ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದ ಹೆದ್ದಾರಿಯಲ್ಲಿ ಮತ್ತೆ ಮಳೆ ನೀರಿನ ಕಾಟ.

ಭಟ್ಕಳದ ಹೆದ್ದಾರಿಯಲ್ಲಿ ಮತ್ತೆ ಮಳೆ ನೀರಿನ ಕಾಟ.

Fri, 05 Jul 2024 04:48:42  Office Staff   SO News

ಭಟ್ಕಳ :  ರಾಷ್ಟ್ರೀಯ ಹೆದ್ದಾರಿ 66ರ ರಂಗಿನಕಟ್ಟೆ ಬಳಿ ಮತ್ತೆ  ಮಳೆ ನೀರು ತುಂಬಿ ನಾಗರಿಕರಿಗೆ, ವಾಹನ ಸವಾರರಿಗೆ  ತೊಂದರೆಯಾಗುತ್ತಿದೆ.

ಮಳೆ ಆರ್ಭಟಕ್ಕೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಂಗೀಕಟ್ಟೆ ಪ್ರದೇಶದಲ್ಲಿ ಹೆದ್ದಾರಿ ಈ ಬಾರಿಯೂ ಹೊಳೆಯಾಗಿದೆ ಹೀಗಾಗಿ  ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷ ಕೂಡ ಇಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ಜನರಿಗೆ, ವಾಹನ ಸವಾರರಿಗೆ ತೊಂದರೆಯಾದಾಗ ಪ್ರತಿಭಟನೆ ನಡೆಸಲಾಗಿತ್ತು. ಸಚಿವರಾದ ಮಾಂಕಾಳ್ ವೈದ್ಯ ಅವರು ಸ್ಥಳಕ್ಕೆ ಆಗಮಿಸಿ ಆವಾಜ್ ಹಾಕಿದ್ದರು.
 ಆದರೂ ಸಮರ್ಪಕವಾಗಿ ಕೆಲಸವನ್ನ ಮಾಡದೇ ಇರುವುದರಿಂದ ಮತ್ತೆ ಪರಿಸ್ಥಿತಿ ಪುನರಾವರ್ತನೆಯಾಗಿದೆ.

ಅದೇ ರೀತಿ ತಾಲೂಕಿನ ಕೋಗ್ತಿ ರೋಡ್, ಡೊಂಗರಫಳ್ಳಿ, ಆಝಾದ್‌ನಗರ, ಕಾರಗದ್ದೆ ಭಾಗದ ಚರಂಡಿಯಲ್ಲಿ  ಮಣ್ಣು, ಕಲ್ಲನ್ನು ತುಂಬಿರುವುದರಿಂದ  ಕೊಚ್ಚೆಯಾಗಿದೆ. ಜಾಮೀಯಾಬಾದ್‌ನಲ್ಲಿಯೂ ಮನೆಗೆ  ಮಳೆ ನೀರು ನುಗ್ಗಿ ತೊಂದರೆಯಾಗಿದೆ.


Share: