ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರೈಲು ಬಡಿದು ವ್ಯಕ್ತಿಯ ದೇಹದಿಂದ ಬೇರ್ಪಟ್ಟ ಕೈ; ಭಟ್ಕಳ ರೈಲುನಿಲ್ದಾಣದಲ್ಲಿ ನಡೆದ ಘಟನೆ

ರೈಲು ಬಡಿದು ವ್ಯಕ್ತಿಯ ದೇಹದಿಂದ ಬೇರ್ಪಟ್ಟ ಕೈ; ಭಟ್ಕಳ ರೈಲುನಿಲ್ದಾಣದಲ್ಲಿ ನಡೆದ ಘಟನೆ

Thu, 11 Jul 2024 02:26:06  Office Staff   SOnews

 

ಭಟ್ಕಳ:  ರೈಲ್ವೇ ಪ್ಲಾಟ್ಫಾರ್ಮ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ರೈಲು ಬಡಿತಕ್ಕೆ ಕೈಯನ್ನು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಹೆಬಳೆ ಗ್ರಾಪಂ ವ್ಯಾಪ್ತಿಯ ತೆಂಗಿನಗುಂಡಿ ನಿವಾಸಿ ದಾಸ ಈರಯ್ಯ ಮೊಗೆರ್ (42) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ದಾಸರ ಕೈ ತುಂಡಾಗಿದ್ದು, ತಲೆಗೂ ಗಾಯವಾಗಿದೆ. ಕೂಡಲೇ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ಲಾಟ್ಫಾರ್ಮ್ನಲ್ಲಿ ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಹೋಗುವ ರೈಲು ಭಟ್ಕಳ ರೈಲುನಿಲ್ದಾಣಕ್ಕೆ ಬಂದಾಗ ಈ ಘಟನೆ ನಡೆದಿದೆ.  

ಘಟನೆಗೆ ಸಂಬಂಧಿಸಿದಂತೆ, ರೈಲ್ವೇ ಅಧಿಕಾರಿಗಳು ದಾಸ ಅವರ ಬಳಿ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಅಥವಾ ಪ್ರಯಾಣಕ್ಕೆ ಯಾವುದೇ ಟಿಕೆಟ್ ಇರಲಿಲ್ಲ ಎಂದು ಹೇಳುತ್ತಾರೆ. ರೈಲಿನೊಳಗಿನ ರೈಲ್ವೇ ಹಳಿ ಮೇಲೆ ಬಿದ್ದುಕೊಂಡಿದ್ದ ದಾಸ ‌ಈರಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಾಗಿದೆ.

ಕೂಡಲೇ ರೈಲ್ವೆ ಅಧಿಕಾರಿಗಳು ಆಂಬ್ಯುಲೆನ್ಸ್ ಸಹಾಯದಿಂದ ಅವರನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದು, ಅಲ್ಲಿಂದ ಪ್ರಥಮ ಚಿಕಿತ್ಸೆ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ನಂತರ, ರೈಲಿನ ಕೆಳಗೆ ಹಳಿಗಳ ಮೇಲೆ ಸಿಲುಕಿರುವ ದಾಸ ಅವರ ಮೊಬೈಲ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರ ಕೈ ಹಳಿಯಿಂದ ಹೊರಗುಳಿದಿರುವುದು ಮತ್ತು ದಾಸ ರೈಲಿನ ಕೆಳಗೆ ಹಳಿಗಳ ಮೇಲೆ ಮಲಗಿರುವುದು ಕಂಡುಬರುತ್ತದೆ. ಘಟನೆಯ ಸಂಪೂರ್ಣ ದೃಶ್ಯ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ, ಆದರೆ ರೈಲ್ವೆ ಅಧಿಕಾರಿಗಳು ಸಿಸಿಟಿವಿ ನೀಡಲು ಸಿದ್ಧರಿಲ್ಲ ಮತ್ತು ಮಾಧ್ಯಮಗಳಿಗೆ ತೋರಿಸಲು ಸಿದ್ಧರಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲು ಅಥವಾ ನೀಡಲು ಹಿರಿಯ ಅಧಿಕಾರಿಗಳಿಗೆ ಮಾತ್ರ ಅಧಿಕಾರವಿದೆ ಎಂದು ಸೆಂಟ್ರಲ್ ರೈಲ್ವೆ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದು ಪ್ರಸ್ತುತ ಸಿಆರ್ಪಿಎಫ್ ಇನ್ಸ್ಪೆಕ್ಟರ್ ರಜೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.

 


Share: