ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ದ್ವಿತೀಯ ಪಿಯು ಪರೀಕ್ಷೆ; ಅಂಜುಮನ್ ಪಿ.ಯು ಮಹಿಳಾ ಕಾಲೇಜ್ ಶೇ.97 ಫಲಿತಾಂಶ

ಭಟ್ಕಳ: ದ್ವಿತೀಯ ಪಿಯು ಪರೀಕ್ಷೆ; ಅಂಜುಮನ್ ಪಿ.ಯು ಮಹಿಳಾ ಕಾಲೇಜ್ ಶೇ.97 ಫಲಿತಾಂಶ

Wed, 10 Apr 2024 21:50:07  Office Staff   SOnews

ಭಟ್ಕಳ: ಅಂಜುಮನ್ ಹಾಮಿಯೆ ಮಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಪದವಿ ಪೂರ್ವ ಮಹಿಳಾ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಶೇ.97 ದಾಖಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ೩೬೯ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು ಇದರಲ್ಲಿ ಕಲಾ ವಿಭಾಗದಲ್ಲಿ 81,  ವಾಣಿಜ್ಯ ವಿಭಾಗದಲ್ಲಿ 185 ಹಾಗೂ ವಿಜ್ಞಾನ ವಿಭಾಗದಲ್ಲಿ 91 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಕಲಾ ವಿಭಾಗದಲ್ಲಿ ರಮ್ಲಾ ಇರಮ್ 573 ಅಂಕಗಳೊಂದಿಗೆ ಶೇ. 95.5%, ವಾಣಿಜ್ಯ ವಿಭಾಗದಲ್ಲಿ ರಮೀನ್ ಕರನಿ 583 ಅಂಕ ಪಡೆದು ಶೇ. 97.16% ಹಾಗೂ ವಿಜ್ಞಾನ ವಿಭಾಗದಲ್ಲಿ ಝೀಯಾ ಅಂಜುಮ್ 586 ಅಂಕ ಪಡೆದು ಶೇ.97.66 % ಫಲಿತಾಂಶ ದಾಖಲಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

100 ವಿದ್ಯಾರ್ಥಿಗಳು ಉನ್ನತ ಶ್ರೇಣಿ (Distinction) ನಲ್ಲಿ, 212 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 37 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 8 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವರ್ಗ ಅಭಿನಂದಿಸಿದೆ.


Share: