ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಳಕೆ ನ್ಯಾಯಬೆಲೆ ಅಂಗಡಿಯಲ್ಲಿ ಯುವಕನಿಗೆ ಹಾವು ಕಡಿತ; ಪ್ರಾಣಾಪಾಯದಿಂದ ಪಾರು

ಬೆಳಕೆ ನ್ಯಾಯಬೆಲೆ ಅಂಗಡಿಯಲ್ಲಿ ಯುವಕನಿಗೆ ಹಾವು ಕಡಿತ; ಪ್ರಾಣಾಪಾಯದಿಂದ ಪಾರು

Mon, 01 Jul 2024 02:33:41  Office Staff   SOnews

 

ಭಟ್ಕಳ: ಭಟ್ಕಳ ತಾಲೂಕಿನ ಬೆಳಕೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಡಿತರ ಅಂಗಡಿಯಲ್ಲಿ ಕೆಸಲ ನಿರ್ವಹಿಸುತ್ತಿದ್ದ ಯುವಕನಿಗೆ ನಾಗರ ಹಾವೊಂದು ಕಚ್ಚಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರವಿವಾರ ವರದಿಯಾಗಿದೆ.

ಹಾವು ಕಡಿತಕ್ಕೊಳಗಾದ ಯುವಕನನ್ನು ಹೊನ್ನಪ್ಪ ನಾರಾಯಣ ನಾಯ್ಕ ಎಂದು ಗುರುತಿಲಸಾಗಿದೆ. ಈತ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ಮಾಡುತ್ತಿರುವಾಗ ಅಕ್ಕಿ ಚೀಲದ ಬಳಿ ಇದ್ದ ನಾಗರ ಹಾವು ಕಚ್ಚಿದೆ ಎಂದು ಹೇಳಲಾಗುತ್ತಿದೆ. ತಕ್ಷಣವೇ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದು ಪ್ರಾಣಾಯಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ವಿಡಿಯೋ ವೈರಲ್: ನ್ಯಾಯಬೆಲೆಯಲ್ಲಿ ಅಂಗಡಿಯಲ್ಲಿ ಯುವಕನಿಗೆ ನಾಗರ ಹಾವು ಕಚ್ಚಿದ್ದು ನಂತರ ಅಲ್ಲೇ ಇದ್ದ ಯುವಕನೋರ್ವ ಹಾವನ್ನು ಹಿಡಿದು ಅದನ್ನು ರಕ್ಷಣೆ ಮಾಡಿದ್ದಾನೆ ಸಧ್ಯ ಈ ವಿಡಿಯೋ ಭಟ್ಕಳದ ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ವೈರಲ್ ಆಗುತ್ತಿದ್ದು ನಾಗರ ಹಾವು ಹಿಡಿದ ಯುವಕನ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Share: