ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಅಗತ್ಯ ಕ್ರಮ: ಡಾ.ನಯನ

ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಅಗತ್ಯ ಕ್ರಮ: ಡಾ.ನಯನ

Thu, 21 Mar 2024 06:54:01  Office Staff   SO News

ಭಟ್ಕಳ : ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ನಿಮಿತ್ತ ಚುನಾವಣೆ ಸಂಬಂಧಿತ ಯಾವುದೇ ವಿಷಯದ ಬಗ್ಗೆ ದೂರು ನೀಡಲು ಭಟ್ಕಳ ತಹಸೀಲ್ದಾರ್ ಕಚೇರಿಯಲ್ಲಿ
24x7 ಕಂಟ್ರೋಲ್ ರೂಮ್‌ನ್ನು ತೆರೆಯಲಾಗಿದ್ದು ಇದು  ದಿನದ 24 ಗಂಟೆಯು ಕೂಡ ಕಾರ್ಯನಿರ್ವಹಿಸಲಿದೆ ಇದೆ ಎಂದು ಸಹಾಯಕ ಆಯುಕ್ತೆ ಡಾ. ನಯನ ಹೇಳಿದರು 

ಅವರು ತಾಲೂಕಾ ಆಡಳಿತ ಸೌಧದಲ್ಲಿರುವ ಸಹಾಯಕ ಆಯುಕ್ತರ ಕಚೇರಿಯಲ್ಲಿ ಎಲ್ಲಾ ಪಕ್ಷದ ಮುಖಂಡರೊಂದಿಗೆ ಕರದೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸಹಾಯಕ ಆಯುಕ್ತರು ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದು ಈ ತಂಡದಲ್ಲಿ ಭಟ್ಕಳ ತಹಸೀಲ್ದಾರ್ ನಾಗರಾಜ ನಾಯ್ಕಡ್ ಹೊನ್ನಾವರ ತಹಶೀಲ್ದಾರ್ ರವಿರಾಜ್ ಧಿಕ್ಷಿತ್ ಭಾಗಿಯಾಗಿದ್ದಾರೆ.

ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ 12 ಎಪ್ರಿಲ್ ರಂದು ನೋಟಿಫಿಕೇಶನ್ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಎ. 19 ಕೊನೆಯ ದಿನ. ಎ. 20 ನಾಮಪತ್ರ ಪರಿಶೀಲನೆ ಎ. 22 ನಾಮ ಪತ್ರ ಹಿಂಪಡೆಯಲು ಕೊನೆಯ ದಿನ ವಾಗಿದ್ದು, ಮೇ7 ರಂದು ಮತದಾನ ನಡೆಯಲಿದೆ , ಜೂನ್ 4 ರಂದು ಜೂನ್ ಮತ ಎಣಿಕೆ ನಡೆಯಲಿದೆ ಎಂದರು.

ಭಟ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ , ಒಟ್ಟು 2,25,128 ಮತದಾರರಿದ್ದು, 1,14,053 ಪುರುಷರು, 1,11,075 ಮಹಿಳೆಯರು, ಪಿಡಬ್ಲ್ಯೂಡಿ 3,067, ಹಾಗೂ 18 ವರ್ಷ ಮೇಲ್ಪಟ್ಟವರು 1,898 ಒಟ್ಟು 248 ಮತಗಟ್ಟೆಗಳನ್ನು ತೆರೆಯಲಾಗುವುದು ಇದರಲ್ಲಿ 37 ಸೂಕ್ಷ್ಮ ಮತಗಟ್ಟೆ 37 ಹಾಗೂ 9 ಅತಿ ಸೂಕ್ಷ್ಮ ಮತಗಟ್ಟೆ ತೆರೆಯಲಾಗಿದೆ ಎಂದರು.

ಸದ್ಯ ಮಾದರಿ ನೀತಿ ಸಂಹಿತೆ ಮುಕ್ತಾಯವಾಗುವುವ ತನಕ ಯಾವುದೇ ಸಭೆ,ಸಮಾರಂಭಗಳು ನಡೆಸುವುದಾಗಲಿ ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸುವಾದರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅದಕ್ಕೆ ಅನುಮತಿ ಪಡೆಯಬೇಕು. ಸದ್ಯ ಯಾವುದು ಅನುಮತಿ ಪಡೆಯಲು ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಮೀಪ ಅನುವು ಮಾಡಿ ಕೊಡಲಾಗಿದೆ ಹಾಗೂ ಚುನಾವಣೆ ಸಂಬಂಧಿತ ಯಾವುದೇ ದೂರುಗಳನ್ನು ನೀಡಲು ಭಟ್ಕಳ ತಹಶೀಲ್ದಾರ್ ಕಚೇರಿಯಲ್ಲಿ 24x7 ಕಂಟ್ರೋಲ್ ರೂಮ್‌ನ್ನು ತೆರೆಯಲಾಗಿದ್ದು 08385223722 ನಂಬರಗೆ ಕರೆ ಮಾಡಿ ದೂರು ನೀಡಬಹುದು ಹಾಗೆ ಸಿವಿಜಲ್ ಆಪ್ ನಲ್ಲಿ ಕೂಡ ದೂರು ದಾಖಲು ಮಾಡಬಹುದು ಎಂದರು

ಜತಾಲ್ಲೂಕಿನಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ನಿಟ್ಟಿನಲ್ಲಿ ಪ್ಲೆöÊಯಿಂಗ್ ಸ್ಕಾ÷್ವಡ್, ವೀಡಿಯೋ ಸರ್ವೇಲೆನ್ಸ್ ತಂಡ, ವೀಡಿಯೋ ವೀಕ್ಷಣಾ ತಂಡ, ಅಂಕಿ ಅಂಶ ಪರಿಶೀಲನಾ ತಂಡ, ಸೆಕ್ಟರ್ ಅಧಿಕಾರಿಗಳು, ಲೆಕ್ಕಪತ್ರ ತಂಡ ಸೇರಿದಂತೆ ವಿವಿಧ ತಂಡಗಳಿಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಅವರಿಗೆ ಸೂಕ್ತ ತರಬೇತಿಯನ್ನು ನೀಡಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗರಾಜ ನಾಯ್ಕಡ್ ಉಪಸ್ಥಿತರಿದ್ದರು


Share: