಾಸಿಗಳ ವಿರುದ್ಧ ದೌರ್ಜನ್ಯ ಎಸುಗುವ ಕುರಿತು ಜಿಲ್ಲಾದ್ಯಂತ ಆಗಮಿಸಿದ ಹೋರಾಟಗಾರರು ಅದಾಲತ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆನೆ...ಮಂಗಾ...ಕರಡಿ....!
ವನ್ಯ ಪ್ರಾಣಿಗಳಾದ ಆನೆ, ಮಂಗಾ, ಕರಡಿ ಸಾಗುವಳಿ ಕ್ಷೇತ್ರಕ್ಕೆ ಅಕ್ರಮ ಪ್ರವೇಶ ಮಾಡಿ ಬೆಳೆ ನಷ್ಟ ಮಾಡುತ್ತಿರುವುದಲ್ಲದೆ. ಅರಣ್ಯವಾಸಿಗಳ ಮೇಲು ಹಲ್ಲೆ ಜರಗುತಿರುವುದು ಅರಣ್ಯ ಇಲಾಖೆ ನಿಯಂತ್ರಿಸಿರುವುದಕ್ಕೆ ತೀವ್ರ ಆಕ್ರೋಶ ಅದಾಲತ್‌ನಲ್ಲಿ ಪ್ರಸ್ತಾಪಕ್ಕೆ ಬಂದವು.