ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್ ನಲ್ಲಿ ಸಮರ್ಥ ರಾವ್ ಚಾಂಪಿಯನ್.

ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್ ನಲ್ಲಿ ಸಮರ್ಥ ರಾವ್ ಚಾಂಪಿಯನ್.

Sat, 29 Jun 2024 22:46:37  Office Staff   SO News

ಹೊನ್ನಾವರ :  2024 ರ ಅಖಿಲ ಭಾರತ ವಿಶೇಷ ಚೇತನರ ಫಿಡೆ ರೇಟೆಡ್ ಚಾಂಪಿಯನ್‌ಶಿಪ್ ನಲ್ಲಿ ಹೊನ್ನಾವರದ ಸಮರ್ಥ ಜೆ.ರಾವ್ ಚಾಂಪಿಯನ್ ಆಗುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಜೂನ್ 24ರಿಂದ 28 ರವರೆಗೆ ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ವಿಶೇಷ ಚೇತನರ ಚೆಸ್ ಫೆಡರೇಶನ್ ಆಶ್ರಯದಲ್ಲಿ  ಈ ಪಂದ್ಯಾವಳಿ ಜರುಗಿತ್ತು. ಜೆ ಆರ್ ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಟಾಟಾ ಸ್ಟೀಲ್ 4ನೇ ಅಖಿಲ ಭಾರತ ವಿಶೇಷ ಚೇತನರ ಪಿಡೇ ರೇಟೆಡ್ ಚೆಸ್ ಚಾಂಪಿಯನ್‌ಶಿಪ್ ನಡೆದಿತ್ತು. ಮುಕ್ತ ವಿಭಾಗದ 9 ಸುತ್ತುಗಳಲ್ಲಿ 7.5 ಅಂಕಗಳನ್ನು ಗಳಿಸಿ ಹೊನ್ನಾವರದ ಸಮರ್ಥ ಪ್ರಥಮ ಸ್ಥಾನ ಪಡೆದಿದ್ದಾರೆ.


Share: