ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸರ್ವೋಚ ಯಾಲಯವು ನೀಡಿದ್ದ ಮಧ್ಯಂತರ ಜಾಮೀನು ಅವಧಿ ಶನಿವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ಅವರು ರವಿವಾರ ಮಧ್ಯಾಹ್ನ ಇಲ್ಲಿಯೆ ತಿಹಾರ್ ಜೈಲಿನಲ್ಲಿ ಶರಣಾದರು. ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲು ಅವರಿಗೆ ಮೇ 10ರಂದು ಜಾಮೀನು ಮಂಜೂರು ಮಾಡಲಾಗಿತ್ತು.
ಶರಣಾಗುವ ಮುನ್ನ ರಾಜ್ ಘಾಟ್‌ನ ಮಹಾತ್ಮಾ ಗಾಂಧಿ ಸ್ಮಾರಕಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. ಕನಾಟ್ ಪ್ಲೇಸ್‌ನ ಹನುಮಾನ್ ಮಂದಿರಕ್ಕೂ ಅವರು ಭೇಟಿ ನೀಡಿದರು. ನಂತರ ಪಕ್ಷದ ಕಚೇರಿಯಲ್ಲಿ ಆಪ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರವಾಲ್, ನಾನು ಜೈಲಿಗೆ ಮರಳುತ್ತಿದ್ದೇನೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೆ ಎನ್ನುವುದಕ್ಕಲ್ಲ, ಸರ್ವಾಧಿಕಾರದ ವಿರುದ್ಧ ಧ್ವನಿಯೆತ್ತಿದ್ದಕ್ಕಾಗಿ. ಸರ್ವೋಚ್ಚ ನ್ಯಾಯಾಲಯವು ನನಗೆ 21 ದಿನಗಳ ಜಾಮೀನು ನೀಡಿತ್ತು. ಈ 21 ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಒಂದು ನಿಮಿಷವನ್ನೂ ನಾನು ವ್ಯರ್ಥಗೊಳಿಸಲಿಲ್ಲ. ದೇಶವನ್ನು ಉಳಿಸಲು ನಾನು ಪ್ರಚಾರ ಮಾಡಿದ್ದೇನೆ. ಆಪ್ ಮುಖ್ಯವಲ್ಲ,ಅದು ನಂತರದ್ದು, ದೇಶವು ಮೊದಲು' ಎಂದು ಹೇಳಿದರು
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿರುವ ಎಲ್ಲ ಚುನಾವಣೋತ್ತರ ಸಮೀಕ್ಷೆಗಳನ್ನು 'ನಕಲಿ' ಎಂದು ಬಣ್ಣಿಸಿದ ಕೇಜ್ರವಾಲ್, ಅವರು (ಎನ್‌ಡಿಎ) ಜೂ.4ರಂದು ಸರಕಾರ ರಚಿಸುವುದಿಲ್ಲ. ಈ ಚುನಾವಣೋತ್ತರ ಸಮೀಕ್ಷೆಗಳು ನಿಮ್ಮನ್ನು ಖಿನ್ನತೆಗೆ ತಳ್ಳಲು ಮಾನಸಿಕ ತಂತ್ರಗಳಾಗಿವೆ ಎಂದರು.
ಜೈಲಿಗೆ ತೆರಳುವ ಮುನ್ನ ಆಪ್ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ ಎಕ್ಸ್ ಸಂದೇಶದಲ್ಲಿ ಕೇಜ್ರವಾಲ್, 'ನಿಮ್ಮ ಕಾಳಜಿಯನ್ನು ವಹಿಸಿ, ನಾನು ಜೈಲಿನಿಂದಲೇ ನಿಮ್ಮೆಲ್ಲರ ಕಾಳಜಿಯನ್ನು ವಹಿಸುತ್ತೇನೆ. ನೀವು ಖುಷಿಯಾಗಿದ್ದರೆ ನಿಮ್ಮ ಕೇಜ್ರವಾಲ್ ಕೂಡ ಜೈಲಿನಲ್ಲಿ ಖುಷಿಯಾಗಿರುತ್ತಾರೆ' ಎಂದು ಹೇಳಿದ್ದರು.
ಈ ಹಿಂದೆ ಕೇಜ್ರವಾಲ್ ಆರೋಗ್ಯ ತಪಾಸಣೆಗಾಗಿ ತನ್ನ ಜಾಮೀನನ್ನು ಒಂದು ವಾರ ವಿಸ್ತರಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯು ಬುಧವಾರ ನಿರಾಕರಿಸಿದ ಬಳಿಕ ಅವರು ವೈದ್ಯಕೀಯ ಕಾರಣದಿಂದ ಮಧ್ಯಂತರ ಜಾಮೀನು ಕೋರಿ ವಿಶೇಷ ಸಿಬಿಐ-ಈ.ಡಿ.ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶನಿವಾರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ತನ್ನ ಆದೇಶವನ್ನು ಜೂ.5ಕ್ಕೆ ಕಾಯ್ದಿರಿಸಿದ್ದಾರೆ.