ಭಟ್ಕಳ: ಅರಬ್ಬಿ ಸಮುದ್ರದಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟಿದ್ದು, ಮತ್ತೋರ್ವ ಯುವಕ ನಾಪತ್ತೆಯಾದ ಘಟನೆ ಸೋಡಿಗದ್ದೆ ಬಳಿಯ ಹಡಿನ ಮುಲ್ಲಿ ಹಿತ್ತಲು ಸಮುದ್ರದಲ್ಲಿ ರವಿವಾರ ಸಂಜೆ 6 ಗಂಟೆಯ ಸುಮಾರಿಗೆ ನಡೆದಿದೆ. ಮೃತ ಬಾಲಕನನ್ನು ಇನಾಮುಲ್ಲಾ ಆಸ್ಕೆರಿ (14) ಮತ್ತು ನಾಪತ್ತೆಯಾಗಿರುವ ಯುವಕನನ್ನು ಹಾಫಿಝ್ ಕಾಶಿಪ್ ನದ್ವಿ (22) ಎಂದು ಗುರುತಿಸಲಾಗಿದೆ.
ಸುಮಾರು ಎಂಟ ರಿಂದ ಹತ್ತು ಮಂದಿ ಸಮುದ್ರಕ್ಕೆ ಪ್ರವಾಸಕ್ಕೆ ಬಂದಿದ್ದು, ಈ ಪೈಕಿ ಇನಾಮುಲ್ಲಾ ಆಸ್ಕೆರಿ ಮತ್ತು ಹಾಫಿಝ್ ಕಾಶಿಪ್ ನದ್ವಿ ಈಜಲು ಇಳಿದಿದ್ದರು ಎಂದು ತಿಳಿಸಿದ್ದಾರೆ.
ಬಾಲಕ ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಅರಿತ ಸ್ಥಳೀಯ ಮೀನುಗಾರರು ತಕ್ಷಣ ಆತನಿಗೆ ಸಹಾಯ ಮಾಡಲು ಮುಂದೆ ಬಂದರು ಬಾಲಕನನ್ನು ದಡಕ್ಕೆ ತಂದು ರಕ್ಷಿಸಲು ಪ್ರಯತ್ನಿಸಲಾಯಿತು, ಆದರೆ ಆಸ್ಪತ್ರೆಗೆ ತಲುಪುವ ಮೊದಲು ಬಾಲಕ ಮೃತಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ನಾಪತ್ತೆಯಾದ ಯುವಕನಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ